- ರಾಜ್ಯದಲ್ಲಿ ವಕ್ಫ್ ಕಾಯ್ದೆ (Waqf Act) ಅನುಷ್ಠಾನ ಮಾಡಲ್ಲವೆಂದು ಸಚಿವ ಜಮೀರ್ ಅಹಮದ್ (Minister Zameer Ahmed)
- ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳ (Bengal, Tamil Nadu and Kerala) ಸರ್ಕಾರಗಳು ಜಾರಿಗೊಳಿಸದಿರಲು ನಿರ್ಧಾರ
- ಕರ್ನಾಟಕದಲ್ಲೂ ವಕ್ಫ್ ತಿದ್ದುಪಡಿ ಕಾಯ್ದೆ (Waqf Amendment Act) ಜಾರಿಗೆ ತರುವ ಆಲೋಚನೆ ಇಲ್ಲ ಎಂದ ಸಚಿವ (Jameer statement on Waqf Act)
Hubli: ಈಗಾಗಲೇ ಹಲವು ವಿವಾದ ಹಾಗೂ ವಿರೋಧಗಳ ನಡುವೆ ಲೋಕಸಭೆಯಲ್ಲಿ ವಕ್ಫ್ (Waqf in Lok Sabha) ತಿದ್ದುಪಡಿ ಮಸೂದೆ ಮಂಡನೆಯಾಗಿ, ಬಹುಮತಗಳಿಂದ (Majorities) ಅಂಗೀಕಾರ ಕೂಡ ಆಗಿದೆ. ಆದರೆ ಈ ಬೆನ್ನಲ್ಲೇ ಕೆಲವು ರಾಜ್ಯಗಳು ತಾವು (States themselves) ವಕ್ಫ್ ತಿದ್ದುಪಡಿ ಮಸೂದೆಯನ್ನು ರಾಜ್ಯದಲ್ಲಿ ಜಾರಿ ಮಾಡುವುದಿಲ್ಲ ಎಂದು ಘೋಷಿಸಿದೆ.
ಇದನ್ನೆಲ್ಲ ಕರ್ನಾಟಕದಲ್ಲೂ (Karnataka) ಕೂಡ ವಕ್ಫ್ ಮಸೂದೆಯನ್ನು ಜಾರಿ ಮಾಡಲಾಗುವುದಿಲ್ಲ ಎಂದು ಸಚಿವ ಜಮೀರ್ ಅಹಮದ್ ಖಾನ್ (Zameer Ahmed Khan) ಘೋಷಣೆ ಮಾಡಿದ್ದಾರೆ.
ಕೇಂದ್ರ ಸರ್ಕಾರ (Central Govt) ಜಾರಿಗೊಳಿಸಿರುವ ವಕ್ಫ್ ತಿದ್ದುಪಡಿ ಕಾಯ್ದೆಗೆ ನಮ್ಮ ರಾಜ್ಯ ಸರ್ಕಾರದ ವಿರೋಧವಿದೆ. ರಾಜ್ಯದಲ್ಲಿ ಅದನ್ನು ಅನುಷ್ಠಾನ ಮಾಡುವುದಿಲ್ಲ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಅಲ್ಲದೆ ವಕ್ಫ್ ಕಾಯ್ದೆಯನ್ನು ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳ ಸರ್ಕಾರಗಳು (Tamil Nadu and Kerala governments) ಜಾರಿಗೊಳಿಸದಿರಲು ನಿರ್ಧರಿಸಿವೆ ಎಂದು ತಿಳಿಸಿದ್ದಾರೆ.

ವಿವಿಧ ಯೋಜನೆಗಳಡಿ ಮಂಜೂರು ಮಾಡುವ ಮನೆಗಳ ನಿರ್ಮಾಣಕ್ಕೆ ಫಲಾನುಭವಿ ಭರಿಸುವ (Beneficiary-paid) ಹಣವನ್ನು ಸರ್ಕಾರವೇ ಪಾವತಿಸುವ ಬಗ್ಗೆ ಸಚಿವ ಸಂಪುಟದಲ್ಲಿ ಮಂಡಿಸಿ ಅನುಮೋದನೆ ಪಡೆಯಲು ಉದ್ದೇಶಿಸಲಾಗಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಬಾಕಿ ಇರುವ ಸುಮಾರು 9 ಲಕ್ಷ ಮನೆಗಳನ್ನು ಇನ್ನೊಂದು ವರ್ಷದೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಕೆಲ ವಸತಿ ಯೋಜನೆಗಳಡಿ ಸರ್ಕಾರ (Govt under the schemes) ಮನೆ ಕಟ್ಟುವುದಿಲ್ಲ. ಬದಲಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ (State Govt) ಸಹಾಯಧನದಿಂದ ಫಲಾನುಭವಿ ಕಟ್ಟಬೇಕಾಗುತ್ತದೆ.
ಇದನ್ನೂ ಓದಿ: http://ರಾಹುಲ್ ಗಾಂಧಿ ಪ್ರಧಾನಿ ಆಗಿದ್ರೆ, ಅಡುಗೆ ಅನಿಲದ ಬೆಲೆ ರೂ.2,500 ಮೀರುತ್ತಿತ್ತು:ಬಿ.ವೈ. ವಿಜಯೇಂದ್ರ ಟೀಕೆ
ಬಡವರಿಗೆ ಮನೆ ಕಟ್ಟಲು ಕಷ್ಟವಾಗುತ್ತಿರುವುದರಿಂದ ಫಲಾನುಭವಿಗಳು ಕಟ್ಟಬೇಕಾದ ಹಣವನ್ನು ಸರ್ಕಾರವೇ ಭರಿಸುವ (Government-funded) ಬಗ್ಗೆ ಚಿಂತನೆ ಮಾಡಲಾಗಿದೆ. ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ ಒಪ್ಪಿಗೆ ಪಡೆಯಲಾಗುವುದು ಎಂದು (Jameer statement on Waqf Act) ಹೇಳಿದರು.