Bengaluru : 2023ನೇ ವಿಧಾನಸಭೆ ಚುನಾವಣೆಯ (Assembly election) ಪಕ್ಷದ ಅಭ್ಯರ್ಥಿಗಳ ಹೆಸರು ಮತ್ತು ಚುನಾವಣೆಗೆ ಸ್ಪರ್ಧಿಸುತ್ತಿರುವ ಕ್ಷೇತ್ರಗಳ ಪಟ್ಟಿಯನ್ನು ಜೆಡಿಎಸ್ (JDS Assembly list 2023) ಪಕ್ಷ ಅಧಿಕೃತವಾಗಿ ಪ್ರಕಟಿಸಿದೆ. ಸದ್ಯ ಜೆಡಿಎಸ್ ಬಿಡುಗಡೆಗೊಳಿಸಿರುವ ಪಟ್ಟಿಯ ಈ ಕೆಳಕಂಡಂತೆ ಇದೆ.
ಅಭ್ಯರ್ಥಿಗಳ ಪಟ್ಟಿ :

ರಾಜ್ಯ ರಾಜಕೀಯದಲ್ಲಿ 2023 ರ ವಿಧಾನಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜ್ಯ ಬಿಜೆಪಿ(State Bjp), ರಾಜ್ಯ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳ(ಜೆಡಿಎಸ್) ನಡುವೆ ಚುನಾವಣಾ ಪೈಪೋಟಿ ಭರ್ಜರಿಯಾಗಿ ಸಾಗುತ್ತಿದೆ.
ರಾಜಕೀಯ ಅಖಾಡದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹಗರಣಗಳ ಆರೋಪ-ಪ್ರತ್ಯಾರೋಪ,
ಕಾಲೆಳೆಯುವ ತಂತ್ರ-ಕುತಂತ್ರಗಳು, ಏಟಿಗೆ ಎದಿರೇಟು ಎಂಬಂತೆ ನಡೆಯುತ್ತಿದೆ. ಅತ್ತ ಬಿಜೆಪಿ(BJP) ನಾಯಕರಲ್ಲಿ ಸ್ಥಾನಕ್ಕಾಗಿ ಕಚ್ಚಾಟ ನಡೆಯುತ್ತಿದ್ದರೂ ಲೆಕ್ಕಿಸದೇ,
ಕಾಂಗ್ರೆಸ್(Congress) ವಿರುದ್ಧ ಮಾತಿನ ಸಮರ ಸಾರುತ್ತಿದೆ. ಕಾಂಗ್ರೆಸ್-ಬಿಜೆಪಿ ಮಾತಿನ ಜಟಾಪಟಿಗೆ ಇಳಿದಿದ್ದರೇ,
ಇತ್ತ ಹೆಚ್.ಡಿ ಕುಮಾರಸ್ವಾಮಿ (JDS Assembly list 2023) ಅವರ ನೇತೃತ್ವದಲ್ಲಿ ಮುನ್ನುಗ್ಗುತ್ತಿರುವ ಜೆಡಿಎಸ್ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಪಕ್ಷದ ಅಭ್ಯರ್ಥಿಗಳ ಆಯಾ ಕ್ಷೇತ್ರಗಳ ಅನುಸಾರ ಪಟ್ಟಿಯನ್ನು ಪ್ರಕಟಿಸಿದೆ.
https://vijayatimes.com/1930-to-2022-football-winners/
ಈ ಬಗ್ಗೆ ಅಧಿಕೃತವಾಗಿ ಟ್ವೀಟ್(Tweet) ಮುಖೇನ ತಿಳಿಸಿರುವ ಜೆಡಿಎಸ್,
2023 ರ ವಿಧಾನಸಭೆ ಚುನಾವಣೆಯ ಜನತಾದಳ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಡಿ.19 ರಂದು(ಸೋಮವಾರ) ಪಕ್ಷದ ರಾಜ್ಯ ಅಧ್ಯಕ್ಷರಾದ ಶ್ರೀ ಸಿಎಂ ಇಬ್ರಾಹಿಂ(CM Ibrahim) ಅವರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.