ITBP Recruitment for Head Constable, Constable Posts: How to Apply?
Job in ITBP: ಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್ (Indo Tibetan Boarder Police) ಫೋರ್ಸ್ ನ ಡ್ರೆಸರ್ ವೆಟರಿನರಿ ಮತ್ತು ಪ್ರಾಣಿ ಸಾಗಾಣೆ ವಿಭಾಗದಲ್ಲಿ ಲಭ್ಯ ಇರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಅವುಗಳಲ್ಲಿ ಕಾನ್ಸ್ಟೇಬಲ್ ಪಯೋನೀರ್ ಹುದ್ದೆಗಳಿಗೆ ಹಾಗೂ ವೆಟರಿನರಿ ಮತ್ತು ಪ್ರಾಣಿ ಸಾಗಾಣಿಕೆ ವಿಭಾಗದ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ವಿಭಾಗಗಳ ಹೆಡ್ ಕಾನ್ಸ್ಟೇಬಲ್ ಹಾಗೂ ಕಾನ್ಸ್ಟೇಬಲ್ ಹುದ್ದೆಗಳಿಗೆ ಎಸ್ಎಸ್ಎಲ್ಸಿ, ಡಿಪ್ಲೊಮ, ಪಿಯುಸಿ (SSLC, Diploma, PUC) ಪಾಸಾದವರು ಅರ್ಜಿ ಸಲ್ಲಿಸಬಹುದಾಗಿದೆ.
ನೇಮಕಾತಿ ಪ್ರಾಧಿಕಾರ : ಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್ಹುದ್ದೆಗಳ ಹೆಸರು : ಹೆಡ್ ಕಾನ್ಸ್ಟೇಬಲ್ (Head Constable) (ಡ್ರೆಸರ್ ವೆಟರಿನರಿ) ಮತ್ತು ಕಾನ್ಸ್ಟೇಬಲ್ (ಅನಿಮಲ್ ಟ್ರಾನ್ಸ್ಪೋರ್ಟ್)ಹುದ್ದೆಗಳ ಸಂಖ್ಯೆ : 128
ಐಟಿಬಿಪಿ ಹುದ್ದೆಗಳ ವಿವರ
ಹೆಡ್ ಕಾನ್ಸ್ಟೇಬಲ್ (ಡ್ರೆಸರ್ ವೆಟರಿನರಿ) (ಪುರುಷ)-8
ಹೆಡ್ ಕಾನ್ಸ್ಟೇಬಲ್ (ಡ್ರೆಸರ್ ವೆಟರಿನರಿ) (ಮಹಿಳಾ)-1
ಕಾನ್ಸ್ಟೇಬಲ್ (ಅನಿಮಲ್ ಟ್ರಾನ್ಸ್ಪೋರ್ಟ್) (ಪುರುಷ)-97
ಕಾನ್ಸ್ಟೇಬಲ್ (ಅನಿಮಲ್ ಟ್ರಾನ್ಸ್ಪೋರ್ಟ್) (ಮಹಿಳಾ)-18
ಕಾನ್ಸ್ಟೇಬಲ್ (Kennelman) (ಪುರುಷರಿಗೆ ಮಾತ್ರ)-4
ಐಟಿಬಿಪಿ ವೇತನ ಶ್ರೇಣಿ :
ಹೆಡ್ ಕಾನ್ಸ್ಟೇಬಲ್ (ಡ್ರೆಸರ್ ವೆಟರಿನರಿ) : ಲೆವೆಲ್ 4, Rs.25,500-81,100
ಕಾನ್ಸ್ಟೇಬಲ್ (ಅನಿಮಲ್ ಟ್ರಾನ್ಸ್ಪೋರ್ಟ್): ಲೆವೆಲ್ 3, Rs.21700-69100.
ITBP Head Constable Job Recruitment Kannada news
ಐಟಿಬಿಪಿ ವಿದ್ಯಾರ್ಹತೆ ವಿವರ:
ಹೆಡ್ ಕಾನ್ಸ್ಟೇಬಲ್ (ಡ್ರೆಸರ್ ವೆಟರಿನರಿ) : ದ್ವಿತೀಯ ಪಿಯುಸಿ ಪಾಸ್. ರೆಗ್ಯುಲರ್ ಪ್ಯಾರಾ ವೆಟರಿನರಿ ಕೋರ್ಸ್, ಡಿಪ್ಲೊಮ ಅಥವಾ ಒಂದು ವರ್ಷದ ವೆಟರಿನರಿ, ಥೆರಪಿಸ್ಟ್ ಕೋರ್ಸ್ ಪಾಸ್ ಮಾಡಿರಬೇಕು.
ಕಾನ್ಸ್ಟೇಬಲ್ (ಅನಿಮಲ್ ಟ್ರಾನ್ಸ್ಪೋರ್ಟ್): ಎಸ್ಎಸ್ಎಲ್ಸಿ ಪಾಸಾಗಿರಬೇಕು.
ಐಟಿಬಿಪಿ ಹುದ್ದೆವಾರು ವಯಸ್ಸಿನ ಅರ್ಹತೆಗಳು:
ಹೆಡ್ ಕಾನ್ಸ್ಟೇಬಲ್ (ಡ್ರೆಸರ್ ವೆಟರಿನರಿ) : ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 27 ವರ್ಷ ವಯಸ್ಸು ಮೀರಿರಬಾರದು.
ಕಾನ್ಸ್ಟೇಬಲ್ (ಅನಿಮಲ್ ಟ್ರಾನ್ಸ್ಪೋರ್ಟ್): ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 25 ವರ್ಷ ವಯಸ್ಸು ಮೀರಿರಬಾರದು.
ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮ ಅನ್ವಯವಾಗಲಿದ್ದು, ಇತರೆ ಹಿಂದುಳಿದ ವರ್ಗದವರಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗದವರಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಅರ್ಜಿ ಸಲ್ಲಿಸಲು ಇರಲಿದೆ.
ಹೆಡ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸುವವರು 11-09-1997 ಕ್ಕಿಂತ ಮೊದಲು ಜನಿಸಿರಬಾರದು. ಹಾಗೆಯೇ 10-09-2006 ನಂತರ ಜನಿಸಿರಬಾರದು.
ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸುವವರು 11-09-2001 ಕ್ಕಿಂತ ಮೊದಲು ಜನಿಸಿರಬಾರದು. ಹಾಗೆಯೇ 10-09-2006 ನಂತರ ಜನಿಸಿರಬಾರದು.
ಐಟಿಬಿಪಿ ಹುದ್ದೆಗಳಿಗೆ ಅರ್ಜಿ ಪ್ರಕ್ರಿಯೆ:
ದಿನಾಂಕಗಳು: ಆನ್ಲೈನ್ ಅಪ್ಲಿಕೇಶನ್ (Online Application) ಸ್ವೀಕಾರ ಆರಂಭಿಕ ದಿನಾಂಕ: 12-08-2024ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ: 10-09-2024 ರ ರಾತ್ರಿ 11-59 ಗಂಟೆವರೆಗೆ.
ಐಟಿಬಿಪಿ ಹುದ್ದೆಗಳಿಗೆ ಅಪ್ಲಿಕೇಶನ್ ಶುಲ್ಕ ವಿವರ:
ಸಾಮಾನ್ಯ ಅರ್ಹತೆಯವರಿಗೆ ರೂ.100.
ಇತರೆ ಹಿಂದುಳಿದ ವರ್ಗದವರಿಗೆ ರೂ.100.
ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ರೂ.100.
ಎಸ್ಸಿ / ಎಸ್ಟಿ / (SC/ST) ಮಹಿಳಾ, ಮಾಜಿ ಸೈನಿಕರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಬಹುದು.
ಅಪ್ಲಿಕೇಶನ್ ಸಲ್ಲಿಸುವುದು ಹೇಗೆ?
ಮೇಲಿನ ಅರ್ಹತೆಗಳನ್ನು ಹೊಂದಿರುವ ಹಾಗೂ ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ವೆಬ್ಸೈಟ್ ವಿಳಾಸ https://recruitment.itbpolice.nic.in/rect/index.php ಕ್ಕೆ ಭೇಟಿ ನೀಡುವ ಮೂಲಕ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಮೊದಲು ರಿಜಿಸ್ಟ್ರೇಷನ್ (Registrations) ಪಡೆಯಬೇಕು. ನಂತರ ಅರ್ಜಿ ಸಲ್ಲಿಸಬಹುದಾಗಿದೆ.