Visit Channel

ಬಿಜೆಪಿ ಶಾಸಕನ ಬಟ್ಟೆ ಹರಿದು ಹಿಗ್ಗಾಮುಗ್ಗಾ ಥಳಿಸಿದ ರೈತರು

123

ಮುಕ್ತ್ಸಾರ್, ಮಾ. 29: ಪಂಜಾಬ್ ರಾಜ್ಯದ ಮುಕ್ತ್ಸಾರ್ ಜಿಲ್ಲೆಯ ಮಾಲೌಟ್’ನಲ್ಲಿ ಉದ್ರಿಕ್ತ ರೈತರ ಗುಂಪೊಂದು ಅಬೋಹರ್ ಬಿಜೆಪಿ ಶಾಸಕ ಅರುಣ್ ನಾರಂಗ್ ಘೇರಾವ್ ಹಾಕಿ ಬಟ್ಟೆ ಹಾರಿದು ಹಾಕಿದ ಥಳಿಸಿರುವ ಘಟನೆ ಶನಿವಾರ ನಡೆದಿದೆ.

ಮಲೌಟ್’ನಲ್ಲಿ ಸುದ್ದಿಗೋಷ್ಠಿ ನಡೆಸಲು ಶಾಸಕರು ತೆರಳಿದ ಸಂದರ್ಭ ಈ ಘಟನೆ ಸಂಭವಿಸಿದೆ. ಪ್ರತಿಭಟನಾ ನಿರತ ರೈತರು ಶಾಸಕ ಅರುಣ್ ನಾರಂಗ್’ಗಾಗಿ ಬಿಜೆಪಿ ಕಚೇರಿ ಮುಂದೆ ಕಾದು ಕುಳಿತಿದ್ದರು. ಅರುಣ್ ನಾರಂಗ್ ಬರುತ್ತಿದ್ದಂತೆ ರೈತರ ಗುಂಪು ಅವರತ್ತ  ಕಪ್ಪು ಶಾಯಿ ಎರಚಿತು. ತಕ್ಷಣ ಪೊಲೀಸರು ಅವರನ್ನು ಸಮೀಪದ ಅಂಗಡಿಯೊಂದಕ್ಕೆ ಕರೆದೊಯ್ದರು.

ಕೆಲವು ಸಮಯ ಕಳೆದ ನಂತರ ಶಾಸಕರು ಅಂಗಡಿಯಿಂದ ಹೊರಬರುತ್ತಿದ್ದಂತೆ ರೈತರು ಶಾಸಕರ ಬಟ್ಟೆ ಹರಿದು ಅವರ ಮೇಲೆ ಹಲ್ಲೆ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ 250-300 ಅಪರಿಚಿತ ಪ್ರತಿಭಟನಾಕಾರರ ವಿರುದ್ಧ ಸೆಕ್ಷನ್ 307ರ ಅಡಿಯಲ್ಲಿ ( ಕೊಲೆ ಯತ್ನ) ಪ್ರಕರಣ ದಾಖಲಾಗಿದೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.