- ರಾಜ್ಯದಲ್ಲಿ ಹನಿಟ್ರ್ಯಾಪ್ (Honeytrap) ವಿಚಾರ ಸದ್ದು ಮಾಡುವ ಸಂದರ್ಭದಲ್ಲೇ ನಾಯಕರ ಭೇಟಿ
- ಸತೀಶ್ ಜಾರಕಿಹೊಳಿ (Satish Jarakiholi) ಅವರಿಗಾಗಿಯೇ ವಿಶೇಷ ಡಿನ್ನರ್ ಆಯೋಜನೆ
- ಡಿನ್ನರ್ ನೆಪದಲ್ಲಿ ಹೆಚ್.ಡಿ ದೇವೇಗೌಡರ (H.D. Deve Gowda) ಜೊತೆ ಮಹತ್ವದ ಮಾತುಕತೆ
New delhi: ರಾಜ್ಯ ರಾಜಕೀಯದಲ್ಲಿ (State politics) ಹನಿಟ್ರ್ಯಾಪ್ ವಿಚಾರ ಅತಿ ದೊಡ್ಡ ಸುನಾಮಿಯನ್ನೇ ಸೃಷ್ಟಿಸಿದೆ. ಹನಿಟ್ರ್ಯಾಪ್ ಸದ್ದು (Honeytrap sound) ಮಾಡುತ್ತಿರುವಾಗಲೇ ನಿನ್ನೆ ತಡರಾತ್ರಿ ದೆಹಲಿಯಲ್ಲಿ (Delhi) ಮಹತ್ವದ ಬೆಳವಣಿಗೆಯೊಂದು ನಡೆದಿದೆ.
ಇದರ ಬೆನ್ನಲ್ಲಿಯೇ ರಾಜಣ್ಣ (Rajanna) ಪರವಾಗಿ ಬ್ಯಾಟಿಂಗ್ ಮಾಡಲು ದೆಹಲಿಗೆ ತೆರಳಿರುವ ಸಚಿವ ಸತೀಶ್ ಜಾರಕಿಹೊಳಿ (Minister Satish Jarkiholi) ಅವರು ಹೈಕಮಾಂಡ್ (High Command) ಭೇಟಿ ಬಳಿಕ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರನ್ನು ಭೇಟಿ ಅವರ ನಿವಾಸದಲ್ಲಿ ನಿನ್ನೆ ಮಹತ್ವದ ಡಿನ್ನರ್ ಮೀಟಿಂಗ್ (Dinner meeting) ನಡೆದಿದೆ.
ಡಿನ್ನರ್ ನೆಪದಲ್ಲಿ ಸಚಿವ ಸತೀಶ್ ಜಾರಕಿಹೊಳಿ (Satish Jarakiholi) ಅವರು ಹೆಚ್‌ಡಿಕೆ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ (Former Prime Minister HD Deve Gowda) ಅವರನ್ನು ಭೇಟಿಯಾಗಿದ್ದಾರೆ.ರಾಜ್ಯದಲ್ಲಿ ಸಿಎಂ ಖುರ್ಚಿ (CM Chair) ಮೇಲೆ ಕಣ್ಣಿಟ್ಟಿದ್ದ ಡಿ.ಕೆ. ಶಿವಕುಮಾರ್‌ನನ್ನು (D.K. Shivakumar) ಮಣಿಸಬೇಕು ಎಂದು ಒಗ್ಗೂಡಿದ ಗುಂಪಿನ ಸದಸ್ಯ ಸಹಕಾರ ಸಚಿವ ಕೆ.ಎನ್. ರಾಜಣ್ಣ (Minister K.N. Rajanna) ಅವರ ಮೇಲೆ ಇದೀಗ ಹನಿಟ್ರ್ಯಾಪ್ ತೂಗುಗತ್ತಿ ಬೀಸುತ್ತಿದೆ.
ಸತೀಶ್ ಜಾರಕಿಹೊಳಿ ಅವರು ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ (High Comand) ಮಾಡಿದ್ದಾರೆ. ಜೊತೆಗೆ, ಶತ್ರವಿನ ಶತ್ರು ಮಿತ್ರ ಎಂಬ ನಾಣ್ಣುಡಿಯಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಯನ್ನು ಭೇಟಿ ಮಾಡಿ ಹನಿಟ್ರ್ಯಾಪ್ ಮಾಡಿದ (Honeytrapped) ಮಹಾನಾಯಕನ ಬಗ್ಗೆ ಚರ್ಚೆ ಮಾಡಿದ್ದಾರೆ .ರಾಜಣ್ಣ ಪರವಾಗಿ ಬೆಂಬಲಕ್ಕೆ ನಿಂತಿರುವ ಸತೀಶ್ ಜಾರಕಿಹೊಳಿ ಅವರು ನಿನ್ನೆ ರಾತ್ರಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಸರ್ಕಾರದ ಅಭಿವೃದ್ಧಿ (Development of Govt) ಕಾರ್ಯಕ್ರಮಗಳ ಫೈಲ್ ಹಿಡಿದು ಹೋದ ಸತೀಶ್ ಅವರು, ನಂತರ ರಾಜ್ಯದಲ್ಲಿ ಭಾರೀ (Heavy in the state) ಸದ್ದು ಮಾಡುತ್ತಿರುವ ಹನಿಟ್ರ್ಯಾಪ್ ವಿಚಾರವನ್ನೂ ತೆರೆದಿಟ್ಟಿದ್ದಾರೆ.ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಕಾಂಗ್ರೆಸ್ ಸರ್ಕಾರದ (BJP-JDS Congress government) ವಿರುದ್ಧ ಹಲವು ವಿಚಾರಗಳಲ್ಲಿ ಹೋರಾಟ ನಡೆಸುತ್ತಿದ್ದಾರೆ.
ಕಾಂಗ್ರೆಸ್ (Congress) ವಿರುದ್ಧ ವಿಪಕ್ಷಗಳು ಹಲವು ವಿಚಾರಗಳಲ್ಲಿ ಹೋರಾಡುತ್ತಿರುವಾಗ ಸಚಿವ ಸತೀಶ್ ಜಾರಕಿಹೊಳಿ ಅವರು ಹೆಚ್‌ಡಿಕೆ, ದೇವೇಗೌಡರನ್ನು (HDK, Deve Gowda) ಭೇಟಿಯಾಗಿರೋದು ಕುತೂಹಲಕ್ಕೆ ಕಾರಣವಾಗಿದೆ. ಆದರೆ ಇಲಾಖೆ ಸಂಬಂಧಿಸಿದ ವಿಚಾರದ ಬಗ್ಗೆ ಚರ್ಚೆ ಮಾತ್ರ ನಡೆದಿದೆ ಎಂದು ಸತೀಶ್ ಜಾರಕಿಹೊಳಿ ಅವರು ಹೇಳಿದ್ದಾರೆ.ಅವರ ಉದ್ದೇಶವಾದರೂ ಏನು? (What is their purpose?) ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ದ್ವೇಷಿಸುವ ಜೆಡಿಎಸ್ ಪಕ್ಷದ ನಾಯಕರನ್ನು (JDS party leaders) ಯಾಕೆ ಭೇಟಿಯಾಗುತ್ತಿದ್ದಾರೆ?
ಇದನ್ನೂ ಓದಿ: http://ನೂರ್ ಅಹ್ಮದ್,ಖಲೀಲ್ ಅಹ್ಮದ್ ಅಬ್ಬರ .ಋತುರಾಜ್, ರಚಿನ್ ಅರ್ಧಶತಕ; ಮುಂಬೈ ವಿರುದ್ಧ ಚೆನ್ನೈಗೆ ಭರ್ಜರಿ ಗೆಲುವು
ಅವರನ್ನೇ ಕೇಳಿದಾಗ ಸ್ಪಷ್ಟ ಉತ್ತರ (obvious answer) ನೀಡದಿದ್ದರೂ ಇನ್ನೂ ಕೆಲ ನಾಯಕರನ್ನು ಭೇಟಿಯಾಗುವುದಿದೆ, ಅವರೊಂದಿಗೆ ಮಾತಾಡಿ ಗುರುವಾರ ಬೆಂಗಳೂರಿಗೆ ಹೋಗುತ್ತೇನೆ (Bangalore) , ಶುಕ್ರವಾರ ಅಲ್ಲಿರುವ ಎಲ್ಲ ವಿಷಯಗಳನ್ನು ಹೇಳುತ್ತೇನೆ ಎಂದಿದ್ದಾರೆ.