• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಭಾರತೀಯ ನೌಕಾಪಡೆಗೆ ‘ಬಾಹುಬಲಿ’ ಶಕ್ತಿ: ಅತ್ಯಂತ ಭಾರದ CMS-03 ಉಪಗ್ರಹವನ್ನು ನಭಕ್ಕೆ ಹಾರಿಸಿದ ಇಸ್ರೋ

Teju Srinivas by Teju Srinivas
in ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
0
SHARES
28
VIEWS
Share on FacebookShare on Twitter
  • ಇಸ್ರೋ ಸಂಸ್ಥೆಯಿಂದ ಮತ್ತೊಂದು (ISRO new launch for navy) ಹೊಸ ಮೈಲಿಗಲ್ಲು
  • ಭಾರತದ ಅತ್ಯಂತ ಶಕ್ತಿಶಾಲಿ ಎಲ್‌ವಿಎಂ-3 ರಾಕೆಟ್ ಮೂಲಕ CMS-03 ಉಪಗ್ರಹ ನಭಕ್ಕೆ
  • ರಕ್ಷಣಾ, ನಾವಿಗೇಶನ್ ಮತ್ತು ಸಂವಹನ ಕ್ಷೇತ್ರಗಳಲ್ಲಿ ಕ್ರಾಂತಿ ತರಲಿರುವ CMS-03

Sriharikota: ಭಾರತದ ಬಾಹ್ಯಾಕಾಶ ಸಾಧನೆಯು ಮತ್ತೆ ವಿಶ್ವದ ಗಮನ ಸೆಳೆದಿದೆ. (ISRO new launch for navy)

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಭಾನುವಾರ ಸಂಜೆ 5:26ಕ್ಕೆ, ತನ್ನ ಶಕ್ತಿಶಾಲಿ ರಾಕೆಟ್ (Rocket) LVM3-M5 (‘ಬಾಹುಬಲಿ’) ಮೂಲಕ CMS-03 ಎಂಬ ಅತಿ ಭಾರವಾದ ಸಂವಹನ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿತು.

ಈ ಉಡಾವಣೆ ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಆಗಿದ್ದು, ಭೂಮಿಯಿಂದ ಜಿಟಿಒ (Geosynchronous Transfer Orbit) ಗೆ ಕಳುಹಿಸಲಾದ ಅತ್ಯಂತ ಭಾರವಾದ ಉಪಗ್ರಹ ಎಂಬ ಖ್ಯಾತಿ ಪಡೆದಿದೆ.

ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿತ ರಾಕೆಟ್ ಮೂಲಕ ಇಸ್ರೋ ಈ ಸಾಧನೆ ಮಾಡಿರುವುದು ಭಾರತೀಯರಿಗೆ ಹೆಮ್ಮೆ ತರಿಸಿದೆ.

ಇನ್ನು LVM3-M5 ಎಂಬ ಉಡಾವಣಾ ವಾಹನವು 43.5 ಮೀಟರ್ (Meter) ಎತ್ತರ ಹೊಂದಿದ್ದು, 4,410 ಕಿಲೊಗ್ರಾಂ (Kilogram) ತೂಕದ CMS-03 ಉಪಗ್ರಹವನ್ನು ತನ್ನ ಕಣ್ಗಾವಲು ಹಾದಿಯಲ್ಲಿ ಯಶಸ್ವಿಯಾಗಿ ನಭಕ್ಕೆ ಕೊಂಡೊಯ್ದಿತು.

ಈ ಶಕ್ತಿಶಾಲಿ ರಾಕೆಟ್‌ನ ತೂಕ ಎತ್ತುವ ಸಾಮರ್ಥ್ಯವೇ ಅದಕ್ಕೆ ಬಾಹುಬಲಿ ಎಂಬ ಹೆಸರಿನಿಂದ ಕೂಗಲು ಮೂಲ ಕಾರಣವಾಗಿದೆ.(ISRO new launch for navy)

ಇದು ಇಸ್ರೋದ ಅತ್ಯಂತ ವಿಶ್ವಾಸಾರ್ಹ ಹೆವಿ ಲಿಫ್ಟ್ ರಾಕೆಟ್ ಆಗಿದ್ದು, ಚಂದ್ರಯಾನ, ಗಗನಯಾನ ಪರೀಕ್ಷೆ, ಹಾಗು ಈಗ CMS-03 ಉಡಾವಣೆಯ ಮೂಲಕ ತನ್ನ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

CMS-03 ಉಪಗ್ರಹದ ಪ್ರಮುಖ ಉದ್ದೇಶ ಭಾರತೀಯ ನೌಕಾಪಡೆಗೆ (Indian Navy) ಅತ್ಯಾಧುನಿಕ ಸಂವಹನ ಸಹಾಯ ಒದಗಿಸುವುದು.

ಈ ಉಪಗ್ರಹವು GSAT-7R ಯೋಜನೆಯ ಭಾಗವಾಗಿದ್ದು, ನೌಕಾಪಡೆಗಾಗಿ ನಿರ್ಮಿಸಲಾದ ಅತ್ಯಾಧುನಿಕ ಮತ್ತು ಹೈ-ಟೆಕ್ ಸಂವಹನ ಉಪಗ್ರಹವಾಗಿದೆ.

ಇನ್ನು ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನದಿಂದ ವಿನ್ಯಾಸಗೊಂಡ GSAT-7R, ಹಿಂದೂ ಮಹಾಸಾಗರ ಪ್ರದೇಶದಾದ್ಯಂತ (IOR) ವಿಶಾಲ ದೂರಸಂಪರ್ಕ ವ್ಯಾಪ್ತಿಯನ್ನು ಒದಗಿಸುತ್ತದೆ.

ಇದರಲ್ಲಿ ಬಹು-ಬ್ಯಾಂಡ್ ಟ್ರಾನ್ಸ್‌ಪಾಂಡರ್‌ಗಳು ಅಳವಡಿಸಲ್ಪಟ್ಟಿದ್ದು, ಹೆಚ್ಚಿನ ವೇಗದ ಧ್ವನಿ, ಡೇಟಾ ಮತ್ತು ವೀಡಿಯೋ ಸಂವಹನವನ್ನು ಬೆಂಬಲಿಸುತ್ತದೆ.

ಈ ಉಪಗ್ರಹದ ಮೂಲಕ ನೌಕಾಪಡೆಗೆ ಸಮುದ್ರದ ಆಳದ ಸಂಪರ್ಕ, ಭದ್ರ ಸಂವಹನ, ಹಾಗೂ ಆಪರೇಷನ್‌ಗಳ ರಿಯಲ್-ಟೈಮ್ ಮಾಹಿತಿಯ ವಿನಿಮಯ ಸಾಧ್ಯವಾಗಲಿದೆ.

ಇಸ್ರೋ ಪ್ರಕಾರ, CMS-03 ಉಪಗ್ರಹವು ಭಾರತದ ಭೂಪ್ರದೇಶ ಮತ್ತು ಸುತ್ತಮುತ್ತಲಿನ ಸಾಗರ ಪ್ರದೇಶಗಳ ಮೇಲೆ ಸಂವಹನ ಸೇವೆಗಳನ್ನು ಒದಗಿಸುವುದಕ್ಕೆ ವಿನ್ಯಾಸಗೊಂಡಿದೆ.

ಉಪಗ್ರಹವು ಬಹು-ಬ್ಯಾಂಡ್ ಸಂವಹನ ವ್ಯವಸ್ಥೆ, ಮಿಲಿಟರಿ ಕಣ್ಗಾವಲು, ಹಾಗೂ ಸುರಕ್ಷಿತ ಡೇಟಾ ಪ್ರಸರಣಕ್ಕೆ ಉಪಯೋಗವಾಗಲಿದೆ ಎಂದು ವರದಿಗಳು ಸೂಚಿಸುತ್ತವೆ.

ಇಸ್ರೋ ಅಧಿಕೃತವಾಗಿ ಸೈನಿಕ ಉದ್ದೇಶಗಳ ಬಗ್ಗೆ ಪ್ರತಿಕ್ರಿಯೆ ನೀಡದಿದ್ದರೂ, ತಾಂತ್ರಿಕ ತಜ್ಞರು ಈ ಉಪಗ್ರಹವನ್ನು ರಕ್ಷಣಾ ಸಂವಹನ ಬಲದ ಹೊಸ ಶಕ್ತಿ ಇದನ್ನು ಎಂದು ವರ್ಣಿಸಿದ್ದಾರೆ.

ಇದನ್ನು ಓದಿ : ಮೋದಿ ಕರ್ನಾಟಕ ದ್ವೇಷಿ ಹಾಗಾಗಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಯಾವುದೇ ಸಹಾಯ ಸಿಗುತ್ತಿಲ್ಲ : ಸಿಎಂ ಸಿದ್ಧರಾಮಯ್ಯ
Tags: Isrolaunchnavynewsatellite

Related News

ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಸಿಗುತ್ತಿಲ್ಲ ಹೆಚ್ಚುವರಿ ಲಸಿಕೆ: ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಿದ ಪೋಷಕರು
ಪ್ರಮುಖ ಸುದ್ದಿ

ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಸಿಗುತ್ತಿಲ್ಲ ಹೆಚ್ಚುವರಿ ಲಸಿಕೆ: ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಿದ ಪೋಷಕರು

November 12, 2026
ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆಗೆ ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ: ನಗರದಲ್ಲಿ ಹೈ ಅಲರ್ಟ್, ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ
ಪ್ರಮುಖ ಸುದ್ದಿ

ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆಗೆ ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ: ನಗರದಲ್ಲಿ ಹೈ ಅಲರ್ಟ್, ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ

November 12, 2026
ಚಳಿಗಾಲದಲ್ಲಿ ಥೈರಾಯ್ಡ್ ಸಮಸ್ಯೆ ಇರುವವರು ಆಹಾರದ ಬಗ್ಗೆ ಎಚ್ಚರ ವಹಿಸಿ!
ಆರೋಗ್ಯ

ಚಳಿಗಾಲದಲ್ಲಿ ಥೈರಾಯ್ಡ್ ಸಮಸ್ಯೆ ಇರುವವರು ಆಹಾರದ ಬಗ್ಗೆ ಎಚ್ಚರ ವಹಿಸಿ!

November 12, 2026
ಭಾರತದ ವೀಸಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ; 13ರಿಂದ 9ಕ್ಕೆ ಇಳಿದ ವೀಸಾ ವಿಭಾಗಗಳು
ದೇಶ-ವಿದೇಶ

ಭಾರತದ ವೀಸಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ; 13ರಿಂದ 9ಕ್ಕೆ ಇಳಿದ ವೀಸಾ ವಿಭಾಗಗಳು

November 12, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.