• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಇಸ್ರೋದ ಹೊಸ ರಾಕೆಟ್ ಉಡಾವಣೆ ವಿಫಲ ; ವಿದ್ಯಾರ್ಥಿಗಳು ರೂಪಿಸಿರುವ ಉಪಗ್ರಹಗಳನ್ನು ಹೊತ್ತ SSLV ಬಳಸಲು ಸಾಧ್ಯವಿಲ್ಲ : ಇಸ್ರೋ

Mohan Shetty by Mohan Shetty
in ದೇಶ-ವಿದೇಶ, ಪ್ರಮುಖ ಸುದ್ದಿ
ISRO
0
SHARES
0
VIEWS
Share on FacebookShare on Twitter

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ISRO) ಹೊಸ ರಾಕೆಟ್‌ ಉಡಾವಣೆ ವಿಫಲವಾಗಿದೆ. ತನ್ನ ಮೊದಲ ಸಣ್ಣ ಉಪಗ್ರಹ ಉಡಾವಣಾ ವಾಹನದಲ್ಲಿರುವ ಉಪಗ್ರಹ ಎಸ್. ಎಸ್.ಎಲ್.ವಿ – ಡಿ1(SSLV D-1) ವೃತ್ತಾಕಾರದ ಬದಲಿಗೆ ದೀರ್ಘವೃತ್ತದ ಕಕ್ಷೆಯಲ್ಲಿ ಸೇರಿದ ನಂತರ “ಅದನ್ನು ಇನ್ನು ಮುಂದೆ ಬಳಸಲು ಸಾಧ್ಯವಿಲ್ಲ” ಎಂದು ಇಸ್ರೋ ಭಾನುವಾರ ಹೇಳಿದೆ. ಹೊಸ ರಾಕೆಟ್ನ ಮೊದಲ ಹಾರಾಟದಲ್ಲಿ ಎರಡು ಉಪಗ್ರಹಗಳನ್ನು ಅಸ್ಥಿರ ಕಕ್ಷೆಯಲ್ಲಿ ಇರಿಸಲಾಗಿದೆ ಮತ್ತು ಇನ್ನು ಮುಂದೆ ಬಳಸಲಾಗುವುದಿಲ್ಲ ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ.

india


ಇಂದಿನ ಉಡಾವಣೆಯ ಒಟ್ಟಾರೆ ಉದ್ದೇಶಗಳನ್ನು ತಲುಪಲಾಗಿಲ್ಲ ಎಂದು ಇಸ್ರೋ ಸಂಸ್ಥೆ ಹೇಳಿದೆ. “ಸಮಸ್ಯೆಯನ್ನು ಸಮಂಜಸವಾಗಿ ಗುರುತಿಸಲಾಗಿದ್ದು, ಉದ್ದೇಶವು ವಿಫಲವಾಗಲು ಕಾರಣವಾದ ಅಂಶಗಳನ್ನು ಸಮಿತಿಯು ವಿಶ್ಲೇಷಿಸುತ್ತದೆ. SSLV-D2 ನೊಂದಿಗೆ ಇಸ್ರೋ ಶೀಘ್ರದಲ್ಲೇ ಹಿಂತಿರುಗುತ್ತದೆ” ಎಂದು ಬಾಹ್ಯಾಕಾಶ ಸಂಸ್ಥೆ ಸರಣಿ ಟ್ವೀಟ್‌ಗಳಲ್ಲಿ(Tweet) ತಿಳಿಸಿದೆ. ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರ ವಿವರವಾದ ಹೇಳಿಕೆಯನ್ನು “ಶೀಘ್ರದಲ್ಲೇ ಅಪ್‌ಲೋಡ್ ಮಾಡಲಾಗುವುದು” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : https://vijayatimes.com/hdk-slams-siddaramaiah/

ಭಾನುವಾರ ಬೆಳಗ್ಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡಿದ್ದ ಮೊದಲ SSLV ಕಾರ್ಯಾಚರಣೆಯಲ್ಲಿ, ಉಡಾವಣಾ ವಾಹನವು ಭೂಮಿಯ ವೀಕ್ಷಣೆ ಉಪಗ್ರಹ EOS-02 ಮತ್ತು ಸಹ-ಪ್ರಯಾಣಿಕ ವಿದ್ಯಾರ್ಥಿ ಉಪಗ್ರಹ ಆಜಾದಿ ಸ್ಯಾಟ್ (Azaadi SAT) ಅನ್ನು ಸಾಗಿಸಿತ್ತು. SSLV ಎಲ್ಲಾ ಹಂತಗಳಲ್ಲಿ ನಿರೀಕ್ಷಿಸಿದಂತೆ ಪ್ರದರ್ಶನ ನೀಡಿತ್ತು, ಆದರೆ ಅದರ ಟರ್ಮಿನಲ್ ಹಂತದಲ್ಲಿ ಡೇಟಾ ನಷ್ಟ ಅನುಭವಿಸಿದೆ. ಸರ್ಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶದ ಬಗ್ಗೆ ಮೂಲಭೂತ ತಿಳುವಳಿಕೆ ಮತ್ತು ಜ್ಞಾನವನ್ನು ಸೃಷ್ಟಿಸುವ ಗುರಿಯನ್ನು ಹೊಂದಿರುವ ಏರೋಸ್ಪೇಸ್ ಸಂಸ್ಥೆಯಾದ,

ISRO

‘ಸ್ಪೇಸ್ ಕಿಡ್ಜ್ ಇಂಡಿಯಾ’ ವಿದ್ಯಾರ್ಥಿ ತಂಡವು ಅಭಿವೃದ್ಧಿಪಡಿಸಿದ ಭೂ ವೀಕ್ಷಣಾ ಉಪಗ್ರಹ -02 ಮತ್ತು ಸಹ-ಪ್ರಯಾಣಿಕ ಉಪಗ್ರಹ ಆಜಾದಿ ಸ್ಯಾಟ್ ಅನ್ನು ಎಸ್ ಎಸ್ ಎಲ್ ವಿ ಹೊತ್ತೊಯ್ಯುತ್ತಿತ್ತು. ಆಜಾದಿ ಸ್ಯಾಟ್, ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಗುರುತಿಸಲು 750 ಶಾಲಾ ವಿದ್ಯಾರ್ಥಿಗಳು ನಿರ್ಮಿಸಿದ 75 ಪೇಲೋಡ್‌ಗಳನ್ನು ಒಳಗೊಂಡಿತ್ತು. ಉಪಗ್ರಹವನ್ನು ವಿನ್ಯಾಸಗೊಳಿಸಿದ ವಿದ್ಯಾರ್ಥಿಗಳು ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಲ್ಲಿ ಎಸ್ ಎಸ್ ಎಲ್ ವಿ- ಡಿ1 ಉಡಾವಣೆಯನ್ನು ವೀಕ್ಷಿಸಿದ್ದರು.

Tags: Azadi SATIndiaIsroSSLV D1

Related News

ಹೆಚ್ಚಾಯ್ತು ವಿಮಾನದಲ್ಲಿ ಕುಡಕರ ಕಾಟ ; ಇಂಡಿಗೋ ವಿಮಾನದಲ್ಲಿ ಮತ್ತೆ ಇಬ್ಬರು ಕುಡುಕರ ಬಂಧನ
Vijaya Time

ಹೆಚ್ಚಾಯ್ತು ವಿಮಾನದಲ್ಲಿ ಕುಡಕರ ಕಾಟ ; ಇಂಡಿಗೋ ವಿಮಾನದಲ್ಲಿ ಮತ್ತೆ ಇಬ್ಬರು ಕುಡುಕರ ಬಂಧನ

March 23, 2023
ಐಫೋನ್ ಆರ್ಡರ್ ಮಾಡಿದ್ದ ವ್ಯಕ್ತಿಗೆ ಸಿಕ್ಕಿದ್ದು ನಿರ್ಮಾ ಸೋಪು!
Vijaya Time

ಐಫೋನ್ ಆರ್ಡರ್ ಮಾಡಿದ್ದ ವ್ಯಕ್ತಿಗೆ ಸಿಕ್ಕಿದ್ದು ನಿರ್ಮಾ ಸೋಪು!

March 23, 2023
12 ವರ್ಷ ವಾಹನ ಸಂಚಾರವನ್ನೇ ಮಾಡಲಿಲ್ಲ, ಇಲ್ಲಿವರೆಗೆ ಮೊಬೈಲೇ ಬಳಸಿಲ್ಲ: ಚಾರುಕೀರ್ತಿ ಭಟ್ಟಾರಕ ಶ್ರೀಗಳು ಬಿಚ್ಚಿಟ್ಟ ವಿಚಿತ್ರ ಸತ್ಯ
Vijaya Time

ಚಾರುಕೀರ್ತಿ ಭಟ್ಟಾರಕ ಶ್ರೀ ವಿಧಿವಶ: 12 ವರ್ಷ ವಾಹನ ಸಂಚಾರವನ್ನೇ ಮಾಡದ, ಮೊಬೈಲನ್ನೇ ಬಳಸದ ಸಂತರಿವರು

March 23, 2023
ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರ  ಅತಿದೊಡ್ಡ TRP : ಮಮತಾ ಬ್ಯಾನರ್ಜಿ
ದೇಶ-ವಿದೇಶ

ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರ  ಅತಿದೊಡ್ಡ TRP : ಮಮತಾ ಬ್ಯಾನರ್ಜಿ

March 20, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.