ಚೀನಾ, ನ.21: ಚೀನಾದ ಪುಟಿಯನ್ನಲ್ಲಿ ನಡೆದ ಅಂತರರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ISSF) ರೈಫಲ್ ಮತ್ತು ಪಿಸ್ತೂಲ್ ವಿಶ್ವಕಪ್ನಲ್ಲಿ ಮಹಿಳಾ ವಿಭಾಗದ 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯ ಫೈನಲ್ನಲ್ಲಿ 17 ವರ್ಷದ ಮನು ಭಾಕರ್ 244.7 ಅಂಕಗಳನ್ನು ಪಡೆದು ದೇಶದ ಮೊದಲ ಚಿನ್ನದ ಪದಕ ಗಳಿಸುವ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾರೆ.
ಅದೇ ಮಾರ್ಗದಲ್ಲಿ, 2020 ರ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ಈಗಾಗಲೇ ಕೋಟಾವನ್ನು ಪಡೆದಿರುವ ಭಾಕರ್ – ಕಿರಿಯರ ವಿಶ್ವ ದಾಖಲೆಯನ್ನು ಸಹ ಮುರಿದರು. ಈ ನಡುವೆ ಐಎಸ್ಎಸ್ಎಫ್ ವಿಶ್ವಕಪ್ನ 10 ಮೀಟರ್ ಏರ್ ಪಿಸ್ತೂಲ್ ಈವೆಂಟ್ನಲ್ಲಿ ಹೀನ ಸಿಧು ನಂತರ ಹಳದಿ ಲೋಹವನ್ನು ಗೆದ್ದ ಎರಡನೇ ಭಾರತೀಯ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.ಕಣದಲ್ಲಿದ್ದ ಇನ್ನೊಬ್ಬ ಭಾರತೀಯ ಯಶಸ್ವಿನಿ ದೇಸ್ವಾಲ್(Yashaswini Deswal) 158.8 ಅಂಕಗಳನ್ನು ಗಳಿಸಿ ಆರನೇ ಸ್ಥಾನ ಗಳಿಸಿದರು.