Hezbollah militants should be afraid to go to the toilet: Israel shocked again
Tel-Aviv: ಹಿಜ್ಬುಲ್ಲಾ ಉಗ್ರರು ಮುಂದೆ ಟಾಯ್ಲೆಟಗೆ ಹೋಗಲು ಹೆದರಬೇಕು, ಊಟ ಮಾಡೋಕೆ ಹೆದರ್ಬೇಕು. ಯಾಕೆಂದರೆ ಇನ್ನೂ ಪ್ರಯೋಗ ಮಾಡದ ಅನೇಕ ಸಾಮರ್ಥ್ಯಗಳು ನಮ್ಮ ಬಳಿಯಿದೆ ಎಂದು ಇಸ್ರೇಲ್ ಸೇನೆಯ ಚೀಫ್ ಆಫ್ ದಿ ಜನರಲ್ ಸ್ಟಾಫ್ ಹರ್ಜಿ ಹಲೇವಿ (Chief of the General Staff Harji Halevi) ಹೇಳಿಕೆ ಹಿಜ್ಬುಲ್ಲಾ ಉಗ್ರರಿಗೆ ಮತ್ತೆ ಶಾಕ್ ಕೊಟ್ಟಿದೆ. ಹಿಜ್ಬುಲ್ಲಾ ಉಗ್ರರ ನೆಲೆಯಾಗಿರುವ ಲೆಬನಾನ್ನಲ್ಲಿ ಸಾವಿರಾರು ಪೇಜರ್ ಮತ್ತು ವಾಕಿಟಾಕಿಗಳು ಸ್ಫೋಟಗೊಂಡ ನಂತರ ಇಸ್ರೇಲ್ ಸೇನೆ ಈ ಹೇಳಿಕೆ ನೀಡಿದೆ.
ಇಸ್ರೇಲ್ ಸೇನೆಯ ಚೀಫ್ ಆಫ್ ದಿ ಜನರಲ್ ಸ್ಟಾಫ್ ಹರ್ಜಿ ಹಲೇವಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಇನ್ನೂ ಪ್ರಯೋಗ ಮಾಡದ ಅನೇಕ ಸಾಮರ್ಥ್ಯಗಳು ನಮ್ಮ ಬಳಿಯಿದೆ. ನಾವು ಶತ್ರುಗಳ ವಿರುದ್ದ ಪ್ರತಿಯೊಂದು ಹಂತದಲ್ಲೂ ಕಾರ್ಯನಿರ್ವಹಿಸುತ್ತೇವೆ. ಇದರಿಂದ ಹಿಜ್ಬುಲ್ಲಾ (Hezbollah) ಉಗ್ರರು ಭಾರೀ ಬೆಲೆ ತೆರಬೇಕಾಗುತ್ತದೆ. ಭವಿಷ್ಯದ ಕಾರ್ಯಾಚರಣೆಗಳಿಗಾಗಿ ತಯಾರಿ ನಡೆಸುತ್ತಿದ್ದೇವೆ. ಪ್ರತಿ ಹಂತದಲ್ಲಿ ಹೇಗೆ ಕಾರ್ಯಾಚರಣೆ ನಡೆಸಬೇಕು ಎನ್ನುವುದನ್ನು ನಾವು ಯೋಜಿಸಿದ್ದೇವೆ ಎಂದು ಹೇಳಿದ್ದಾರೆ.
ಈಗಾಗಲೇ ಇಸ್ರೇಲ್ (Israel) ನಡೆಸಿದೆ ಎನ್ನಲಾಗಿರುವ ಈ ಸ್ಪೋಟಗಳಿಂದ ಹಿಜ್ಬುಲ್ಲಾ ಉಗ್ರ ಸಂಘಟನೆಗೆ ತೀವ್ರ ಹಿನ್ನಡೆಯುಂಟಾಗಿದೆ. ಸಂಘಟನೆಯ ಅನೇಕ ಸದಸ್ಯರಿಗೆ ಗಂಭೀರ ಗಾಯಗಳಾಗಿವೆ. ಈ ಮಧ್ಯೆ ಇಡೀ ಸಂಘಟನೆಯ ಸಂವಹನ ಜಾಲವೇ ನಾಶವಾಗಿದೆ. ಈಗಾಗಲೇ ಶಾಕ್ನಲ್ಲಿರುವ ಹಿಜ್ಬುಲ್ಲಾ ಉಗ್ರರಿಗೆ ಇಸ್ರೇಲ್ ಸೇನೆಯ ಮುಖ್ಯಸ್ಥರ ಈ ಹೇಳಿಕೆ ಮತ್ತಷ್ಟು ಭಯ ಹುಟ್ಟಿಸಿದೆ.
ಮತ್ತೆ ಯಾವೆಲ್ಲಾ ಉಪಕರಣಗಳು ಸ್ಪೋಟಗೊಳ್ಳುತ್ತವೆಯೋ ಎಂಬ ಆತಂಕದಲ್ಲಿ ಹಿಜ್ಬುಲ್ಲಾ ಉಗ್ರರಿದ್ದಾರೆ. ಲೆಬನಾನ್ ಮತ್ತು ಸಿರಿಯಾದಲ್ಲಿ ಹಿಜ್ಬುಲ್ಲಾ ಸದಸ್ಯರು ಬಳಸುತ್ತಿದ್ದ ಪೇಜರ್ಗಳು ಸ್ಫೋಟಗೊಂಡಿದ್ದವು (Pager Blast). ನಂತರ ಸಂವಹನಕ್ಕಾಗಿ ಬಳಕೆ ಮಾಡುತ್ತಿದ್ದ ವಾಕಿಟಾಕಿಗಳು ಸ್ಫೋಟಗೊಂಡಿದ್ದವು. ಈ ನಡುವೆ ಸೋಲಾತ ಉಪಕರಣಗಳು ಕೂಡಾ ಸ್ಪೋಟಗೊಳ್ಳುತ್ತಿವೆ ಎನ್ನಲಾಗಿದೆ.
ಭಾರತ ಎಚ್ಚರಿಕೆ: ಹೊಸ ಯುದ್ದ ತಂತ್ರವನ್ನು ಇಸ್ರೇಲ್ ಹಿಜ್ಬುಲ್ಲಾ ಉಗ್ರರ ವಿರುದ್ದ ಪ್ರಯೋಗ ಮಾಡಿದೆ. ಇದು ಭಾರತಕ್ಕೂ ಎಚ್ಚರಿಕೆ ನೀಡಿದ್ದು, ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ ವಸ್ತುಗಳ ಮೇಲೆ ನಿಗಾವಹಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಚೀನಾದಿಂದ ಎಲೆಕ್ಟ್ರಾನಿಕ್ (China Electronics) ವಸ್ತುಗಳನ್ನು ಭಾರತ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತದೆ.