New Delhi : ವಿದೇಶ ಪ್ರವಾಸಕ್ಕೆ ಹೋಗಲು ನಟಿ ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez seeks permission) ದೆಹಲಿ ನ್ಯಾಯಾಲಯದ ಅನುಮತಿ ಕೋರಿದ್ದಾರೆ.
ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಮಂಗಳವಾರ ಜಾರಿ ನಿರ್ದೇಶನಾಲಯದ (ಇಡಿ) ಅಭಿಪ್ರಾಯ ಕೇಳಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶೈಲೇಂದ್ರ ಮಲಿಕ್ ಇಡಿ ಇಲಾಖೆಯ ಉತ್ತರವನ್ನು ಕೋರಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 22 ರೊಳಗೆ ಪ್ರತಿಕ್ರೀಯೆ ನೀಡುವಂತೆ ತಿಳಿಸಿದ್ದಾರೆ.
ನಟಿ ಜಾಕ್ವೆಲಿನ್ ಫರ್ನಾಂಡೀಸ್ ಡಿಸೆಂಬರ್ 23 ರಂದು ತನ್ನ ಕುಟುಂಬ ಸದಸ್ಯರನ್ನು ಭೇಟಿ (Jacqueline Fernandez seeks permission) ಮಾಡಲು ಬಹ್ರೇನ್‌ಗೆ ಪ್ರಯಾಣಿಸಲು ಅನುಮತಿ ಕೋರಿದ್ದಾರೆ ಎನ್ನಲಾಗಿದೆ.
ಶ್ರೀಲಂಕಾದ ಪ್ರಜೆಯಾಗಿರುವ ನಟಿ ಜಾಕ್ವೆಲಿನ್ ಫರ್ನಾಂಡೀಸ್, ಸುಕೇಶ್ ಪ್ರಮುಖ ಆರೋಪಿಯಾಗಿರುವ ೨೦೦ ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಆರೋಪಿಗಳಲ್ಲಿ ಜಾಕ್ವೆಲಿನ್ ಕೂಡ ಒಬ್ಬರೆಂದು ಆರೋಪ ಪಟ್ಟಿಯಲ್ಲಿ ಹೆಸರಿಸಲಾದ ಬಳಿಕ ವಿದೇಶ ಪ್ರಯಾಣಗಳಿಗೆ ಇಡಿ ನಿರ್ಬಂಧ ಹೇರಿದೆ.
ಈ ಮಧ್ಯೆ ನ್ಯಾಯಾಲಯ ತಿಳಿಸಿರುವಂತೆ ಜನವರಿ 6 ರಂದು ಚಂದ್ರಶೇಖರ್ ಪರವಾಗಿ ನ್ಯಾಯಾಲಯವು ನಟಿ ಮೇಲಿನ ಆರೋಪದ ವಾದವನ್ನು ಆಲಿಸಲಿದೆ ಎಂದು ಹೇಳಲಾಗಿದೆ.
ನ್ಯಾಯಾಧೀಶರು ಆಗಸ್ಟ್ 31 ರಂದು ಇಡಿ ಸಲ್ಲಿಸಿದ ಪೂರಕ ಚಾರ್ಜ್ ಶೀಟ್ ಅನ್ನು ಗಮನಕ್ಕೆ ತೆಗೆದುಕೊಂಡರು ಮತ್ತು ನ್ಯಾಯಾಲಯದ ಮುಂದೆ ಹಾಜರಾಗುವಂತೆ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರಿಗೆ ತಿಳಿಸಿದ್ದರು.

ಇದರ ಬೆನ್ನಲ್ಲೇ ನಟಿ ಡಿಸೆಂಬರ್ 12 ರಂದು ರಾಷ್ಟ್ರ ರಾಜಧಾನಿಯ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ 200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಮಿಸಿದ್ದರು.
200 ಕೋಟಿ ಹಗರಣದ ವಂಚನೆಯಲ್ಲಿ ಜಾಕ್ವೆಲಿನ್ ಅವರು ಪ್ರತ್ಯಕ್ಷ-ಪರೋಕ್ಷವಾಗಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.
ಇಡಿ ನೀಡಿರುವ ಮಾಹಿತಿ ಅನುಸಾರ, ತನಿಖೆಯ ಸಮಯದಲ್ಲಿ, ಸುಕೇಶ್ ಮತ್ತು ಜಾಕ್ವೆಲಿನ್ ಫೆರ್ನಾಂಡಿಸ್ ಇಬ್ಬರೂ ಪರಸ್ಪರ ಒಪ್ಪಂದ ಮಾಡಿಕೊಂಡಿದ್ದಾರೆ.
ತನಿಖೆಗೆ ಸಂಬಂಧಿಸಿದಂತೆ ಇಡಿ,ನಟಿ ಜಾಕಲ್ವಿನ್ ಅವರಿಗೆ ಹಲವು ಬಾರಿ ಸಮನ್ಸ್ ನೀಡಿದರೂ ತನಿಖೆಗೆ ಗೈರು ಹಾಜರಾದ ಬಳಿಕ ಅವರನ್ನು ಪೂರಕ ಚಾರ್ಜ್ ಶೀಟ್‌ನಲ್ಲಿ ಮೊದಲ ಬಾರಿಗೆ ಆರೋಪಿ ಎಂದು ಹೆಸರಿಸಲಾಗಿತ್ತು.
https://vijayatimes.com/explosive-statement-about-murugeshnirani/
ಇಡಿಯ ಹಿಂದಿನ ಚಾರ್ಜ್ ಶೀಟ್ ಮತ್ತು ಪೂರಕ ಚಾರ್ಜ್ ಶೀಟ್, ನಟಿಯನ್ನು ಆರೋಪಿ ಎಂದು ನಮೂದಿಸಿರಲಿಲ್ಲ. ಆದಾಗ್ಯೂ, ಚಂದ್ರಶೇಖರ್‌ಗೆ ಸಂಬಂಧಿಸಿದ 200 ಕೋಟಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಕೆಲವು ತಿಂಗಳುಗಳಿಂದ ಫರ್ನಾಂಡೀಸ್ ಮತ್ತು ನಟಿ ನೋರಾ ಫತೇಹಿ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿತ್ತು.
ಇಬ್ಬರು ನಟಿಯರು ನೀಡಿದ ಹೇಳಿಕೆಗಳ ವಿವರಗಳನ್ನು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.