English English Kannada Kannada

ಜನರ ಸೀಟಿ ಹಾಗೂ ಕೇಕೆಗೆ ಸಿದ್ದರಾಮಯ್ಯ ಭಾಷಣ: ಎಂಎಲ್ಸಿ ವಿಶ್ವನಾಥ್ ಕಿಡಿ

ಮೈಸೂರು: ನಾನತ್ವದಿಂದಲೇ ಅಧಿಕಾರ ಕಳೆದುಕೊಂಡ ಸಿದ್ದರಾಮಯ್ಯ 10 ಕೆಜಿ ಅಕ್ಕಿ ಬೇಕಾದರೆ ಕೊಡಲಿ. ಆದರೆ ಅನ್ನಭಾಗ್ಯ ಅಕ್ಕಿ ಅರ್ಹರಿಗೆ ತಲುಪುವಂತೆ ನೋಡಿಕೊಳ್ಳಲಿ ಅಂತ ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಕುಟುಕಿದರು.

ಮೈಸೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯನನ್ನು ಉದ್ದಾರ ಮಾಡಲು ಹೋಗಿ ನಾನು ಹಾಳಾಗಿದೆ. ದೇವೇಗೌಡರು ಅವರನ್ನು ಪಕ್ಷದಿಂದ ಹೊರ ಹಾಕಿದ್ದರು. ನಾನು ಸಾಕಷ್ಟು ಜನರ ಕಾಲು ಹಿಡಿದು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಂಡು ಬಂದೆ.

ಸಿದ್ದರಾಮಯ್ಯ ಅವಧಿಯಲ್ಲೇ ಕುರುಬ ಜನಾಂಗಕ್ಕೆ ಹೆಚ್ಚು ಅನ್ಯಾಯ ಆಗಿದೆ. ಕೇವಲ ದರ್ಪ, ದುರಂಹಕಾರದಿಂದ ಸರ್ಕಾರ ನಡೆಸಲು ಸಾಧ್ಯವಿಲ್ಲ. ಇತ್ತೀಚೆಗೆ ಕೇವಲ ಜನರ ಸೀಟಿ ಹಾಗೂ ಕೇಕೆಗೆ ಸಿದ್ದರಾಮಯ್ಯ ಭಾಷಣ ಮಾಡುತ್ತಾರೆ. ಚುನಾವಣೆಗೆ ಇನ್ನೂ 2.5 ವರ್ಷ ಇರುವಾಗಲೇ ಅಧಿಕಾರಕ್ಕೆ ಬರ್ತೇವೆ ಅಂತ ಬೊಬ್ಬೆ ಹೊಡೆಯುತ್ತಿದ್ದೀರ. ಜನ ನಿಮಗೆ ತಕ್ಕ ಪಾಠ ಕಲಿಸ್ತಾರೆ.

ಸಿದ್ದರಾಮಯ್ಯನವರೇ ನೀವು ʻನಾನು.. ನಾನು..ʼ ಅನ್ನೋ ಅಹಂಕಾರದಿಂದ ಪಾತಾಳ ಮುಟ್ಟಿದ್ದೀರಿ. ನಿಮ್ಮ ಜೊತೆ ಕುರುಬ ಸಮುದಾಯವೂ ಸೇರಿದಂತೆ ಯಾವ ಸಮುದಾಯವು ಇಲ್ಲ, ನಾಯಕರೂ ಇಲ್ಲ. ನೀವು ಕೊಟ್ಟ ಹಿಂಸೆಯನ್ನು ಮಲ್ಲಿಕಾರ್ಜುನ ಖರ್ಗೆ ಮರೆತಿದ್ದಾರಾ? ಡಿ.ಕೆ.ಶಿವಕುಮಾರ್, ಪರಮೇಶ್ವರ್‌ ಆ‌ ನೋವನ್ನು ಮರೆತಿದ್ದಾರಾ? ನಿಮ್ಮನ್ನು ಅವರು ಸುಮ್ಮನೇ ಬಿಡುತ್ತಾರಾ? ಕುರುಬ ಸಮುದಾಯದವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಮಗೆ ಮತ ಹಾಕಲಿಲ್ಲ. ಇದು ನಿಮ್ಮ ಸ್ಥಿತಿ, ಇದನ್ನು ಅರ್ಥ ಮಾಡಿಕೊಳ್ಳಿ ಎಂದು ತಿಳಿಸಿದರು.

ಇನ್ನು, ಬಿಪಿಎಲ್ ಕಾರ್ಡ್ ಬಗ್ಗೆ ಇದೇ ವೇಳೆ ಮಾತನಾಡಿದ ವಿಶ್ವನಾಥ್, ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ಗಳ ಕಡಿತ ಆಗಬೇಕು ಅಂತ ಹೇಳಿದ್ರು ರಾಜ್ಯದಲ್ಲಿ ಶೇ.85 ಬಿಪಿಎಲ್ ಕಾರ್ಡ್ ಇದೆ. ಹಾಗಾದ್ರೆ ರಾಜ್ಯ ಯಾವ ಧಿಕ್ಕಿನಲ್ಲಿ ಹೋಗುತ್ತಿದೆ ಇದನ್ನು ಯಾರು ಕೇಳಬಾರದ ಅಂತ ವಿಷಾದ ವ್ಯಕ್ತಪಡಿಸಿದರು. ಒಂದೊಂದು ಮನೆಯಲ್ಲಿ 4 ಬಿಪಿಎಲ್ ಕಾರ್ಡ್ ಇದೆ. ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸುತ್ತಿಲ್ಲ. ಅನ್ನಭಾಗ್ಯ ಅಕ್ಕಿಯಿಂದ ಸಾಕಷ್ಟು ಮಂದಿ ಕೋಟ್ಯಾಧಿಪತಿ ಆಗಿದ್ದಾರೆ ಎಂದರು.

ರಾಜ್ಯದ ಅಕ್ಕಿ, ಕೇರಳ, ತಮಿಳುನಾಡು, ಆಂಧ್ರಪ್ರದೇಶಕ್ಕೆ ಅಕ್ರಮ ಸಾಗಣೆ ಆಗಿದೆ ಅಂತ ಆರೋಪಿಸಿದ್ರು. ಇದೆಲ್ಲ ಜನರ ತೆರಿಗೆ ಹಣ, ಅದು ಪೋಲಾಗುತ್ತಿದೆ. ರಾಜ್ಯದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp

Submit Your Article