Visit Channel

ಜಪಾನಿಯರ ಧೀರ್ಘಾಯುಷ್ಯದ ಗುಟ್ಟು ಏನು ಗೊತ್ತಾ? ಇಲ್ಲಿದೆ ಮಾಹಿತಿ

Japan

ಭಾರತ(India) ಸೇರಿದಂತೆ ಬಹುತೇಕ ರಾಷ್ಟ್ರಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಇತ್ತೀಚಿನ ವರ್ಷಗಳಲ್ಲಿ ಹೃದ್ರೋಗ ಕಾಯಿಲೆ ಮತ್ತು ಕ್ಯಾನ್ಸರ್ ನಿಂದ ಮರಣ ಹೊಂದಿದವರ ಲೆಕ್ಕಾಚಾರದ ಅಂಕಿಅಂಶಗಳ ಪ್ರಕಾರ,

ಅಂತಾರಾಷ್ಟ್ರೀಯ ಹೋಲಿಕೆಯಲ್ಲಿ ಜಪಾನ್(Japan) ಪ್ರಜೆಗಳು ಅತಿ ಹೆಚ್ಚು ಸರಾಸರಿ ಜೀವಿತಾವಧಿಯನ್ನು ಹೊಂದಿದ್ದಾರೆ ಎಂದು ಟೋಕಿಯೋದ ಸಾರ್ವಜನಿಕ ಆರೋಗ್ಯ ವಿಜ್ಞಾನಗಳ ಕೇಂದ್ರದ ಶೋಯಿಚಿರೊ ತ್ಸುಗನೆ ಹೇಳುತ್ತಾರೆ.

People of japan

“ಯುರೋಪಿಯನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ಅಂಡ್ ನೇಚರ್ ಡಾಟ್ ಕಾಂ” ನಲ್ಲಿ ಪ್ರಕಟವಾದ ವರದಿಯಲ್ಲಿ ಸಂಶೋಧಕರು ಜಪಾನೀಯರ ಜೀವಿತಾವಧಿಯು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ ಎಂದು ಹೇಳಿದರು.

ಹೃದ್ರೋಗ ಮತ್ತು ಕ್ಯಾನ್ಸರ್ ನಿಂದ ಕಡಿಮೆ ಮರಣ ಪ್ರಮಾಣವು ಜಪಾನ್ ಜನರ ಆರೋಗ್ಯದ ಪ್ರತಿಬಿಂಬವಾಗಿದೆ.

ಜಪಾನಿನ ಪುರುಷರು ಮತ್ತು ಮಹಿಳೆಯರು ಉತ್ತಮ ಆರೋಗ್ಯದೊಂದಿಗೆ ದೀರ್ಘಾಯುಷ್ಯ ಹೊಂದಿರಲು ಕಾರಣವಾಗಿರುವ ಪ್ರಮುಖ ಅಂಶಗಳು ಯಾವುವು ಗೊತ್ತಾ? ವಾಹನವನ್ನು ಹೆಚ್ಚು ಬಳಸದೆ ನಡೆದುಕೊಂಡು ಹೋಗುತ್ತಾರೆ.

ಜಪಾನ್ ದೇಶದಿಂದ ಕೆಲವು ಅತ್ಯುತ್ತಮ ಕಾರುಗಳು ಮತ್ತು ಮೋಟಾರ್ ಸೈಕಲ್ ಗಳನ್ನು ನೋಡಿದ ಮಾತ್ರಕ್ಕೆ ಇವರು ವಾಹನ ಪ್ರಿಯರು ಎಂದುಕೊಳ್ಳಬೇಡಿ. ಜಪಾನಿನ ಜನರು ಕ್ರಿಯಾಶೀಲವಾಗಿರಲು ಮೆಟ್ಟಿಲು ಹತ್ತವುದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

ಜಪಾನ್ನಲ್ಲಿ ಹೆಚ್ಚಿನವರು ತಮ್ಮ ಕೆಲಸಕ್ಕೆ ರೈಲಿನಲ್ಲಿ ಹೋಗುತ್ತಾರೆ, ಇಲ್ಲವೆಂದರೆ ನಡೆದುಕೊಂಡು ಹೋಗುತ್ತಾರೆ. ದೀರ್ಘಾಯುಷ್ಯ ಅವರ ವಂಶವಾಹಿಗಳಲ್ಲಿ ಹಾಸುಹೊಕ್ಕಾಗಿದೆ : ಉತ್ತಮ ಆರೋಗ್ಯ ರಕ್ಷಣೆ ಮತ್ತು ಉತ್ತಮ ಆಹಾರದ ಹೊರತಾಗಿ, ಜಪಾನೀಯರು ನಿರ್ದಿಷ್ಟವಾಗಿ ಎರಡು ವಂಶವಾಹಿಗಳಿಂದಾಗಿ ಆನುವಂಶಿಕ ಪ್ರಯೋಜನವನ್ನು ಹೊಂದಿದ್ದಾರೆ.

Health

ಡಿಎನ್‌ಎ 5178 ಮತ್ತು ಎನ್‌ಡಿ 2-237ಮೆಟ್ ಜೆನೋಟೈಪ್ ಅನ್ನು ಹೊಂದಿರುತ್ತಾರೆ. ಪ್ರತಿಯೊಬ್ಬ ಜಪಾನಿ ವ್ಯಕ್ತಿಯು ಈ ವಂಶವಾಹಿನಿಯನ್ನು ಹೊಂದಿರಬೇಕೆಂದಿಲ್ಲ. ಆದರೆ ಇದು ಹೆಚ್ಚಾಗಿ ದೀರ್ಘಜೀವಿತಾವಧಿ ಹೊಂದಿರುವವರಲ್ಲಿ ಸಾಮಾನ್ಯವಾಗಿರುತ್ತದೆ.

ಈ ವಂಶವಾಹಿನಿಗಳು ಟೈಪ್ 2 ಮಧುಮೇಹ, ಪಾರ್ಶ್ವವಾಯು, ಹೃದಯಾಘಾತಗಳು ಮತ್ತು ಹೃದಯ ರಕ್ತನಾಳದ ಕಾಯಿಲೆಗಳಿಗೆ ಸಂಬಂಧಿಸಿದ ರೋಗಗಳನ್ನು ತಡೆಯುವ ಮೂಲಕ ಜೀವಿತಾವಧಿಯನ್ನು ಹೆಚ್ಚಿಸುತ್ತವೆ.


ಜಪಾನೀಯರು ‘ಇಕಿಗೈ’ (ಉದ್ದೇಶ) ಮಂತ್ರವನ್ನು ಅನುಸರಿಸುತ್ತಾರೆ : ಕೇವಲ ಜೀವಿಸುವ ಬದಲು ಜೀವನದಲ್ಲಿ ಸ್ವಲ್ಪ ಸಂತೋಷ ಮತ್ತು ಉದ್ದೇಶವನ್ನು ಹುಡುಕಬೇಕು ಎಂದು ಸಾರುವ ಪ್ರಾಚೀನ ತತ್ವಶಾಸ್ತ್ರ ಇದು. ಇದು ತಕ್ಷಣದ ತೃಪ್ತಿಯ ಬಗ್ಗೆ ಅಲ್ಲದೇ, ಜೀವನದಲ್ಲಿ ನಿಮ್ಮ ಮುಖ್ಯ ಉದ್ದೇಶದ ಕಡೆಗೆ ಗಮನವನ್ನು ಹರಿಸುವಂತೆ ಮಾಡುತ್ತದೆ.

ನಿಮ್ಮ ಸಂಪೂರ್ಣ ಸಾಮರ್ಥ್ಯವನ್ನು ಗುರುತಿಸುವುದು, ನೀವು ಜಗತ್ತಿಗೆ ಏನು ಕೊಡುಗೆ ನೀಡಬಹುದು, ನೀವು ಯಾವುದರಲ್ಲಿ ಉತ್ತಮರು ಮತ್ತು ನೀವು ಏನು ಮಾಡುವುದರಿಂದ ಖುಷಿ ಪಡುತ್ತೀರಿ ಎಂಬುದನ್ನು ವ್ಯಾಖ್ಯಾನಿಸುವುದು ಇದರ ಉದ್ದೇಶವಾಗಿದೆ.

people

ಜಪಾನೀಯರು ಕಡಿಮೆ ಆಹಾರ ಸೇವಿಸುತ್ತಾರೆ : ಜಪಾನಿಯರ ಆಹಾರದ ಪರಿಕಲ್ಪನೆಯಲ್ಲಿ ಶೇಕಡಾ 80 ರಷ್ಟು ಭಾಗ ಹೊಟ್ಟೆ ತುಂಬುವಷ್ಟು ಮಾತ್ರ ಊಟ ಮಾಡಬೇಕು ಎನ್ನುವುದು ಹಾಸುಹೊಕ್ಕಾಗಿದೆ.

ಮೆದುಳು ಹೊಟ್ಟೆ ತುಂಬಿದೆ ಎನ್ನುವ ಸಂಕೇತವನ್ನು ದೇಹದಿಂದ ಪಡೆಯಲು ಕನಿಷ್ಠ 20 ನಿಮಿಷಗಳು ತೆಗೆದುಕೊಳ್ಳುತ್ತದೆ. ಜಪಾನೀಯರು ಆಹಾರ ಬಡಿಸಿಕೊಳ್ಳುವಾಗ ಸ್ವಲ್ಪವೇ ಬಡಿಸಿಕೊಳ್ಳುತ್ತಾರೆ ಮತ್ತು ನಿಧಾನವಾಗಿ ಅದನ್ನು ಸೇವಿಸುತ್ತಾರೆ.


ಸ್ವಚ್ಛ ಪರಿಸರ ಮತ್ತು ಉತ್ತಮ ಆರೋಗ್ಯ ರಕ್ಷಣಾ ವ್ಯವಸ್ಥೆ ಹೊಂದಿರುತ್ತಾರೆ : ಜಪಾನೀಯರು ಸುಧಾರಿತ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಹೊಂದಿದ್ದಾರೆ. ಉಪ್ಪಿನ ಬಳಕೆಯನ್ನು ಕಡಿಮೆ ಮಾಡುವುದು. ಟಿಬಿಗೆ ಉಚಿತ ಚಿಕಿತ್ಸೆಯಂತಹ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಜನರಿಗೆ ಮಾರ್ಗದರ್ಶನ ನೀಡುವ ನಿಯಮಿತ ಆರೋಗ್ಯ ಅಭಿಯಾನಗಳು ರೂಢಿಯಲ್ಲಿವೆ.

1950 ಮತ್ತು 1960ರ ದಶಕದಲ್ಲಿ ಆರೋಗ್ಯ ಮತ್ತು ನೈರ್ಮಲ್ಯ ಪ್ರಜ್ಞೆಯ ಸಂಸ್ಕೃತಿಯನ್ನು ಸೃಷ್ಟಿಸುವ ಮೂಲಕ ಸಾರ್ವಜನಿಕ ಆರೋಗ್ಯದಲ್ಲಿ ಜಪಾನ್ ತುಂಬಾನೇ ಮುಂದುವರೆದಿದೆ ಎಂದು ಲ್ಯಾನ್ಸೆಟ್ ನ ಸಂಶೋಧನಾ ಪ್ರಬಂಧವು ಹೇಳುತ್ತದೆ.

Health


ಊಟದ ಸಮಯವನ್ನು ನಿಯಮಿತವಾಗಿ ಪಾಲಿಸುತ್ತಾರೆ : ಜಪಾನಿನಲ್ಲಿ, ಕುಟುಂಬಗಳು ನೆಲದ ಮೇಲೆ ಕುಳಿತು ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ. ಜಪಾನಿನ ಆಹಾರವು ಸಮತೋಲಿತವಾಗಿರುತ್ತದೆ.

ಅವರ ಆಹಾರದಲ್ಲಿ ಹಣ್ಣುಗಳು, ಒಮೆಗಾ-ಸಮೃದ್ಧ ಮೀನು, ಅಕ್ಕಿ, ಸಂಪೂರ್ಣ ಧಾನ್ಯಗಳು, ಹಸಿರು ಕಾಯಿಪಲ್ಯಗಳು ಮತ್ತು ಹಸಿ ತರಕಾರಿಗಳನ್ನು ಸೇವಿಸುತ್ತಾರೆ. ಈ ಕಾರಣದಿಂದಲೇ ಜಪಾನ್ ನಲ್ಲಿ ಬೊಜ್ಜಿನ ಪ್ರಮಾಣವು ಬಹಳ ಕಡಿಮೆ.

ವಯಸ್ಸಾದವರ ಬಗ್ಗೆ ಕಾಳಜಿ ವಹಿಸಲಾಗುತ್ತದೆ : ಜಪಾನ್ ದೇಶದಲ್ಲಿ ಜನರು ತಮ್ಮ ಮನೆಯಲ್ಲಿರುವ ವಯಸ್ಸಾದವರನ್ನು ತುಂಬಾನೇ ಚೆನ್ನಾಗಿ ಕಾಳಜಿಯಿಂದ ನೋಡಿಕೊಳ್ಳುತ್ತಾರೆ.

ಕುಟುಂಬದದಿಂದ ವಯಸ್ಸಾದ ಸದಸ್ಯರನ್ನು ಬೇರ್ಪಡಿಸುವುದಿಲ್ಲ. ಭಾರತದಂತೆಯೇ, ಜಪಾನಿನ ಹೆಚ್ಚಿನ ಮನೆಗಳಲ್ಲಿ ಅಜ್ಜ ಅಜ್ಜಿಯರನ್ನು ಕಾಣಬಹುದು.
ಚಹಾ ಕುಡಿಯುವ ಸಂಪ್ರದಾಯ: ಜಪಾನಿನ ಚಹಾ ಸಮಾರಂಭದ ಬಗ್ಗೆ ಎಲ್ಲರೂ ಕೇಳಿಯೇ ಇರ್ತೀರಿ.

Life

ಜಪಾನಿನ ಪ್ರಾಚೀನ ಪಾನೀಯವು ರೋಗನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸುವ, ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುವ, ಜೀರ್ಣಕ್ರಿಯೆಗೆ ಸಹಾಯ ಮಾಡುವ, ಶಕ್ತಿಯ ಮಟ್ಟವನ್ನು ಹೆಚ್ಚಿಸುವ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ.

ಚಹಾ ಕಷಾಯದಲ್ಲಿನ ಅಂಶಗಳು ಜೀವಕೋಶದ ಆರೋಗ್ಯವನ್ನು ಹೆಚ್ಚಿಸುತ್ತವೆ.
  • ಪವಿತ್ರ

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.