Tel Aviv: ಲೆಬನಾನ್ನಲ್ಲಿರುವ (Lebanon) ಉಗ್ರರ ನೆಲೆಗಳ ಮೇಲೆ ಇಸ್ರೇಲ್ ಭೀಕರ (Israel is terrible) ವೈಮಾನಿಕ ದಾಳಿ ನಡೆಸಿದೆ. 2006ರ ಇಸ್ರೇಲ್-ಹೆಜ್ಬೊಲ್ಲಾಹ್ (Israel-Hezbollah) ಯುದ್ಧದ ನಂತರದ ಅತ್ಯಂತ ಭೀಕರ ವಾಗ್ದಾಳಿ (Terrible attack) ಇದಾಗಿದೆ. ಈ ದಾಳಿ ಇನ್ನಷ್ಟು ಭೀಕರ ಸ್ವರೂಪ ಪಡೆಯುವ ಸಾಧ್ಯತೆಯಿದ್ದು, ದಕ್ಷಿಣ ಮತ್ತು ಪೂರ್ವ (South and East) ಲೆಬನಾನ್ನಲ್ಲಿರುವ ನಾಗರಿಕರು ಕೂಡಲೇ ಸ್ಥಳಾಂತರವಾಗುವಂತೆ ಇಸ್ರೇಲ್ (Israel) ಎಚ್ಚರಿಸಿದೆ.
ಇಸ್ರೇಲ್ (Israel) ನಡೆಸಿದ ವೈಮಾನಿಕ ದಾಳಿಯಲ್ಲಿ 492 ಜನರು ಸಾವನ್ನಪ್ಪಿದ್ದಾರೆ ಮತ್ತು 1,645 ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್ನ ಆರೋಗ್ಯ (Health of Lebanon) ಸಚಿವಾಲಯ ಹೇಳಿದೆ. ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರು ಲೆಬನಾನಿನ ನಾಗರಿಕರು ಸ್ಥಳಾಂತರಗೊಳ್ಳುವಂತೆ ಕರೆ ನೀಡಿದ್ದು, ಈ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ. ನಮ್ಮ ಕಾರ್ಯಾಚರಣೆ ಮುಗಿದ ನಂತರ, ನೀವು ಸುರಕ್ಷಿತವಾಗಿ ನಿಮ್ಮ ಮನೆಗಳಿಗೆ ಹಿಂತಿರುಗಬಹುದು ಎಂದು ಹೇಳಿದ್ದಾರೆ.
ಇಸ್ರೇಲ್ ಸೇನೆ (Israel’s army) ಲೆಬನಾನ್ನ ಹಿಜ್ಬುಲ್ಲಾ ಉಗ್ರರ (Lebanon’s Hezbollah) ವಿರುದ್ದ ಕಾರ್ಯಾಚರಣೆ ತೀವ್ರಗೊಳಿಸಿರುವ ಮಧ್ಯೆಯೇ ಮಧ್ಯಪ್ರಾಚ್ಯದಲ್ಲಿ (Middle East) ಪರಿಸ್ಥಿತಿ ಉದ್ವಿಗ್ನತೆ ಪಡೆದುಕೊಂಡಿದೆ. ಇಸ್ರೇಲ್ ವಾಯುದಾಳಿಗೆ ಪ್ರತೀಕಾರವಾಗಿ ಉತ್ತರ ಇಸ್ರೇಲಿ ಸೇನಾ (North Israeli army) ನೆಲೆಗಳ ಮೇಲೆ ಲೆಬನಾನ್ ಪ್ರತಿ ದಾಳಿ ನಡೆಸಿದೆ. ಇನ್ನೊಂದೆಡೆ ಸಿರಿಯಾ, ಇರಾಕ್, ಇರಾನ್ ದೇಶಗಳು (Syria, Iraq, Iran countries) ಕೂಡಾ ಇಸ್ರೇಲ್ ಮೇಲೆ ದಾಳಿ ಮಾಡುವ ಸಾಧ್ಯತೆಯಿದೆ. ಇತ್ತೀಚಿಗೆ ಇಸ್ರೇಲ್ ನಡೆಸಿದ ಪೇಜರ್, ವಾಕಿಟಾಕಿ ಸ್ಫೋಟಗಳ ನಂತರ ಇರಾನ್ ಬೆಂಬಲಿತ ಲೆಬನಾನ್ ಉಗ್ರರು ಇಸ್ರೇಲ್ (Lebanon terrorists are Israel) ಮೇಲೆ ಸೇಡು ತಿರಿಸಿಕೊಳ್ಳುವ ಪ್ರತಿಜ್ಞೆ ಮಾಡಿದ್ದು, ಇನ್ನೊಂದೆಡೆ ಇಸ್ರೇಲ್ ಕೂಡಾ ಉಗ್ರರನ್ನು (Israel is also a terrorist) ಸಂಪೂರ್ಣವಾಗಿ ನಾಶ ಮಾಡುವ ಸಂಕಲ್ಪ ತೊಟ್ಟಿದೆ. ಹೀಗಾಗಿ ನಿರಂತರವಾಗಿ ಲೆಬನಾನ್ ಮೇಲೆ ದಾಳಿ ಮಾಡುತ್ತಿದೆ.