ಅರಸೀಕೆರೆ(Arasikere) ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್(JDS) ವರ್ಸಸ್ ಬಿಜೆಪಿ(BJP) ನಡುವೆ ಭಾರೀ ಪೈಪೋಟಿ ಪ್ರಾರಂಭವಾಗಿದೆ. ಕಳೆದ ಕೆಲ ತಿಂಗಳಿಂದ ಅರಸೀಕೆರೆ ಕ್ಷೇತ್ರದಲ್ಲಿ ದೊಡ್ಡಮಟ್ಟದಲ್ಲಿ ರಾಜಕೀಯ(Political) ಸಂಘರ್ಷ(Conflict) ನಡೆಯುತ್ತಿದೆ.

ಹಾಲಿ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ(BS Yedurappa) ಮಾಜಿ ಆಪ್ತ ಕಾರ್ಯದರ್ಶಿ ಎನ್.ಆರ್. ಸಂತೋಷ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಈ ಕುರಿತು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಫೇಸ್‍ಬುಕ್(Facebook) ಲೈವ್ ಬಂದು ತನ್ನ ಅಳಲನ್ನು ತೊಡಿಕೊಂಡಿದ್ದಾರೆ. ನಾನು ಇದುವೆರಗೂ ಯಾವುದೇ ಪಕ್ಷದ ಮುಖಂಡರನ್ನು ನಿಂದಿಸಿಲ್ಲ. ಆದರೆ ನನ್ನ ಕ್ಷೇತ್ರದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆ ಮೇಲೆ ನನ್ನನ್ನು ನಿಂದಿಸಲಾಗುತ್ತಿದೆ.
ಕರೊನಾ ಕಾರಣದಿಂದ ಕಳೆದ ಎರಡು ವರ್ಷದಿಂದ ಯಾವುದೇ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿರಲಿಲ್ಲ. ಆದರೆ ಇದೀಗ ಜಾತ್ರೆ, ಹಬ್ಬ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಕೆಲ ಮುಖಂಡರು ನನ್ನ ಮೇಲೆ ವೈಯಕ್ತಿಕ ನಿಂದನೆ ಮಾಡುತ್ತಿದ್ದಾರೆ. ಕೆರೆಸಾದರಹಳ್ಳಿ, ರಂಗನಾಯಕನಕೊಪ್ಪಲು ಸೇರಿದಂತೆ ಅನೇಕ ಗ್ರಾಮಗಳಲ್ಲಿ ನನ್ನ ಬಗ್ಗೆ ವೈಯಕ್ತಿಕ ನಿಂದನೆ ಮಾಡಲಾಗುತ್ತಿದೆ. ಆ ಮೂಲಕ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ನನ್ನ ಮನೆ, ಆಫೀಸಿಗೆ ಬಂದು ಕದ್ದು ವಿಡಿಯೋ ಮಾಡಿಕೊಂಡು ಹೋಗುತ್ತಿದ್ದಾರೆ. ಇದು ಅವರ ಪ್ರವೃತ್ತಿನಾ? ಸಾಕ್ಷ್ಯಾಧಾರಗಳಿದ್ದರೆ
ನೇರವಾಗಿ ನನ್ನನ್ನು ಎದುರಿಸಿ, ನೇರವಾಗಿ ಆರೋಪ ಮಾಡಿ. ನಾಯಘಟ್ಟಹಳ್ಳಿಯಲ್ಲಿ ಶಾಲಾ ಮಕ್ಕಳ ಊಟದಲ್ಲಿ ಹಲ್ಲಿ ಬಿದ್ದಿದ್ದಕ್ಕೆ ಶಿವಲಿಂಗೇಗೌಡ ಕಾರಣ ಎಂದು ಅಪಪ್ರಚಾರ ಮಾಡಿದ್ರಿ. ನಾನೇನು ಹಲ್ಲಿ ಹಾಕೋಕೆ ಅಡುಗೆ ಮನೆಗೆ ಹೋಗಿದ್ನಾ? ಎಂದು ಪ್ರಶ್ನಿಸಿದರು.

ಇನ್ನು ಆಡಿಯೋ, ವಿಡಿಯೋ ಇಟ್ಟುಕೊಂಡು ಏನು ಮಾಡ್ತೀವಿ ಅಂಡ್ಕೊಂಡಿದ್ದೀರಾ? ನನಗೆ ಆಡಿಯೋ, ವಿಡಿಯೋ ತಂತ್ರಜ್ಞಾನದ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಆದರೆ ನಮ್ಮ ಬಳಿಯೂ ಒರಿಜಿನಲ್ ವಿಡಿಯೋ ಇದೆ ಅದನ್ನು ಬಿಡ್ತೀವಿ. ನಿಮ್ಮ ಪ್ರವೃತ್ತಿ ಹೀಗೆ ಮುಂದುವರೆದರೆ ಮುಂದೆ ಎದುರಿಸಬೇಕಾಗುತ್ತದೆ. ನಾನು ನಮ್ಮ ಕಾರ್ಯಕರ್ತರನ್ನು ತಡೆದಿದ್ದೇನೆ ಎಂದು ನೇರವಾಗಿ ಎನ್.ಆರ್. ಸಂತೋಷಗೆ ಎಚ್ಚರಿಕೆ ನೀಡಿದರು.