ಜಾವಾ ಪ್ಲಮ್ (Java Plum) , ಜಾಮೂನ್ ಫ್ರೂಟ್ ಎಂದೆಲ್ಲಾ ಕರೆಯಲ್ಪಡುವ (Jamun fruit health benefits) ಈ ಹಣ್ಣನ್ನು ಆಡುಭಾಷೆಯಲ್ಲಿ ನೇರಳೆ ಹಣ್ಣೆಂದು (purple fruit) ಕರೆಯಲಾಗುತ್ತದೆ. ಇದು ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ.ನೇರಳೆ ಹಣ್ಣಿನಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ (Blood sugar level) ಮತ್ತು ರಕ್ತದೊತ್ತಡವನ್ನು (Blood pressure) ನಿಯಂತ್ರಿಸಲು ಸಹಾಯ ಮಾಡುವ ಅಂಶಗಳಿವೆ.
ಜೊತೆಗೆ ಕಣ್ಣುಗಳನ್ನು ಆರೋಗ್ಯವಾಗಿಡಲು (Keep you healthy) ಮತ್ತು ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಈ ರೀತಿ ಸೇವಿಸಿದರೆ ಫಲಿತಾಂಶ (Result if consumed) ಕೆಲವೇ ದಿನಗಳಲ್ಲಿ ಗೋಚರಿಸುತ್ತದೆ.
ಆಯುರ್ವೇದ ವೈದ್ಯರುಗಳ ಪ್ರಕಾರ ಐಬಿಎಸ್ (IBS) , ಅತಿಸಾರ, ಅತಿಯಾದ ರಕ್ತಸ್ರಾವ , ಲ್ಯುಕೋರಿಯಾ , ವಾಕರಿಕೆ ಮತ್ತು ವಾಂತಿ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ನೇರಳೆ ಹಣ್ಣು ಅಮೃತವಾಗಿದೆ.ಇದರ ಗುಣಲಕ್ಷಣಗಳು ಹೃದಯದ ಆರೋಗ್ಯಕ್ಕೂ (Heart health) ಒಳ್ಳೆಯದು ಜೊತೆಗೆ ಮಧುಮೇಹಿಗಳಿಗೂ ಈ ಹಣ್ಣು ಬಹಳ ಪ್ರಯೋಜನಕಾರಿಯಾಗಿದೆ. ನೇರಳೆ ಹಣ್ಣನ್ನು ಮಾತ್ರವಲ್ಲದೆ ಅದರ ಬೀಜಗಳು (Seeds) , ತೊಗಟೆ ಮತ್ತು ಎಲೆಗಳನ್ನು ವಿವಿಧ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.

ಇಡೀ ದೇಹದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುವ ಫ್ಲೇವನಾಯ್ಡ್‌ಗಳ ಜೊತೆಗೆ ಜಾಮೂನ್ ಉತ್ಕರ್ಷಣ ನಿರೋಧಕಗಳ ಗುಣಗಳನ್ನು ಸಹ ಹೊಂದಿದೆ.ಜಾಮೂನ್ ವಿಟಮಿನ್ ಎ ಮತ್ತು ಸಿ ಯ (Vitamin A and C) ಉತ್ತಮ ಮೂಲವಾಗಿದೆ, ಇದು ಕಣ್ಣು ಮತ್ತು ಚರ್ಮದ ಆರೋಗ್ಯಕ್ಕೆ (eye and skin health) ತುಂಬಾ ಪ್ರಯೋಜನಕಾರಿಯಾಗಿದೆ. ಇದರೊಂದಿಗೆ, ಹೊಳೆಯುವ ಚರ್ಮಕ್ಕಾಗಿ (Glowing skin) ಮತ್ತು ಮೊಡವೆಗಳನ್ನು ಮೂಲದಿಂದ (Root of acne) ತೆಗೆದುಹಾಕಲು ಸಹ ನೇರಳೆ ಹಣ್ಣನ್ನು ಸೇವಿಸಲಾಗುತ್ತದೆ.
ನೇರಳೆ ಹಣ್ಣಿನಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ, ಪ್ರೋಟೀನ್, ಫೈಬರ್, (Calcium, protein, fiber,) ಕಾರ್ಬೋಹೈಡ್ರೇಟ್‌ಗಳು ಮತ್ತು ಆಂಟಿಆಕ್ಸಿಡೆಂಟ್ʼಗಳಲ್ಲಿ ಸಮೃದ್ಧವಾಗಿದೆ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು (Immunity) ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ, ಇದು ಹೆಚ್ಚಿನ ಪ್ರಮಾಣದ ಕ್ಯಾರೋಟಿನ್ ಮತ್ತು ಕಬ್ಬಿಣವನ್ನು (Carotene and iron) ಹೊಂದಿರುತ್ತದೆ, ಇದು ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: http://ಚೀನಾದಲ್ಲೀಗ 10 ಜಿ ನೆಟ್ : 1000 ಎಂಬಿಪಿಎಸ್ ವೇಗದ ನೆಟ್ ವರ್ಕ್ ಅಭಿವೃದ್ಧಿ ಪಡಿಸಿದ ಚೀನಾ
ನೇರಳೆ ಹಣ್ಣು ಸೀಸನಲ್ ಫ್ರೂಟ್ ಆಗಿದ್ದು, ಬೆಳೆಯುವ (Jamun fruit health benefits) ಸಂದರ್ಭದಲ್ಲಿ ಸೇವಿಸಿದರೆ ಅದರ ಪ್ರಭಾವ ವರುಷಗಳ ಕಾಲ ಹಾಗೇ ಇರುತ್ತದೆ. ಇನ್ನು ಇದಕ್ಕೆ ದಾಳಿಂಬೆ, ಬೀಟ್ರೂಟ್, ಕ್ಯಾರೆಟ್ (Pomegranate, beetroot, carrot) ಅನ್ನು ಸಣ್ಣ ಪ್ರಮಾಣದಲ್ಲಿ ತೆಗೆದುಕೊಂಡು ಅವುಗಳನ್ನು ಗ್ರೈಂಡರ್ʼನಲ್ಲಿ ಹಾಕಿ ರುಬ್ಬಿ ಜ್ಯೂಸ್ ಮಾಡಿಯೂ ಕುಡಿಯಬಹುದು.