ಶಾರುಖ್ ಖಾನ್ (Shahrukh Khan) ಅವರು ಈ ವರ್ಷದ ಆರಂಭದಲ್ಲಿ ‘ಪಠಾಣ್’ ನಂತರ ಬ್ಲಾಕ್ ಬಸ್ಟರ್ ಹಿಟ್ (jawan ready to break boxoffice) ಸಿನಿಮಾವನ್ನು ಕೊಟ್ಟಿದ್ದು,
ಈ ಬಾರಿ ‘ಜವಾನ್’ ಮೂಲಕ ಮತ್ತೊಂದು ಸಕ್ಸಸ್ ಪಡೆಯವುದಕ್ಕೆ ಸಜ್ಜಾಗಿದ್ಧಾರೆ. ‘ಜವಾನ್’ (Jawan) ಸಿನಿಮಾವು ಸೆ.7ರಂದು ವಿಶ್ವಾದ್ಯಂತ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ತೆರೆಗೆ
ಬರುತ್ತಿದ್ದು, ಭಾರಿ ನಿರೀಕ್ಷೆ ಮೂಡಿಸಿದೆ. ಅಲ್ಲದೆ ‘ಪಠಾಣ್’ (Pathan) ಸಿನಿಮಾವು ತೆರೆಗೆ ಬರುವುದಕ್ಕೂ ಮುನ್ನವೇ ಒಂದು ದಾಖಲೆಯನ್ನು ಪುಡಿ ಪುಡಿ ಮಾಡಿದೆ.

ಅಡ್ವಾನ್ಸ್ ಬುಕಿಂಗ್ನಲ್ಲಿ ದಾಖಲೆ
ಹಿಂದಿಯಲ್ಲಿ ಮಾತ್ರವಲ್ಲದೆ ತೆಲುಗು (Telugu), ತಮಿಳು ಭಾಷೆಯಲ್ಲಿ ಕೂಡ ಬಿಡುಗಡೆಗೊಳ್ಳುತ್ತಿರುವ ‘ಜವಾನ್’ ಮೇಲೆ ಭಾರೀ ನಿರೀಕ್ಷೆಗಳಿದ್ದು, ಮೊದಲ ಬಾರಿಗೆ ಶಾರುಖ್ ಖಾನ್ ಅವರ ಸಿನಿಮಾವೊಂದು
ದಕ್ಷಿಣ ಭಾರತದಲ್ಲಿ ಭಾರಿ ಹೈಪ್ (Hype)ಸೃಷ್ಟಿಸಿದೆ. ಇನ್ನು ಅಡ್ವಾನ್ಸ್ ಬುಕಿಂಗ್ಸ್ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಬರೀ ಮುಂಗಡ ಟಿಕೆಟ್ ಬುಕಿಂಗ್ನಿಂದಲೇ ವಿಶ್ವದಾದ್ಯಂತ 50 ಕೋಟಿ ರೂಪಾಯಿಗಳಿಗೂ
ಹೆಚ್ಚಿನ ಮೊತ್ತವನ್ನು ಈ ಸಿನಿಮಾ ಸಂಗ್ರಹಿಸಿರುವುದು (jawan ready to break boxoffice) ವಿಶೇಷವಾಗಿದೆ.
ನಿರ್ಮಾಪಕರಿಗೆ ‘ಜವಾನ್’ ಸಿನಿಮಾ ವಿಶ್ವಾದ್ಯಂತ ಅಡ್ವಾನ್ಸ್ ಟಿಕೆಟ್ ಬುಕಿಂಗ್ (Ticket Booking) ಮೂಲಕವೇ 51.17 ಕೋಟಿ ರೂಪಾಯಿ ಗಳಿಕೆ ಆಗಿದೆ ಎಂದು ಹಲವು ಮೂಲಗಳ ಮಾಹಿತಿ ಪ್ರಕಾರ
ತಿಳಿಸಲಾಗಿದೆ. ಭಾರತದಲ್ಲಿ 32.47 ಕೋಟಿ ರೂ. ಗಳಿಸಿದ್ದರೆ ಇನ್ನು ವಿದೇಶದಿಂದ 18.70 ಕೋಟಿ ರೂ. ಹಣ ಅಡ್ವಾನ್ಸ್ ಬುಕಿಂಗ್ ಮೂಲಕ ಬಂದಿದೆ ಎಂದು ಹೇಳಲಾಗಿದೆ. ಅಂದ ಹಾಗೆ, ಶಾರುಖ್ ಖಾನ್
ಅವರ ‘ಪಠಾಣ್’ (Shah Rokh Khan) ಸಿನಿಮಾವು ಅಡ್ವಾನ್ಸ್ ಬುಕಿಂಗ್ (Advance Booking) ಮೂಲಕ 32 ಕೋಟಿ ರೂ. ಗಳಿಸಿತ್ತು. ಆದರೆ ಇದೀಗ ಈ ದಾಖಲೆಯನ್ನು ಈಗ ‘ಜವಾನ್’ ಧೂಳೀಪಟ ಮಾಡಿದೆ.

ಫಸ್ಟ್ ಡೇನಲ್ಲಿ (First Day) 100 ಕೋಟಿ ರೂ. ಗಳಿಕೆ:
ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ‘ಪಠಾಣ್’ ಸಿನಿಮಾವು ವಿಶ್ವಾದ್ಯಂತ (World wide movie) 1000 ಕೋಟಿ ರೂಪಾಯಿ ದೋಚಿತ್ತು. ಈಗ ಈ ದಾಖಲೆಯನ್ನು ‘ಜವಾನ್’ ಸಿನಿಮಾ ಬ್ರೇಕ್
ಮಾಡಲಿದೆಯೇ ಎಂಬ ನಿರೀಕ್ಷೆ ಈಗ ಶುರುವಾಗಿದ್ದು, ಇನ್ನು, ವಿಶ್ವಾದ್ಯಂತ ಮೊದಲ ದಿನವೇ ಜವಾನ್ ಸಿನಿಮಾವು 100 ಕೋಟಿ ರೂಪಾಯಿಗಳಿಗೂ ಅಧಿಕ ಹಣ ಬಾಚಿಕೊಳ್ಳಲಿದೆ ಎಂಬ ಮಾತು ಕೇಳಿಬಂದಿದೆ.
ಇದನ್ನು ಓದಿ: ಆರೋಗ್ಯಕರವಾದ ಹೀರೆಕಾಯಿ ಚಟ್ನಿ
ಭವ್ಯಶ್ರೀ ಆರ್.ಜೆ