ಜನವರಿ 8ಕ್ಕೆ ‘ಅಮೃತ ವಾಹಿನಿ‌’ ತೆರೆಗೆ

ಖ್ಯಾತ ಸಾಹಿತಿ ಡಾ.ಹೆಚ್.ಎಸ್.ವೆಂಕಟೇಶ್ ಮೂರ್ತಿ‌ ಪ್ರಥಮ ಬಾರಿಗೆ ಪ್ರಧಾನಪಾತ್ರದಲ್ಲಿ ಅಭಿನಯಿಸಿರುವ ‘ಅಮೃತ ವಾಹಿನಿ’ ಚಿತ್ರ ಜನವರಿ 8 ರಂದು ತೆರೆಗೆ ಬರಲಿದೆ.

ಯು. ವಿ. ಪ್ರೊಡಕ್ಷನ್ ಲಾಂಛನದಲ್ಲಿ ಅನಂತಪದ್ಮನಾಭ ಅರ್ಪಿಸುವ, ಈ‌ ಚಿತ್ರವನ್ನು ಕೆ. ಸಂಪತ್ ಕುಮಾರ್ ಹಾಗೂ ಅಕ್ಷಯ್ ರಾವ್ ನಿರ್ಮಿಸಿದ್ದಾರೆ.

ಕೌಟುಂಬಿಕ ಕಥಾಹಂದರ ಹೊಂದಿರುವ ‌ಈ ಚಿತ್ರಕ್ಕೆ ರಾಘವೇಂದ್ರ. ಬಿ. ಪಾಟೀಲ್ ಕಥೆ ಬರೆದಿದ್ದು, ಕೆ.ನರೇಂದ್ರ ಬಾಬು ಚಿತ್ರಕಥೆ ಬರೆದು ನಿರ್ದೇಶನ‌ ಮಾಡಿದ್ದಾರೆ.

ಕೆ.ನರೇಂದ್ರ ಬಾಬು ಈ ಹಿಂದೆ ಪಲ್ಲಕ್ಕಿ, ಯುವ, ಓ‌ ಗುಲಾಬಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಡಾ.ಹೆಚ್ ಎಸ್ ವೆಂಕಟೇಶ್ ಮೂರ್ತಿ ಅವರೆ ಈ ಚಿತ್ರದ ಹಾಡುಗಳನ್ನು ಬರೆದಿದ್ದು, ಉಪಾಸನಾ ಮೋಹನ್ ಸಂಗೀತ ನೀಡಿದ್ದಾರೆ. ಶಿವಾನಂದ್ ಸಂಭಾಷಣೆ ಬರೆದಿದ್ದಾರೆ. ಗಿರಿಧರ್ ದಿವಾನ್ ಛಾಯಾಗ್ರಹಣ ಹಾಗೂ ಕೆ.ಗಿರೀಶ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ. ಡಾ.ಎಚ್. ಎಸ್. ವೆಂಕಟೇಶ್ ಮೂರ್ತಿ,ವೈದ್ಯ ಶಿವಮೊಗ್ಗ, ಸಂತೋಷ್ ಕರ್ಕಿ,ಮಧು ಸಾಗರ್, ಮಂಜೇಶ್ ಕಲಾಲ್, ಭಾಸ್ಕರ್, ಜಗದೀಶ್, ಮಂಜುನಾಥ್ ಬೂದಿಹಾಳಮಟ್, ಮಾ.ಆರ್ಯನ್ ಸೂರ್ಯ, ಡಾ.ವತ್ಸಲಾ ಮೋಹನ್, ಸುಪ್ರಿಯಾ. ಎಸ್. ರಾವ್, ಗೀತಾ ಸೂರ್ಯವಂಶಿ, ಆರ್. ಟಿ. ರಮಾ, ಬೇಬಿ ಋತ್ವಿ, ಡಾ.ಶೈಲಾ ಮೊದಲಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಅಮೃತ ವಾಹಿನಿ‌ ಈಗಾಗಲೇ ಕೊಲ್ಕತ್ತಾ ಚಲನಚಿತ್ರೋತ್ಸವದಲ್ಲಿ(CClT) ಪ್ರದರ್ಶನವಾಗಿದ್ದು, ಉತ್ತಮ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.

Latest News

ಆರೋಗ್ಯ

ಸಕ್ಕರೆ ಖಾಯಿಲೆ ಇರುವವರು ಈ ಹಣ್ಣುಗಳನ್ನು ಸೇವಿಸಬಹುದು ; ತಪ್ಪದೇ ಈ ಮಾಹಿತಿ ಓದಿ

ತಜ್ಞರ ಪ್ರಕಾರ, ಸಕ್ಕರೆ ಕಾಯಿಲೆ ಇರುವವರು ಈ 5 ವಿಧದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅಂತಹ ಹಣ್ಣುಗಳ ವಿವರ ಇಲ್ಲಿದೆ ನೋಡಿ.

ದೇಶ-ವಿದೇಶ

ದೇಶದ ಹೆಮ್ಮೆ ತ್ರಿವರ್ಣ ಧ್ವಜವೂ ಕೂಡ ಬಿಜೆಪಿಗೆ ವ್ಯಾಪಾರದ ಸರಕಾಗಿದೆ : ಬಿ.ಕೆ.ಹರಿಪ್ರಸಾದ್

38×11,80,000=4.484 ಕೋಟಿ, ಹೇಗಿದೆ ಮೋದಿ ಸರ್ಕಾರದ ಲೂಟಿ? ಕೇಂದ್ರದ ಮೋದಿ ಸರ್ಕಾರ ವಸೂಲಿ ಬಾಜಿತನಕ್ಕೆ ರಾಷ್ಟ್ರಧ್ವಜವನ್ನ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ

ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್‌ 2022 ; ಕಂಚಿನ ಪದಕ ಗೆದ್ದ ಪತ್ನಿಯನ್ನು ಅಭಿನಂದಿಸಿದ ದಿನೇಶ್ ಕಾರ್ತಿಕ್

ಭಾರತದ ಸ್ಕ್ವ್ಯಾಶ್ ಆಟಗಾರ್ತಿ ದೀಪಿಕಾ ಪಲ್ಲಿಕ್ಕಲ್(Deepika Pallikal) ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ(Bronze Medal) ಗೆದ್ದುಕೊಂಡಿದ್ದಾರೆ.

ಆರೋಗ್ಯ

ದೇಹ ನೀಡುವ `ಈ’ ಸೂಚನೆಗಳು ಕಿಡ್ನಿ ವೈಪಲ್ಯವನ್ನು ಸೂಚಿಸುತ್ತವೆ ; ಇಲ್ಲಿದೆ ಮಾಹಿತಿ ಓದಿ

ಕಿಡ್ನಿ(Kidney) ನಮ್ಮ ದೇಹದ ಪ್ರಮುಖ ಅಂಗವಾಗಿದೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಮುಖ್ಯ ಪಾತ್ರವಹಿಸುತ್ತವೆ.