Rajasthan: ಭಾರತದಲ್ಲಿ ಅನೇಕ ವಿಶಿಷ್ಟವಾದ ಘಟನೆಗಳು ನಡೆದಿದ್ದು, ಇತಿಹಾಸದ (Jaipur jal mahal) ಪುಟಗಳಲ್ಲಿ ಹೆಸರುವಾಸಿಯಾಗಿದೆ.
ನಮ್ಮ ಇತಿಹಾಸಕ್ಕೆ ಭಾರತದಲ್ಲಿ (India) ಅರಮನೆಗಳು (Palace) ಕೂಡ ಪ್ರಮುಖ ಕೊಡುಗೆಯನ್ನು ಹೊಂದಿವೆ.
ವಿಶೇಷವಾಗಿ ರಾಜಸ್ಥಾನದಲ್ಲಿ, ಅರಮನೆಗಳ (Jaipur jal mahal) ಪ್ರಾಮುಖ್ಯತೆಯು ಬಹಳ ಹೆಚ್ಚು. ರಾಜಸ್ಥಾನವು ಅರಮನೆಗಳ ವಿಶೇಷತೆಗೆ ಹೆಸರುವಾಸಿಯಾಗಿದೆ, ಇಂದು ಅಂತಾದ್ದೇ ಒಂದು ಒಂದು ವಿಶಿಷ್ಟವಾದ ಅರಮನೆಯ ಬಗ್ಗೆ ತಿಳಿಯೋಣ.

ರಾಜಸ್ಥಾನದಲ್ಲಿರುವ ಈ ಅರಮನೆಯನ್ನು ಸರೋವರದ ಮಧ್ಯದಲ್ಲಿ ನಿರ್ಮಿಸಲಾಗಿದೆ, ಹಾಗೇ ಇದರ ನಾಲ್ಕು ಮಹಡಿಗಳು ನೀರಿನ ಅಡಿಯಲ್ಲಿವೆ. ಹೌದು, ಇಂದು ನಾವು ಜೈಪುರದಲ್ಲಿ ಹೆಮ್ಮೆಯಿಂದ ನಿಂತಿರುವ ‘ಜಲ ಮಹಲ್’ ಬಗ್ಗೆ ಮಾತನಾಡುತ್ತಿದ್ದೇವೆ.
https://vijayatimes.com/hindu-mythology-ramayana/
ಜೈಪುರದಿಂದ ಆಮೇರ್ ರಸ್ತೆಯಲ್ಲಿ ಮಾನಸಾಗರ ಸರೋವರದ ಮಧ್ಯದಲ್ಲಿರುವ ಈ ಅರಮನೆಯನ್ನು ಕ್ರಿ.ಶ 1799 ರಲ್ಲಿ ಸವಾಯಿ ಜೈ ಸಿಂಗ್ ನಿರ್ಮಿಸಿದರು.
ಈ ಅರಮನೆಯ ನಿರ್ಮಾಣದ ಮೊದಲು, ಜೈಸಿಂಗ್ (Jai Singh) ಅವರು ಜೈಪುರದ ನೀರು ಪೂರೈಕೆಗಾಗಿ ಗರ್ಭಾವತಿ ನದಿಗೆ ಅಣೆಕಟ್ಟು ನಿರ್ಮಿಸುವ ಮೂಲಕ ಮಾನಸಾಗರ ಸರೋವರವನ್ನು ನಿರ್ಮಿಸಿದ್ದರು.
ಅರವಳ್ಳಿ (Aravalli) ಬೆಟ್ಟಗಳ ಗರ್ಭದಲ್ಲಿರುವ ಜಲ್ ಮಹಲ್ ಅನ್ನು ‘ಐ ಬಾಲ್’ ಎಂದು ಕೂಡ ಕರೆಯಲಾಗುತ್ತದೆ. ಏಕೆಂದರೆ ಇದು ಮಾನಸಾಗರ ಕೆರೆಯ ಮಧ್ಯದಲ್ಲಿದೆ.
https://www.youtube.com/watch?v=IC5GJN2B4eM
ಇದರ ಹೊರತಾಗಿ ಇದನ್ನು ‘ರೊಮ್ಯಾಂಟಿಕ್ ಪ್ಯಾಲೇಸ್’ (Romantic palace) ಎಂದೂ ಸಹ ಕರೆಯಲಾಗುತ್ತಿತ್ತು. ಏಕೆಂದರೆ, ರಾಜ ತನ್ನ ರಾಣಿಯೊಂದಿಗೆ ವಿಶೇಷ ಸಮಯವನ್ನು ಕಳೆಯಲು ಈ ಅರಮನೆಯನ್ನು ಬಳಸುತ್ತಿದ್ದನು.

ಇದಲ್ಲದೇ ಅರಮನೆಯನ್ನು ರಾಜಮನೆತನದ ಹಬ್ಬಗಳಿಗೂ ಬಳಸಲಾಗುತ್ತಿತ್ತು. ಈ ಐದು ಅಂತಸ್ತಿನ ಜಲ್ ಮಹಲ್ ನ ವೈಶಿಷ್ಟ್ಯತೆ ಎಂದರೆ, ಅದರ ಒಂದು ಮಹಡಿ ಮಾತ್ರ ನೀರಿನ (Water) ಮೇಲೆ ಗೋಚರಿಸುತ್ತದೆ. ಉಳಿದ ನಾಲ್ಕು ಮಹಡಿಗಳು ನೀರಿನ ಅಡಿಯಲ್ಲಿವೆ.
ಇನ್ನು, ಈ ಅರಮನೆಯಲ್ಲಿ ಬೆಳಕ್ಕಿಲ್ಲದಿರುವುದಕ್ಕೆ ಇದೇ ಕಾರಣ. ಈ ಅರಮನೆಯಿಂದ ಪರ್ವತಗಳು ಮತ್ತು ಸರೋವರದ ಸುಂದರ ನೋಟವನ್ನು ಕಾಣಬಹುದು.
https://vijayatimes.com/intresting-facts-of-octopus/
ವಿಶೇಷವಾಗಿ ಬೆಳದಿಂಗಳ ರಾತ್ರಿಯಲ್ಲಿ, ಸರೋವರದ ನೀರಿನಲ್ಲಿರುವ ಈ ಅರಮನೆಯು ತುಂಬಾ ಸುಂದರವಾಗಿ ಕಾಣುತ್ತದೆ.
ಈ ಜಲ್ ಮಹಲ್ ನ ನರ್ಸರಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮರಗಳಿವೆ. ಇವುಗಳನ್ನು ಹಗಲು ರಾತ್ರಿ ಕಾವಲು ಕಾಯಲಾಗುತ್ತಿದ್ದು, ಸುಮಾರು 40 ತೋಟಗಾರರು ಈ ಕೆಲಸದಲ್ಲಿ ತೊಡಗಿದ್ದಾರೆ.