Visit Channel

ಪವರ್ ಸ್ಟಾರ್ ‘ಅಪ್ಪು’ ವಾಯ್ಸ್ ನಲ್ಲಿ ಮತ್ತೆ ರೀ ರಿಲೀಸ್ ಆಗಲಿದೆ ಜೇಮ್ಸ್ ಚಿತ್ರ!

powerstar

ಅಪ್ಪು(Appu) ಅಗಲಿಕೆಯ ನೋವನ್ನು ಇಂದಿಗೂ ಯಾರೂ ಮರೆತಿಲ್ಲ. ಎಂದಿಗೂ ಮರೆಯೋಕೆ ಸಾಧ್ಯವೂ ಇಲ್ಲ. ಅವರ ನೆನಪು, ಅವರ ಮುಗ್ದ ಮಗುವಿನಂತಹ ನಿಷ್ಕಲ್ಮಶ ನಗು ಅಭಿಮಾನಿಗಳನ್ನ ಕಾಡಿ ನೋಯಿಸುತ್ತಿದೆ. ದೇವರು ಅವರಿಗೆ ಮಾಡಿದ ಅನ್ಯಾಯವನ್ನು ನೆನೆದು ಅಭಿಮಾನಿಗಳು ಹಿಡಿಶಾಪವನ್ನು ಇಂದಿಗೂ ಹಾಕುತ್ತಿದ್ದಾರೆ.

puneeth rajkumar

ಕರುನಾಡಿನ ಪ್ರತಿ ಮನೆಯಲ್ಲೂ ಇನ್ನೂ ಮೌನ ಆವರಿಸಿದೆ. ಈ ಮಧ್ಯೆ ಮಾರ್ಚ್ 17ರಂದು ಪವರ್​ ಸ್ಟಾರ್​(Powerstar) ಹುಟ್ಟುಹಬ್ಬದಂದು ಅವರ ಸಿನಿಮಾ ‘ಜೇಮ್ಸ್’(James) ರಿಲೀಸ್​ ಆಗಿ ಸೂಪರ್ ಹಿಟ್​ ಆಗಿತ್ತು. ಅಪ್ಪು ಅವರಿಗೆ ಸಹೋದರ ಸೆಂಚುರಿ ಸ್ಟಾರ್(Century Star)​ ಶಿವಣ್ಣ(Shivanna) ಅವರೇ ಧ್ವನಿ ನೀಡಿದ್ದರೂ, ಪುನೀತ್(Puneeth Rajkumar) ಅವರ ಧ್ವನಿಯನ್ನು ಅವರ ಅಭಿಮಾನಿಗಳು ಬಹಳಾನೇ ಮಿಸ್​ ಮಾಡಿಕೊಂಡಿದ್ದರು. ಹೌದು, ಜೇಮ್ಸ್​​ ಚಿತ್ರದಲ್ಲಿ ನಟ ಪುನೀತ್ ರಾಜ್‌ಕುಮಾರ್ ಧ್ವನಿ ಇಲ್ಲ.

ಅಪ್ಪು ಅಕಾಲಿಕ, ಅನಿರೀಕ್ಷಿತ ನಿಧನದಿಂದ ಈ ಚಿತ್ರಕ್ಕೆ ಅವರು ಡಬ್ ಮಾಡಲು ಸಾಧ್ಯವಾಗಲಿಲ್ಲ. ಶಿವರಾಜ್​ ಕುಮಾರ್​, ಪುನೀತ್​ ರಾಜ್​ಕುಮಾರ್​ ಅವರಿಗೆ ಧ್ವನಿ ನೀಡಿದ್ದರು. ಆದ್ರೆ ಅಪ್ಪು ಧ್ವನಿ ಕೇಳದೆ ನಿರಾಶರಾಗಿದ್ದ ಅಭಿಮಾನಿ ದೇವರುಗಳಿಗೆ, ಇದೀಗ ಚಿತ್ರತಂಡದಿಂದ ಗುಡ್​ ನ್ಯೂಸ್​ ಸಿಕ್ಕಿದೆ. ‘ಜೇಮ್ಸ್’ ಚಿತ್ರ ಅಪ್ಪು ಅಭಿಮಾನಿಗಳಿಗೆ ಹಾಗೇ ಕನ್ನಡ ಚಿತ್ರರಂಗದ ಪಾಲಿಗೂ ಕೂಡ ವಿಶೇಷ ಚಿತ್ರವಾಗಿದೆ. ಹಾಗಾಗಿ ಈ ಚಿತ್ರವನ್ನು ತೆರೆಗೆ ತರಲು ‘ಜೇಮ್ಸ್’ ಚಿತ್ರ ತಂಡ ಸಿಕ್ಕಾಪಟ್ಟೆ ಕಷ್ಟ ಪಟ್ಟಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ! ಇದೀಗ ಮತ್ತೆ ಚಿತ್ರ ರೀ ರಿಲೀಸ್ ಆಗಲಿದೆ.

ಅದು ಪುನೀತ್​ ರಾಜ್​ಕುಮಾರ್​ ಅವರ ಧ್ವನಿಯಲ್ಲೇ! ಈ ವಿಚಾರ ತಿಳಿದ ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳು ಫುಲ್​ ಖುಷಿಯಾಗಿದ್ದಾರೆ. ಹೌದು, ಮುಂದಿನ ವಾರ ‘ಜೇಮ್ಸ್’ ಮರು ಬಿಡುಗಡೆ ಆಗುತ್ತಿದೆ. ‘ಇನ್ನು ಈ ಚಿತ್ರವನ್ನು ಶಿವಣ್ಣ ನೋಡಬೇಕು, ನಾವು ಚಿತ್ರವನ್ನು ನೋಡಿದ್ದೇವೆ. ಈಗ ಇರುವ ಚಿತ್ರಮಂದಿರಗಳಲ್ಲಿ ಅಪ್ಪು ಧ್ವನಿ ಇರುವ ಚಿತ್ರ ಅಪ್ಡೇಟ್ ಆಗುತ್ತದೆ” ಎಂದು ನಿರ್ದೇಶಕ ಚೇತನ್​ ಕುಮಾರ್​ ಹೇಳಿದ್ದಾರೆ. ಈ ವಿಚಾರ ಅಭಿಮಾನಗಳಿಗೆ ಮತ್ತಷ್ಟು ಸಂತಸ ಮೂಡಿಸಿದೆ.

james

ಜೇಮ್ಸ್ ಚಿತ್ರದಲ್ಲಿ ಅಪ್ಪು ಸರ್ ಧ್ವನಿ ತರಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇವೆ. ತಾಂತ್ರಿಕ ಸಂಸ್ಥೆ ಒಂದಕ್ಕೆ ಇದರ ಕೆಲಸ ವಹಿಸಿದ್ದು, ಅಪ್ಪು ಅವರ 15 ಗಂಟೆಯ ಧ್ವನಿ ಸಂಗ್ರಣೆಯಿಂದ, ಈ ಸಂಸ್ಥೆ ಜೇಮ್ಸ್ ಚಿತ್ರದಲ್ಲಿ ಅಪ್ಪು ಧ್ವನಿ ಉಳಿಸಿದೆ. ಮೂರು ವರ್ಷಗಳ ಪ್ರಯತ್ನದಲ್ಲಿ ಇದು ಈ ಸಂಸ್ಥೆಗೆ ಸಿಕ್ಕ ಮೊದಲ ಯಶಸ್ಸು ಅಂತ ಚೇತನ್ ಕುಮಾರ್ ಹೇಳಿದ್ದಾರೆ.
ಅಪ್ಪು ಇಲ್ಲದ ನೋವು ಅವರ ಧ್ವನಿಯನ್ನ ಮತ್ತೆ ಕೇಳುವ ಮೂಲಕ ಕೊಂಚವಾದ್ರೂ ಕಡಿಮೆಯಾಗಲಿ ಎಂಬುದು ನಮ್ಮೆಲ್ಲರ ಆಶಯ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.