Japan Earthquake Live Updates Kannada today
7.1-magnitude earthquake struck Kyushu Island in Southern Japan today
Kyushu: ಇಂದು ದಕ್ಷಿಣ ಜಪಾನ್ನ (Southern Japan) ಕ್ಯುಶು ದ್ವೀಪದಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಜಪಾನಿನ ಸಾರ್ವಜನಿಕ ಪ್ರಸಾರಕ NHK ಈ ಹಿಂದೆ ಭೂಕಂಪದ ಪ್ರಾಥಮಿಕ ತೀವ್ರತೆಯನ್ನು 6.9 ಎಂದು ವರದಿ ಮಾಡಿತ್ತು.ಭೂಕಂಪವು ಜಪಾನ್ನ ದಕ್ಷಿಣ ಮುಖ್ಯ ದ್ವೀಪವಾದ ಕ್ಯುಶುವಿನ ಪೂರ್ವ ಕರಾವಳಿಯಲ್ಲಿ ಸುಮಾರು 30 ಕಿಲೋಮೀಟರ್ ಆಳದಲ್ಲಿ ಕೇಂದ್ರೀಕೃತವಾಗಿದೆ ಎಂದು ಜಪಾನ್ ಹವಾಮಾನ ಸಂಸ್ಥೆಯು ತಿಳಿಸಿದೆ.
ಜಪಾನ್ ಸರ್ಕಾರವು ಭೂಕಂಪ ಮುನ್ನೆಚ್ಚರಿಕೆ ಕ್ರಮವಾಗಿ ವಿಶೇಷ ಕಾರ್ಯಪಡೆಯನ್ನು ಸ್ಥಾಪಿಸಿದೆ ಎಂದು AFP ವರದಿ ಮಾಡಿದೆ. ವರದ ಪ್ರಕಾರ, ಯಾವುದೇ ರೀತಿಯ ದೊಡ್ಡ ಹಾನಿ ಸಂಭವಿಸಿರುವ ತಕ್ಷಣದ ಲಕ್ಷಣಗಳು ಕಂಡುಬಂದಿಲ್ಲ.
ಸುಮಾರು 125 ಮಿಲಿಯನ್ ಜನರಿಗೆ ನೆಲೆಯಾಗಿರುವ ಈ ದ್ವೀಪಸಮೂಹವು ಪ್ರತಿ ವರ್ಷ ಸುಮಾರು 1,500 ಭೂಕಂಪಗಳಿಗೆ ಈಡಾಗುತ್ತದೆ. ಅವುಗಳಲ್ಲಿ ಬಹುಪಾಲು ಸೌಮ್ಯವಾಗಿರುತ್ತವೆ, ಆದರೂ ಅವು ಉಂಟುಮಾಡುವ ಹಾನಿಯು ಅವುಗಳ ಸ್ಥಳ ಮತ್ತು ಭೂಮಿಯ ಮೇಲ್ಮೈಗಿಂತ ಕೆಳಗಿರುವ ಆಳಕ್ಕೆ ಅನುಗುಣವಾಗಿ ಬದಲಾಗುತ್ತದೆ.
ಹೊಸ ವರ್ಷದ ದಿನದಂದು, ಪೆನಿನ್ಸುಲಾದಲ್ಲಿ ಸಂಭವಿಸಿದ ಭಾರೀ ಭೂಕಂಪದ (Earthquake) ನಂತರ ಕನಿಷ್ಠ 260 ಜನರು ಸಾವನ್ನಪ್ಪಿದರು, ಇದರಲ್ಲಿ 30 “ಕಂಪನ-ಸಂಬಂಧಿತ” ಸಾವುಗಳು ಮತ್ತು ದುರಂತದಲ್ಲಿ ನೇರವಾಗಿ ಸಾವನ್ನಪ್ಪಿದವರು ಸೇರಿದ್ದಾರೆ. ಜನವರಿ 1 ರ ಭೂಕಂಪ ಮತ್ತು ಅದರ ನಂತರದ ಆಘಾತಗಳು ಕಟ್ಟಡಗಳನ್ನು ನೆಲಸಮ ಮಾಡಿತು. ಕುಟುಂಬಗಳು ಹೊಸ ವರ್ಷವನ್ನು ಆಚರಿಸುತ್ತಿದ್ದ ಸಮಯದಲ್ಲಿ ಇದು ಸಂಭವಿಸಿತ್ತು
2011ರ ದುರಂತವು ಫುಕುಶಿಮಾ ಪರಮಾಣು ಸ್ಥಾವರದಲ್ಲಿ ಮೂರು ರಿಯಾಕ್ಟರ್ಗಳನ್ನು ಕುಸಿತಕ್ಕೆ ಕಾರಣವಾಯಿತು. ಇದು ಜಪಾನ್ನ ಯುದ್ಧಾನಂತರದ ಅತ್ಯಂತ ಕೆಟ್ಟ ದುರಂತ ಮತ್ತು ಚೆರ್ನೋಬಿಲ್ (Chernobyl) ನಂತರದ ಅತ್ಯಂತ ಗಂಭೀರವಾದ ಪರಮಾಣು ಅಪಘಾತಕ್ಕೆ ಕಾರಣವಾಯಿತು.