ಬೆಂಗಳೂರು, ಜ. 01: ಹೊಸ ವರ್ಷದ ಸ್ವಾಗತಕ್ಕೆ ಸಜ್ಜಾಗಿರುವ ಭಾರತ, ಮಾರಕ ಕೊರೊನಾ ವೈರಸ್‌ನ್ನು ಈ ನೆಲದಿಂದ ಒದ್ದೊಡಿಸುವ ಪಣತೊಟ್ಟಿದೆ. ಇದಕ್ಕಾಗಿ ದೇಶದ ಹಲವು ರಾಜ್ಯಗಳಲ್ಲಿ ಜ.2ರಿಂದ ಕೊರೊನಾ ಲಸಿಕೆ ತಾಲೀಮು ನಡೆಸಲು ದೇಶ ಸಜ್ಜಾಗುತ್ತಿದೆ.
ಈ ನಡುವೆ ರಾಜ್ಯದಲ್ಲೂ ಕೊರೊನಾ ಲಸಿಕೆಯ ಡ್ರೈ ರನ್ ನಡೆಸಲು ತೀರ್ಮಾನಿಸಿದ್ದು, ಇದಕ್ಕಾಗಿ ಐದು ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಪ್ರಮುಖವಾಗಿ ಬೆಂಗಳೂರು(ನಗರ), ಬೆಳಗಾವಿ, ಕಲ್ಬುರ್ಗಿ, ಮೈಸೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕೋವಿಡ್-19 ಲಸಿಕೆಯ ಪ್ರಯೋಗ ನಡೆಯಲಿದೆ ಎಂದು ತಿಳಿದು ಬಂದಿದೆ.