ಪವರ್ ಸ್ಟಾರ್ ತುಂಬಾನೇ ಸಿಂಪಲ್ ಆಂಡ್ ಹಂಬಲ್ ಪರ್ಸನ್ ಅನ್ನೋದು ಪ್ರತಿಯೊಬ್ಬರಿಗೂ ಗೊತ್ತು.. ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟೀವ್ ಆಗಿರೋ ಪುನೀತ್ ರಾಜ್ ಕುಮಾರ್ ಎರಡ್ಮೂರು ವಿಷಯಗಳಿಗೆ ಸದ್ಯ ಸುದ್ದಿಯಾಗಿದ್ದಾರೆ ..
ತಮ್ಮದೇ ಅಭಿನಯದ ದೊರೆಭಗವಾನ್ ನಿರ್ದಶನದ ಯಾರಿವನು ಅನ್ನೋ ಸೂಪರ್ ಹಿಟ್ ಸಿನಿಮಾದ ಕಣ್ಣಿಗೆ ಕಾಣೋ ದೇವರು ಅಂದರೆ ಅಮ್ಮನು ತಾನೇ ಅನ್ನೋ ವೀಡಿಯೋ ಸಾಂಗನ್ನು ತಮ್ಮ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ರೆ .. ಇಂಟ್ರಸ್ಟಿಂಗ್ ಏನಪ್ಪ ಅಂದ್ರೆ ಪುಟ್ಟ ಮಗುವೊಂದು . ಈ ಹಾಡನ್ನು ಹಾಡ್ತಾ ಮಕ್ಕಳ ದಿನಾಚರಣೆಯನ್ನು ಸೆಲೆಬ್ರೆಟ್ ಮಾಡ್ತಾ ಇದ್ರೆ ಇತ್ತ ಅಪ್ಪು ಮಕ್ಕಳ ಈ ಹಾಡನ್ನು ಕೇಳಿ ಎಂಜಾಯ್ ಮಾಡೋದರ ಜೊತೆಗೆ ತಮ್ಮ ಏಪ್ ಬಿ ಅಕೌಂಟ್ ನಲ್ಲಿ ಅಪ್ ಲೋಡ್ ಮಾಡೋದರ ಜೊತೆಗೆ ಈ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯ ತಿಳಿಸಿದ್ದಾರೆ .
ಕೇವಲ ಪುನೀತ್ ರಾಜ್ ಕುಮಾರ್ ಮಕ್ಕಳಲ್ಲಿ ಮಕ್ಕಳಾಗದೆ ಜನತೆಗೂ ಒಳ್ಳೆಯ ಮೆಸೇಜ್ ಜೊತೆ ದೀಪಾವಳಿಯ ಶುಭಾಶಯವನ್ನು ತಿಳಿಸಿದ್ದಾರೆ.. ದೀಪಾವಳಿ ದೀಪಾವಳಿ ಅನ್ನೋ ಹಾಡಿನ ಮೂಲಕ ಶುರುಮಾಡಿದ ಅಪ್ಪು ಪಟಾಕಿ ಹೊಡಿಬೇಡಿ ಬದಲಿಗೆ ನಮ್ಮೊಳಗಿನ ಕ್ಯಾಲರಿಯನ್ನು ಕರಗಿಸೋಣ ಅಂತ ಹೇಳಿ ವಿಶ್ ಮಾಡಿದ್ದಾರೆ . ಇಷ್ಟಕ್ಕೆ ಅಪ್ಪು ಆಕ್ಟಿವಿಟಿಸ್ ಮುಗ್ದಿಲ್ಲ.. ಸದಾ ನಟನೆ ಅಂತ ಬ್ಯುಸಿ ಇರ್ತಿದ್ದ ಅಪ್ಪು .. ಸ್ವಲ್ಪ ಬ್ರೇಕ್ ತೆಗೊಂಡಿದ್ದಾರೆ . ಅಪಾರ ದೇವರಲ್ಲಿ ಭಕ್ತಿಯನ್ನು ಹೊಂದಿರೊ ಅಪ್ಪು ಆಗಾಗ ದೇವಸ್ಥಾನಗಳಿಗೆ ವಿಸಿಟ್ ನೀಡ್ತಾನೆ ಇರ್ತಾರೆ..
ಸದ್ಯ ಪವರ್ ಸ್ಟಾರ್ ಸಿಕ್ಕಾಪಟ್ಟೆ ಸೌಂಡ್ ಮಾಡ್ತಾ ಇರೋದು ಜೈ ಶ್ರೀರಾಂ ಘೋಷಣೆಗೆ . ಹೌದು ಇದು ಯಾವುದೆ ಕಾಂಟ್ರವರ್ಸಿ ಅಲ್ಲ … ಹಂಪಿಯಲ್ಲಿರೋ ಆಂಜನೇಯಾದ್ರಿ ಬೆಟ್ಟಕ್ಕೆ ಪುನೀತ್ ಭೇಟಿ ನೀಡಿದ್ದು .. ತಾವೂ ಬೆಟ್ಟ ಹತ್ತೋ ವೀಡಿಯೋವನ್ನು ಮಾಡಿದ್ದಾರೆ ..
- ದೀಪಿಕಾ ವಿಜಯ ಟೈಮ್ಸ್ ಬೆಂಗಳೂರು