- ರಂಜಾನ್ ಮುನ್ನ ಡ್ರೈ ಫ್ರೂಟ್ಸ್ (Israel Iran conflict Dry fruit price increase) ದುಬಾರಿ
- ಇರಾನ್ ಆಮದು ವ್ಯತ್ಯಯ ಪಿಸ್ತಾ, ಅಂಜೂರ, ಖರ್ಜೂರ ದರ ಏರಿಕೆ ಸಾಧ್ಯತೆ
- ಮಧ್ಯಪ್ರಾಚ್ಯ ಉದ್ವಿಗ್ನತೆ ಹೆಚ್ಚಾದರೆ ಮಸಾಲೆ ಮಾರುಕಟ್ಟೆಯ ಮೇಲೂ ಪರಿಣಾಮ
Bengaluru: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್ ಮತ್ತು ಇಸ್ರೇಲ್ ಸಂಘರ್ಷ ದ (Israel-Iran Conflict) ಪರಿಣಾಮ (Israel Iran conflict Dry fruit price increase) ಇದೀಗ ಬೆಂಗಳೂರಿನ ಮಾರುಕಟ್ಟೆಯ ಮೇಲೂ ಸ್ಪಷ್ಟವಾಗಿ ಕಾಣಿಸಿಕೊಳ್ಳತೊಡಗಿದೆ. ವಿಶೇಷವಾಗಿ ಡ್ರೈ ಫ್ರೂಟ್ಸ್ ವ್ಯಾಪಾರದಲ್ಲಿ ಅಲೆಮಾರಿ ಶುರುವಾಗಿದೆ.
ನಗರಕ್ಕೆ ಆಮದು ಆಗುವ ಅಂಜೂರ, ಪಿಸ್ತಾ (Pista) , ಮಾಮ್ರಾ ಬಾದಾಮಿ, ಪೈನ್ ಬೀಜಗಳು (Pine Seed) ಹಾಗೂ ಮಜಾಫತಿ ಖರ್ಜೂರಗಳ ಪ್ರಮುಖ ಭಾಗ ಇರಾನ್‌ನಿಂದಲೇ ಬರುತ್ತದೆ.

ಈ ಹಿನ್ನೆಲೆಯಲ್ಲಿ ಯುದ್ಧ ಪರಿಸ್ಥಿತಿ ಮುಂದುವರಿದರೆ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಬೆಲೆ ಏರಿಕೆ ಅನಿವಾರ್ಯವಾಗುವ ಸಾಧ್ಯತೆ ಇದೆ ಎಂದು ವ್ಯಾಪಾರ ವಲಯ ಎಚ್ಚರಿಸಿದೆ.
ಈಗಾಗಲೇ ಕೆಲವು ಅಂಗಡಿಗಳಲ್ಲಿ ದರ ಏರಿಕೆಯ ಸುಳಿವು ಕಾಣಿಸುತ್ತಿದ್ದು, ಮುಂದಿನ ವಾರಗಳಲ್ಲಿ ಇದರ ಪರಿಣಾಮ ಇನ್ನಷ್ಟು ಸ್ಪಷ್ಟವಾಗಬಹುದು ಎಂಬ ಆತಂಕವೂ ವ್ಯಕ್ತವಾಗಿದೆ.
ರಂಜಾನ್ ಹಬ್ಬದ ಹಿನ್ನಲೆಯಲ್ಲಿ ಖರ್ಜೂರಗಳಿಗೆ ಹೆಚ್ಚುವರಿ ಬೇಡಿಕೆ ಇರುವುದರಿಂದ ವ್ಯಾಪಾರಿಗಳು ಮುಂಚಿತವಾಗಿಯೇ ಹೆಚ್ಚಿನ ಪ್ರಮಾಣದಲ್ಲಿ ಸ್ಟಾಕ್ ಮಾಡಿಕೊಂಡಿದ್ದಾರೆ.
ಮಜಾಫತಿ ಖರ್ಜೂರಗಳು ಸಾಮಾನ್ಯವಾಗಿ ಕೆಜಿಗೆ ಸುಮಾರು 300 ರೂ. ದರದಲ್ಲಿ ಲಭ್ಯವಿದ್ದು, ಹಬ್ಬದ ಸಮಯದಲ್ಲಿ ಬೇಡಿಕೆ ಬಹಳಷ್ಟು ಏರಿಕೆಯಾಗುತ್ತದೆ.
ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳು ಈದ್ ತನಕ ತೊಂದರೆ ಎದುರಾಗುವುದಿಲ್ಲ ಎಂದು ಭರವಸೆ ನೀಡುತ್ತಿದ್ದಾರೆ.
ಆದರೆ ಯುದ್ಧ ಪರಿಸ್ಥಿತಿ ದೀರ್ಘಕಾಲ ಮುಂದುವರಿದರೆ ಹೊಸ ಸರಕುಗಳ ಆಮದು ವಿಳಂಬವಾಗುವ ಸಾಧ್ಯತೆ ಇದ್ದು, ನಂತರದ ಅವಧಿಯಲ್ಲಿ ಕೊರತೆ ಉಂಟಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಬೆಂಗಳೂರಿನ ಕೆಲ ಭಾಗಗಳಲ್ಲಿ ಪಿಸ್ತಾ ಬೆಲೆಯಲ್ಲಿ ಈಗಾಗಲೇ ಸುಮಾರು 200 ರೂ.ವರೆಗೆ ಏರಿಕೆ (Israel Iran conflict Dry fruit price increase) ಕಂಡುಬಂದಿದೆ.
ಬೇಡಿಕೆ ಹೆಚ್ಚಾಗಿದ್ದು, ಲಭ್ಯತೆ ಕಡಿಮೆಯಾಗುತ್ತಿರುವ ಹಿನ್ನೆಲೆ ದರ ಪರಿಷ್ಕರಣೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಇರಾನ್‌ನಿಂದ ಆಮದು ಆಗುವ ಪಿಸ್ತಾ ಕೆಜಿಗೆ 1,800 ರೂ.ರಿಂದ 2,100 ರೂ.ವರೆಗೆ ಮಾರಾಟವಾಗುತ್ತಿದೆ.
ಅಂಜೂರ ಸುಮಾರು 1,600 ರೂ., ಮಾಮ್ರಾ ಬಾದಾಮಿ 2,500 ರೂ., ಪೈನ್ ಬೀಜಗಳು 8,000 ರೂ. ದರದಲ್ಲಿವೆ. ಮುಂದಿನ ದಿನಗಳಲ್ಲಿ ಸರಕು ಸರಬರಾಜು ಸರಿಯಾಗಿ ಆಗದಿದ್ದರೆ ಈ ದರಗಳು ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯನ್ನು ವ್ಯಾಪಾರ ವಲಯ ತಳ್ಳಿಹಾಕಿಲ್ಲ.
ಇರಾನ್‌ನ ಕೇಸರಿಗೂ ಭಾರೀ ಬೇಡಿಕೆ ಇರುವುದರಿಂದ ಅದರ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ಗುಣಮಟ್ಟದ ಕೇಸರಿ ಉತ್ಪಾದಿಸುವ ದೇಶಗಳಲ್ಲಿ ಇರಾನ್ ಪ್ರಮುಖ ಸ್ಥಾನದಲ್ಲಿದೆ.
ಪ್ರಸ್ತುತ ಕೇಸರಿ ಕೆಜಿಗೆ 2.5 ಲಕ್ಷ ರೂ.ರಿಂದ 3 ಲಕ್ಷ ರೂ.ವರೆಗೆ ಮಾರಾಟವಾಗುತ್ತಿದ್ದು, ಪರಿಸ್ಥಿತಿ ಗಂಭೀರವಾದರೆ ಇದು 4 ಲಕ್ಷ ರೂ.ವರೆಗೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಡ್ರೈ ಫ್ರೂಟ್ಸ್ (Dry Fruits) ಮಾತ್ರವಲ್ಲದೆ ಜಾಯಿಕಾಯಿ, ದಾಲ್ಚಿನ್ನಿ, ಸ್ಟಾರ್ ಸೋಂಪು ಸೇರಿದಂತೆ ಕೆಲವು ಮಸಾಲೆ ಪದಾರ್ಥಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಬಂದರು ಕಾರ್ಯಾಚರಣೆಗಳಲ್ಲಿ ವ್ಯತ್ಯಯ ಉಂಟಾದರೆ ಆಮದು-ರಫ್ತು ಚಟುವಟಿಕೆಗಳಿಗೆ ಅಡ್ಡಿ ಉಂಟಾಗಬಹುದು.
ಒಟ್ಟಿನಲ್ಲಿ, ಮಧ್ಯಪ್ರಾಚ್ಯದ ರಾಜಕೀಯ ಅಸ್ಥಿರತೆ ಬೆಂಗಳೂರಿನ ಗ್ರಾಹಕರ ಮೇಲೂ ಆರ್ಥಿಕ ಹೊರೆ ರೂಪದಲ್ಲಿ ಬೀಳುವ ಸೂಚನೆಗಳು ಕಾಣಿಸುತ್ತಿವೆ.
ಹಬ್ಬದ ಕಾಲದ ಬೇಡಿಕೆ, ಜಾಗತಿಕ ಸಂಘರ್ಷ ಹಾಗೂ ಆಮದು ಅವಲಂಬನೆ ಎಲ್ಲ ಸೇರಿ ಡ್ರೈ ಫ್ರೂಟ್ಸ್ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟುಮಾಡುವ ಸಾಧ್ಯತೆ ಇದೆ.
ಸದ್ಯಕ್ಕೆ ಸಾಕಷ್ಟು ದಾಸ್ತಾನು ಇರುವುದರಿಂದ ತಕ್ಷಣದ ಸಂಕಷ್ಟ ಎದುರಾಗದಿದ್ದರೂ, ಯುದ್ಧ ಪರಿಸ್ಥಿತಿ ಶೀಘ್ರ ಶಮನವಾಗದಿದ್ದರೆ ಮುಂದಿನ ವಾರಗಳಲ್ಲಿ ಬೆಲೆ ಏರಿಕೆಯ ಬಿಸಿ ಗ್ರಾಹಕರು ಅನುಭವಿಸಬೇಕಾಗಬಹುದು. ವ್ಯಾಪಾರಿಗಳು ಪರಿಸ್ಥಿತಿಯನ್ನು ನಿಗಾದಲ್ಲಿ ಇಟ್ಟುಕೊಂಡಿದ್ದು, ಮಾರುಕಟ್ಟೆ ಸ್ಥಿರತೆಗೆ ಶೀಘ್ರ ಪರಿಹಾರ ಸಿಗಲಿ ಎಂಬ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : https://vijayatimes.com/kannadigas-return-from-israel-iran-conflict/