• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Vijaya Time

ನಕಲಿ ಆಧಾರ್ ಸೃಷ್ಟಿಸಿ ಭಾರತಕ್ಕೆ ಪ್ರವೇಶ : 10 ಬಾಂಗ್ಲಾದೇಶಿ ಅಕ್ರಮ ವಲಸಿಗರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ ಉಡುಪಿ ಕೋರ್ಟ್

Teju Srinivas by Teju Srinivas
in Vijaya Time
ನಕಲಿ ಆಧಾರ್ ಸೃಷ್ಟಿಸಿ ಭಾರತಕ್ಕೆ ಪ್ರವೇಶ : 10 ಬಾಂಗ್ಲಾದೇಶಿ ಅಕ್ರಮ ವಲಸಿಗರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ ಉಡುಪಿ ಕೋರ್ಟ್
0
SHARES
29
VIEWS
Share on FacebookShare on Twitter
  • 10 ಬಾಂಗ್ಲಾ ಅಕ್ರಮ ವಲಸಿಗರಿಗೆ ಜೈಲು ಶಿಕ್ಷೆ (jail for bangladeshi illegal immigrants) ವಿಧಿಸಿದ ಉಡುಪಿ ಕೋರ್ಟ್​
  • ನಕಲಿ ಆಧಾರ್ ದಾಖಲೆ ಸೃಷ್ಟಿಸಿ ಭಾರತಕ್ಕೆ ಪ್ರವೇಶಿಸಿದ್ದ 10 ಬಾಂಗ್ಲಾ ವಲಸಿಗರು
  • ಅನುಮಾನಾಸ್ಪದ ಚಲನವಲನದಿಂದ ಆರಂಭವಾದ ಪೊಲೀಸರು ತನಿಖೆಯಿಂದ ದೊಡ್ಡ ಜಾಲ ಬಯಲು

Udupi: ಉಡುಪಿ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದ ಹಿಂದೆ ನಡೆದಿದ್ದ ಅಕ್ರಮ ವಲಸಿಗರ (jail for bangladeshi illegal immigrants) ಪ್ರಕರಣಕ್ಕೆ ಇಂದು ಮಹತ್ವದ ತೀರ್ಪು ಹೊರಬಿದ್ದಿದೆ.

ಮಲ್ಪೆ ಪ್ರದೇಶದಲ್ಲಿ ಬಂಧಿತರಾಗಿದ್ದ 10 ಮಂದಿ ಬಾಂಗ್ಲಾದೇಶಿ ಪ್ರಜೆಗಳು ನಕಲಿ ದಾಖಲೆಗಳನ್ನು ನಿರ್ಮಿಸಿ ಭಾರತದಲ್ಲಿ ವಾಸಿಸುತ್ತಿದ್ದ ಪ್ರಕರಣದಲ್ಲಿ, ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು 2 ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ 10,000 ರೂ. ದಂಡ ವಿಧಿಸಿ ಕಠಿಣ ಸಂದೇಶ ನೀಡಿದ್ದಾರೆ.

ಈ ಘಟನೆ ಅಕ್ರಮ ವಲಸೆ, ನಕಲಿ ದಾಖಲೆ ಬಳಕೆ, ಮತ್ತು ಸ್ಥಳೀಯ ಉದ್ಯೋಗ (jail for bangladeshi illegal immigrants) ಕ್ಷೇತ್ರಕ್ಕೆ ಉಂಟಾಗುತ್ತಿರುವ ಅನಧಿಕೃತ ಪ್ರವೇಶಗಳ ಬಗ್ಗೆ ಮತ್ತೊಮ್ಮೆ ಗಮನಹರಿಸುವಂತೆ ಮಾಡುತ್ತಿದೆ.

ಇನ್ನು ಈ ಘಟನೆಯ ವಿವರಗಳನ್ನು ನೋಡುವುದಾದರೆ 2024ರ ಅಕ್ಟೋಬರ್ 11ರಂದು ಸಂಜೆ 7 ಗಂಟೆಯ ವೇಳೆ ಮಲ್ಪೆ ಠಾಣೆಯ PSI ಗಸ್ತಿನ ವೇಳೆ ಬೆಳಕಿಗೆ ಬಂದಿದೆ.

ಮಲ್ಪೆ ವಡಭಾಂಡೇಶ್ವರ ಬಸ್ ನಿಲ್ದಾಣದ ಬಳಿ ಏಳು ಮಂದಿ ಯುವಕರು ಲಗೇಜ್‌ ಸಹಿತ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದು ಪೊಲೀಸರ ಗಮನ ಸೆಳೆಯಿತು.

ವಿಚಾರಣೆ ನಡೆಸಿದಾಗ, ಅವರ ಬಳಿಯಲ್ಲಿದ್ದ ‌ಆಧಾರ್ ಕಾರ್ಡ್‌ಗಳು ನಕಲಿ ಎನ್ನುವುದು ಅಧಿಕಾರಿಗಳ ಗಮನಕ್ಕೆ ಬಂತು.

ಭಾರತ ಪ್ರವೇಶಕ್ಕೆ ಅಗತ್ಯವಿರುವ ಯಾವುದೇ ಅಧಿಕೃತ ಅನುಮತಿ ಅಥವಾ ಪಾಸ್‌ಪೋರ್ಟ್‌/ವೀಸಾ (Passport/Visa) ದಾಖಲೆಗಳು ಅವರ ಬಳಿ ಇರಲಿಲ್ಲ.

ಇದರಿಂದಲೇ ಅವರು ಅಕ್ರಮವಾಗಿ ದೇಶ ಪ್ರವೇಶಿಸಿರುವುದು ದೃಢಪಟ್ಟಿತು. ಬಳಿಕ, ಪ್ರಾಥಮಿಕ ತನಿಖೆಯಲ್ಲಿ ಈ ಏಳು ಮಂದಿಯನ್ನು ಪೊಲೀಸ್‌ ವಶಕ್ಕೆ ತೆಗೆದುಕೊಳ್ಳಲಾಯಿತು.

ಬಂಧಿತರನ್ನು ವಿಚಾರಿಸಿದಾಗ, ಅವರು ಬಾಂಗ್ಲಾದೇಶದಿಂದ ಗಡಿಯಾಚೆ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿ, ನಂತರ ಉಡುಪಿ ತಾಲೂಕಿನ ಪಡುತೋನ್ಸೆ ಗ್ರಾಮದ ಹೂಡೆ ಪ್ರದೇಶಕ್ಕೆ ಬಂದಿದ್ದಾರೆ ಎಂದು ಒಪ್ಪಿಕೊಂಡರು.

ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸರು ವಿಸ್ತೃತ ತನಿಖೆ ನಡೆಸುವ ವೇಳೆ, ಅವರ ಮೂಲಕ ಇನ್ನೂ ಮೂವರು ಅಕ್ರಮ ವಲಸಿಗರು ಪತ್ತೆಯಾಗಿದ್ದಾರೆ.

ಈ ಮೂವರನ್ನೂ ನಂತರ ಬಂಧಿಸಿ, ಒಟ್ಟು 10 ಮಂದಿ ಆರೋಪಿಗಳನ್ನು ಪ್ರಕರಣಕ್ಕೆ ಸೇರಿಸಲಾಯಿತು.

ವಲಸಿಗರು ನಕಲಿ ದಾಖಲೆಗಳ ಮೂಲಕ ತಮ್ಮ ಗುರುತನ್ನು ಬದಲಾಯಿಸಿ, ಸ್ಥಳೀಯ ಮೀನುಗಾರಿಕಾ ವ್ಯಾಪಾರದಲ್ಲಿ ಕಾರ್ಮಿಕರಾಗಿ ಕೆಲಸ ಮಾಡಲು ಬಂದಿರುವುದು ವಿಚಾರಣೆಯಲ್ಲಿ ಬಹಿರಂಗವಾಯಿತು.

ಅಷ್ಟೇ ಅಲ್ಲದೆ ಪರಿಶೋಧನೆ ಮುಂದುವರಿದಂತೆ ನಕಲಿ ದಾಖಲೆ ಸೃಷ್ಟಿಸುವ ದೊಡ್ಡ ಜಾಲವೂ ಇದರ ಹಿಂದಿದೆ ಎಂಬ ವಿಚಾರ ಹೊರಬಂತು.

ಅಗರ್ತಲಾದ ಕಾಜೋಲ್ ಎಂಬ ವ್ಯಕ್ತಿ ಈ ಬಾಂಗ್ಲಾದೇಶಿ ಪ್ರಜೆಗಳಿಗೆ ನಕಲಿ ಆಧಾರ್‌ ಕಾರ್ಡ್‌ಗಳನ್ನು ತಯಾರಿಸಿ ಕೊಟ್ಟಿದ್ದಾನೆಂಬುದು ಪತ್ತೆಯಾಯಿತು.

ಮತ್ತೊಬ್ಬ ಆರೋಪಿ ಉಸ್ಮಾನ್ ಅಕ್ರಮ ವಲಸಿಗರನ್ನು ಗಡಿ ದಾಟಿಸಿ ಭಾರತಕ್ಕೆ ಕರೆತಂದು, ಅವರಿಗೆ ಉದ್ಯೋಗ ವ್ಯವಸ್ಥೆ ಮಾಡುತ್ತಿದ್ದಾನೆ ಎಂಬುದು ಕೂಡಾ ಬೆಳಕಿಗೆ ಬಂತು.

ನಕಲಿ ದಾಖಲೆ ನಿರ್ಮಾಣ ಮತ್ತು ಅಕ್ರಮ ವಲಸೆಗೆ ಸಹಕರಿಸುವ ಈ ಜಾಲ ಸ್ಥಳೀಯ ಸುರಕ್ಷತೆಗೆ ಅಪಾಯಕಾರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಸ್ತೃತ ಸಾಕ್ಷ್ಯಾಧಾರಗಳು, ನಕಲಿ ದಾಖಲೆಗಳ ವರದಿ, ಮತ್ತು ಪೊಲೀಸ್ ಇಲಾಖೆಯ ಪ್ರಾಮಾಣಿಕ ತನಿಖೆಯನ್ನು ಆಧಾರವಾಗಿಸಿ, ಉಡುಪಿ ಜಿಲ್ಲಾ ನ್ಯಾಯಾಲಯ ಇಂದು ದಂಡನಾತ್ಮಕ ತೀರ್ಪನ್ನು ಪ್ರಕಟಿಸಿದೆ.

ಹಕೀಮ್ ಅಲಿ, ಸುಜೋನ್ ಎಸ್.ಕೆ., ಇಸ್ಮಾಯಿಲ್ ಎಸ್.ಕೆ., ಕರೀಮ್ ಎಸ್.ಕೆ., ಸಲಾಂ ಎಸ್.ಕೆ., ರಾಜಿಕುಲ್ ಎಸ್.ಕೆ., ಮೊಹಮ್ಮದ್ ಸೋಜಿಬ್, ರಿಮೂಲ್, ಮೊಹಮ್ಮದ್ ಇಮಾಮ್ ಶೇಖ್ ಮತ್ತು ಮೊಹಮ್ಮದ್ ಜಹಾಂಗಿರ್ ಆಲಂ ಇವರಿಗೆ 2 ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ.

ಜೊತೆಗೆ ತಲಾ 10 ಸಾವಿರ ರೂಪಾಯಿ ದಂಡವೂ ವಿಧಿಸಲಾಗಿದೆ. ಸರ್ಕಾರದ ದಾಖಲೆಗಳನ್ನು ನಕಲಿ ಮಾಡುವ ಗಂಭೀರ ಅಪರಾಧ ಮತ್ತು ಅಕ್ರಮ ವಲಸೆ ನಿಯಮ ಉಲ್ಲಂಘನೆ ಹಿನ್ನೆಲೆ, ನ್ಯಾಯಾಲಯ ಕಠಿಣ ಶಿಕ್ಷೆ ನೀಡಿದೆ.

ನಕಲಿ ಆಧಾರ್ ಕಾರ್ಡ್‌ಗಳ ಬಳಕೆ ಮತ್ತು ಅಕ್ರಮ ಪ್ರವೇಶಗಳ ಬಗ್ಗೆ ಹಲವು ಬಾರಿ ಎಚ್ಚರಿಕೆ ನೀಡಲಾಗುತ್ತಿದ್ದ ಸಂದರ್ಭದಲ್ಲಿ, ಈ ರೀತಿಯ ಪ್ರಕರಣಗಳು ಇನ್ನಷ್ಟು ಎಚ್ಚರಿಕೆ ಮೂಡಿಸುತ್ತವೆ.

ಇದನ್ನು ಓದಿ : ಟ್ರಾಫಿಕ್ ದಂಡಕ್ಕೆ 50% ರಿಯಾಯಿತಿ: ರಾಜ್ಯದಲ್ಲಿ 5 ಲಕ್ಷಕ್ಕೂ ಹೆಚ್ಚು ಕೇಸ್ ತೆರವು,16.63 ಕೋಟಿ ಸಂಗ್ರಹ
Tags: bangaleshcourtfakeadharUdupi

Related News

ಬೆಂಗಳೂರಿನ 23 ಪ್ರಮುಖ ರಸ್ತೆಗಳಲ್ಲಿ ಪೇ–ಅಂಡ್–ಪಾರ್ಕ್ ಜಾರಿ: ಖಾಸಗಿ ನಿರ್ವಾಹಕರ ಮೂಲಕ ಶುಲ್ಕ ಸಂಗ್ರಹ
Vijaya Time

ಬೆಂಗಳೂರಿನ 23 ಪ್ರಮುಖ ರಸ್ತೆಗಳಲ್ಲಿ ಪೇ–ಅಂಡ್–ಪಾರ್ಕ್ ಜಾರಿ: ಖಾಸಗಿ ನಿರ್ವಾಹಕರ ಮೂಲಕ ಶುಲ್ಕ ಸಂಗ್ರಹ

January 10, 2026
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೇಮಕಾತಿ; 1146 ಹುದ್ದೆಗಳಿಗೆ ಅರ್ಜಿ ಆಹ್ವಾನ
Vijaya Time

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೇಮಕಾತಿ; 1146 ಹುದ್ದೆಗಳಿಗೆ ಅರ್ಜಿ ಆಹ್ವಾನ

January 7, 2026
ಒಂದು ದಿನಕ್ಕೆ ಬಳಸುವ ಹಣಕ್ಕೂ ಕಾನೂನಿದೆ: RBI ಮತ್ತು ಆದಾಯ ತೆರಿಗೆ ನಿಯಮಗಳ ಸಂಪೂರ್ಣ ಮಾಹಿತಿ
Vijaya Time

ಒಂದು ದಿನಕ್ಕೆ ಬಳಸುವ ಹಣಕ್ಕೂ ಕಾನೂನಿದೆ: RBI ಮತ್ತು ಆದಾಯ ತೆರಿಗೆ ನಿಯಮಗಳ ಸಂಪೂರ್ಣ ಮಾಹಿತಿ

January 7, 2026
ಹೆಚ್ಚುತ್ತಿರುವ ಸೈಬರ್ ಅಪರಾಧ: ಆರು ವರ್ಷಗಳಲ್ಲಿ ₹52,976 ಕೋಟಿಗೂ ಅಧಿಕ ವಂಚನೆ, ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನ
Vijaya Time

ಹೆಚ್ಚುತ್ತಿರುವ ಸೈಬರ್ ಅಪರಾಧ: ಆರು ವರ್ಷಗಳಲ್ಲಿ ₹52,976 ಕೋಟಿಗೂ ಅಧಿಕ ವಂಚನೆ, ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನ

January 5, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.