ಮಾದಕ ನಟಿ ಶಕೀಲಾ ಕುರಿತಾದ ತಮ್ಮ ನಿರ್ದೇಶನದ ‘ಶಕೀಲಾ’ ಚಿತ್ರ ಜನ ಮೆಚ್ಚುಗೆ ಪಡೆದಿರುವುದಾಗಿ ನಿರ್ದೇಶಕ ಇಂದ್ರಜಿತ್ ತಿಳಿಸಿದ್ದಾರೆ. ಅವರು ಮಾಧ್ಯಮದ ಜೊತೆಗೆ ಮಾತನಾಡುತ್ತಾ ಈ ವಿಷಯ ಪ್ರಸ್ತಾಪಿಸಿದರು.
“ಕೋವಿಡ್ ಕಾರಣ ಐವತ್ತು ಪರ್ಸೆಂಟ್ ಮಾತ್ರ ಸೀಟು ತುಂಬಲು ಸಾಮರ್ಥ್ಯ ಪಡೆದಿರುವ ಥಿಯೇಟರ್ ಜೊತೆಗೆ ಸಿನಿಮಾದ ಕಲೆಕ್ಷನ್ ದೊಡ್ಡ ಮಟ್ಟದಲ್ಲಾಗಲು ಸಾಧ್ಯವಿಲ್ಲ. ಆದರೆ ಚಿತ್ರ ನೋಡಿದ ದುಬೈ, ಮಿಡ್ಲ್ ಈಸ್ಟ್, ಮುಂಬೈ, ತಮಿಳುನಾಡು ಕಡೆಯಿಂದ ಒಳ್ಳೆಯ ಅಭಿಪ್ರಾಯ ದೊರಕಿದೆ.
ಈಗಾಗಲೇ ಸುಮಾರು ಒಂದೂವರೆ ಸಾವಿರದಷ್ಟು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿದೆ. ಉತ್ತರ ಕರ್ನಾಟಕದಲ್ಲಿ ನೂರು ಪರ್ಸೆಂಟ್ ಸೀಟು ನೀಡಲಿಕ್ಕಾಗಿ ಒತ್ತಾಯ ನಡೆಯುತ್ತಿದೆ. ನಾನು ಕೂಡ ಅವರನ್ನು ಬೆಂಬಲಿಸುತ್ತೇನೆ. ಯಾಕೆಂದರೆ ಬೇರೆಲ್ಲ ಕಡೆ ಒಪ್ಪಿಗೆ ದೊರಕಿರುವಾಗ ಥಿಯೇಟರ್ ಮಾತ್ರ ಯಾಕೆ ಅರ್ಧ ಮಾತ್ರ ತುಂಬಿದ್ರೆ ಸಾಕು ಅಂತೀರ?”
1500 ಚಿತ್ರಗಳಲ್ಲಿ ಬಿಡುಗಡೆಯಾಗಿದೆ. ಜನವರಿಯಿಂದ ಆಂಧ್ರ, ತೆಲಂಗಾಣದಲ್ಲಿ ಬಿಡುಗಡೆಯಾಗಲಿದೆ. ಮಹಿಳೆಯರು ಕೂಡ ಸಿನಿಮಾ ಮೆಚ್ಚಿಕೊಂಡಿದ್ದಾರೆ.
ಮನರಂಜನೆ ಮತ್ತು ಮಾಧ್ಯಮದ ಕಷ್ಟದ ದಿನಗಳಲ್ಲಿ ಈ ಮಟ್ಟಿಗೆ ಬೆಂಬಲ ಸಿಕ್ಕಿರುವುದು ಖುಷಿಯಾಗಿದೆ” ಎಂದರು ಇಂದ್ರಜಿತ್. ಪುರುಷ ಪ್ರಧಾನ ಸಮಾಜದಲ್ಲಿದ್ದುಕೊಂಡು ಒಂದು ಕಾಲದಲ್ಲಿ ಪೋರ್ನ್ ಸ್ಟಾರ್ ಆಗಿದ್ದರೂ ಪ್ರಸ್ತುತ ನೆಮ್ಮದಿಯಿಂದ ಬದಕಲು ಶಕೀಲಾ ತೋರಿಸಿರುವ ಧೈರ್ಯವೇ ನನಗೆ ಚಿತ್ರ ಮಾಡಲು ಸ್ಫೂರ್ತಿ ದೊರಕಿದೆ. ಅದರ ಹೊರತು ಅಶ್ಲೀಲ ಸಿನಿಮಾ ಮಾಡಿ ಜನಾಕರ್ಷಿಸುವ ಉದ್ದೇಶ ತಮ್ಮದಲ್ಲ ಎನ್ನುವುದನ್ನು ಇಂದ್ರಜಿತ್ ಈ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದರು.