ಬರ್ಲಿನ್ ನ 25 : ಜರ್ಮನಿಯಲ್ಲಿ ಒಮ್ಮೆಲ್ಲೆ ಕೊರೊನಾ ಸೋಂಕು ಸ್ಪೋಟಗೊಂಡಿದ್ದು ಒಂದೇ ದಿನದಲ್ಲಿ 79 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಕೊರೊನಾ ಸೋಂಕು ಪತ್ತಯಾಗಿದೆ.
ಕೇವಲ 8 ಕೋಟಿ ಜನಸಂಖ್ಯೆ ಹೊಂದಿರುವ ಜರ್ಮನಿಯಲ್ಲಿ ಕೇವಲ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 79,051 ಜನರಲ್ಲಿ ಸೋಂಕು ಕಂಡು ಬಂದಿದೆ. ಈಗಾಗಲೇ ಸುಮಾರು 56 ಲಕ್ಷ ಜನರಲ್ಲಿ ಕೊರೊನಾ ಸೋಂಕು ಕಂಡು ಬಂದಿದ್ದು, ಸೋಂಕಿನಿಂದಾಗಿ ಸಾವಿನಪ್ಪಿದವರ ಸಂಖ್ಯೆ 1 ಲಕ್ಷದ ಗಡಿಯನ್ನು ದಾಟಿದೆ. ಅಷ್ಟಾಗಿಯೂ ಇಲ್ಲಿಯೂ ಸಾವಿನ ಪ್ರಮಾಣವನ್ನು ಸಂಪೂರ್ಣವಾಗಿ ಬಹಿರಂಗ ಮಾಡಿಲ್ಲ ಎಂದೂ ಹೇಳಲಾಗಿದೆ.
ಹಾಗೆ ನೋಡಿದ್ರೆ ಪ್ರಾರಂಭದಲ್ಲಿ ಇಡೀ ಯೂರೋಪ್‌ನಲ್ಲಿಯೇ ಜರ್ಮನಿ ಕೊರೊನಾ ನಿಯಂತ್ರಣದಲ್ಲಿ ಮುಂಚೂಣಿಯಲ್ಲಿತ್ತು. ಹಲವು ದೇಶಗಳು ಜರ್ಮನಿ ಮಾಡೆಲ್ ಬಗ್ಗೆ ಮಾತನಾಡುತ್ತಿದ್ದವರು. ಆದ್ರೆ ತದನಂತರದಲ್ಲಿ ಕೊರೊನಾ ಮತ್ತಷ್ಟು ಹರಡಿಕೊಂಡಿತ್ತು. ಆದ್ರೆ ಇದೀಗ ಮತ್ತೆ 80 ಸಾವಿರ ಕೇಸ್‌ಗಳು ಕಂಡು ಬಂದಿರೋದು ಇಡೀ ವಿಶ್ವಕ್ಕೇ ಎಚ್ಚರಿಕೆ ಸಂದೇಶ ರವಾನಿಸಿದೆ.
ಜರ್ಮನಿ ಜನಸಂಖ್ಯೆ ಕಡಿಮೆ ಇದ್ದರೂ ಕೂಡ ವ್ಯಾಕ್ಸಿನೇಷನ್ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡಿದೆ. ಸುಮಾರು 8.30 ಕೋಟಿ ಜನಂಖ್ಯೆಯಲ್ಲಿ ಬರೋಬ್ಬರಿ 5 ಕೋಟಿ 66 ಲಕ್ಷ ಜನ ಸಂಪೂರ್ಣ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಸುಮಾರು 66 ಲಕ್ಷ ಜನ ಬೂಸ್ಟರ್ ಡೋಸ್ ಕೂಡ ಪಡೆದುಕೊಂಡಿದ್ದಾರೆ. ಹೀಗಿದ್ದು ಸೋಂಕು ಮಾತ್ರ ನಿಯಂತ್ರಣಕ್ಕೆ ಬರ್ತಿಲ್ಲ. ನನಗೇನು ಆಗಲ್ಲ ಅನ್ನೋ ಉಡಾಫೆ ಜೊತೆಗೆ ಮಾಸ್ಕ್ ಸೋಶಿಯಲ್ ಡಿಸ್ಟನ್ ಮುಂತಾದ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಜನ ಬಿಟ್ಟೇ ಬಿಟ್ಟಿದ್ದಾರೆ. ಇದರಂದಾಗಿಯೇ ಜರ್ಮನಿಯಲ್ಲಿ ಕೊರೊನಾ ಸ್ಪೋಟಗೊಳ್ಳಲು ಕಾರಣವಾಗಿದೆ ಎಂಬುವುದು ತಜ್ಞರ ಅಭಿಪ್ರಾಯ.