Visit Channel

`ಜನತಾ ಮಿತ್ರʼ ರಾಜಧಾನಿ ಗೆಲ್ಲಲು ದಳಪತಿಗಳ ರಣತಂತ್ರ

JDS

ಬೆಂಗಳೂರು ನಗರದಲ್ಲಿ(Bengaluru City) ಜೆಡಿಎಸ್(JDS) ಸಂಘಟನೆಯ ನೆಲೆಯನ್ನು ವಿಸ್ತರಿಸಿಕೊಳ್ಳಲು ರಣತಂತ್ರ ರೂಪಿಸಿದೆ.

ಅದರ ಭಾಗವಾಗಿ ಬೆಂಗಳೂರು ನಗರದಾದ್ಯಂತ `ಜನತಾ ಮಿತ್ರʼ(JanathaMithra) ಯಾತ್ರೆಯ ಮೂಲಕ ಜನರನ್ನು ತಲುಪುವ ವಿಭಿನ್ನ ಕಾರ್ಯತಂತ್ರವನ್ನು ರೂಪಿಸಿದೆ.

ಈ ಯಾತ್ರೆಯ ಮೂಲಕ ಜನರಿಂದ ಭವಿಷ್ಯದ ಸರಕಾರ ಹೇಗೆ ಕೆಲಸ ಮಾಡಬೇಕು? ಜನರ ನಿರೀಕ್ಷೆಗಳೇನು?

ಇತ್ಯಾದಿ ಅಂಶಗಳ ಬಗ್ಗೆ ನೇರವಾಗಿ ಜನತೆಯಿಂದಲೇ ಅಭಿಪ್ರಾಯ ಸಂಗ್ರಹ ಮಾಡುವುದು ಜನತಾ ಮಿತ್ರದ ಮುಖ್ಯ ಉದ್ದೇಶವಾಗಿದೆ.

JDS


ಜನತಾ ಮಿತ್ರ ಯಾತ್ರೆಯಲ್ಲಿ ಬೆಂಗಳೂರಿನ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ(Vidhansabha Constituency) ತೆರಳಿ ಜೆಡಿಎಸ್ ಪಕ್ಷ ಸರಕಾರ ಅಧಿಕಾರಕ್ಕೆ ಬಂದರೆ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಜಲಮೂಲಗಳ ಸಂರಕ್ಷಣೆ, ಸುಗಮ ಸಂಚಾರ, ಕಸ ವಿಲೇವಾರಿ, ಕೆರೆಗಳ ರಕ್ಷಣೆ, ನೀರಿನ ಸಮರ್ಪಕ ನಿರ್ವಹಣೆ, ಮಹಿಳಾ ಸಬಲೀಕರಣ ಸೇರಿದಂತೆ,

ಅನೇಕ ಕಾರ್ಯಕ್ರಮಗಳನ್ನು ಕಾರ್ಯಗತ ಮಾಡುವ ಕುರಿತು ಜನರಿಗೆ ಮಾಹಿತಿ ನೀಡಿ, ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತೆ ಕೋರಲಾಗುತ್ತದೆ. ಜನರು ತಮ್ಮ ನಿರೀಕ್ಷೆಯ ಸರಕಾರ ಹೇಗಿರಬೇಕು ಎಂಬ ಬಗ್ಗೆ ಸಲಹೆ, ಅಭಿಪ್ರಾಯವನ್ನು ಕೂಡಾ ಈ ವೇಳೆ ಕೊಡಬಹುದು.

ಪ್ರಾದೇಶಿಕ ಪಕ್ಷದವರು ಮಾತ್ರ ಸ್ಥಳೀಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಹೊರತು, ರಾಷ್ಟ್ರೀಯ ಪಕ್ಷದ ನಾಯಕರು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಪ್ರಾದೇಶಿಕ ಪಕ್ಷದ ಅವಶ್ಯಕತೆ ಹಿಂದಿಗಿಂತಲೂ ಪ್ರಸ್ತುತ ಸನ್ನಿವೇಶದಲ್ಲಿ ಅಗತ್ಯವಾಗಿ ಬೇಕಾಗಿದೆ ಎಂದು ಜನರಿಗೆ ಈ ಯಾತ್ರೆಯಲ್ಲಿ ಮನವರಿಕೆ ಮಾಡಿಕೊಡಲಾಗುತ್ತದೆ.

ರಾಜ್ಯಕ್ಕೆ ದೇವೇಗೌಡರು(HD Devegowda) ನೀಡಿರುವ ಈ ಸಾಧನೆಗಳನ್ನು ತಿಳಿಸಲಾಗುತ್ತದೆ :

JDS

• ಕರ್ನಾಟಕಕ್ಕೆ ಪ್ರತ್ಯೇಕ ರೈಲ್ವೆ ವಲಯ ಮತ್ತು ಹುಬ್ಬಳ್ಳಿ ರೈಲ್ವೆ ವರ್ಕ್ ಶಾಪ್ ಗೆ ಕಾಯಕಲ್ಪ.
• ದೇಶದಲ್ಲಿ ಬಡವರಿಗೆ, ಪಡಿತರ ಮತ್ತು ಕರ್ನಾಟಕದ ಅನ್ನಭಾಗ್ಯಕ್ಕೆ ಅಂಕುರ.
• ಉತ್ತರ ಕರ್ನಾಟಕಕ್ಕೆ 17 ಹೊಸ ಸಕ್ಕರೆ ಕಾರ್ಖಾನೆಗಳು.
• ರಾಜ್ಯದ ಯುಕೆಪಿ ಗೆ ಹರಿದು ಬಂದ ಕೇಂದ್ರದ ಹಣ.
• ಹತ್ತು ದಿನಗಳಲ್ಲಿ ರಾಜ್ಯದಲ್ಲಿ ನಿರ್ಮಾಣವಾದ ರೈಲು ಮಾರ್ಗ 1000 ಕಿ.ಮೀ.
• ಗ್ರಾಮೀಣಾಭಿವೃದ್ಧಿಗೆ ವಿಶೇಷ ಆದ್ಯತೆ.
• ಭದ್ರಾವತಿ ಉಕ್ಕಿನ ಕಾರ್ಖಾನೆ ಉಳಿಸಿದ್ದು.
• ರಕ್ಷಣಾ ಇಲಾಖೆಯ ಬೆಂಗಳೂರು ನಗರದ ಅಮೂಲ್ಯ 80 ಎಕರೆ ಜಾಗ ಬೆಂಗಳೂರಿನ ಸಾರ್ವಜನಿಕರಿಗೆ ಲಭ್ಯವಾದದು.
• ಕೇಂದ್ರೋದ್ಯಮಗಳು ಮತ್ತು ಕಾರ್ಮಿಕರು.
• ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳ
• ಬೆಂಗಳೂರು ನಗರಕ್ಕೆ ಭಗೀರಥರಾದ ದೇವೇಗೌಡರು.
• ಬೆಂಗಳೂರು ನಗರಕ್ಕೆ ಮೂಲಭೂತ ಸೌಕರ್ಯ.
• ಸೀಬರ್ಡ್, ಒಪೆಕ್ ಆಸ್ಪತ್ರೆ ಇತ್ಯಾದಿ.

HDK

ಎಚ್.ಡಿ.ಕುಮಾರಸ್ವಾಮಿ ಅವರ ಸಾಧನೆಗಳು :
• ಸುವರ್ಣ ಗ್ರಾಮೀಣ ಯೋಜನೆಗಾಗಿ ಮೂಲಸೌಕರ್ಯ ಅಭಿವೃದ್ಧಿ.
• ಸುಮಾರು 40 ಸಾವಿರ ಎಕರೆ ಭೂಮಿ ಸರ್ಕಾರದ ವಶಕ್ಕೆ ಪಡೆಯಲಾಯಿತು.
• ಉತ್ತರ ಕರ್ನಾಟಕದಲ್ಲಿ ವಿಶೇಷ ಸಂಚಾರಿ ಹೈಕೋರ್ಟ್ ಪೀಠದ ಸ್ಥಾಪನೆ
• ಸರಾಯಿ ನಿಷೇಧ.
• ಕೋಲಾರ, ಬಿಜಾಪುರಕ್ಕೆ ಕುಡಿಯುವ ನೀರು ಪೂರೈಕೆಗೆ ಯೋಜನೆ ಘೋಷಣೆ.
• ಸುವರ್ಣ ಕಾಯಕ ಉದ್ಯೋಗ ಶಿಕ್ಷಕ ಯೋಜನೆಯಡಿ ಯುವಕರಿಗೆ ಕೌಶಲ್ಯ ಅಭಿವೃದ್ಧಿ.
• ಸಿಎಂ ಆಗಿದ್ದಾಗ ಭಾಗ್ಯಲಕ್ಷ್ಮಿ ಯೋಜನೆಗೆ ಚಾಲನೆ.
• ರೈತರಿಗೆ ಒಟ್ಟಾರೆ 7000 ಕೋಟಿ ರೂ ಪ್ಯಾಕೇಜ್ ದೊರೆಯುವಂತೆ ಮಾಡಿದೆ.


• ಮುಖ್ಯಮಂತ್ರಿಯಾಗಿದ್ದಾಗ ಗ್ರಾಮ ವಾಸ್ತವ್ಯ, ಜನತಾದರ್ಶನ ಆರಂಭಿಸಿದರು. ಶೇ 70 ರಷ್ಟು ಅರ್ಜಿಗಳನ್ನು ಸ್ವೀಕರಿಸಿ 25 ಕೋಟಿ ರೂ ನೇರವಾಗಿ ನೀಡಿದರು. ಲ್ಯಾಂಡ್ ಮಾಫಿಯಾ ತಡೆಗೆ, ಮೀನುಗಾರಿಕೆ ವೃತ್ತಿ ಮಾಡುವ ಮಹಿಳೆಯರಿಗೆ ಶೇ. 4 ರಷ್ಟು ಬಡ್ಡಿ ದರದಲ್ಲಿ ಸಾಲ ಸೌಲಭ್ಯ.
• ಲಾಟರಿ ನಿಷೇಧ.
• 6 ಜಿಲ್ಲೆಗಳಲ್ಲಿ 2689.64 ಕೋಟಿ ಪ್ಯಾಕೇಜ್.
• ಉದ್ಯಾನಗಳ ನಿರ್ವಹಣೆಗಾಗಿ ಸುವರ್ಣ ಕರ್ನಾಟಕದ ಉದ್ಯಾನಗಳ ಪ್ರತಿಷ್ಠಾನ ಸ್ಥಾಪನೆ.

ಇನ್ನು ರಾಷ್ಟ್ರೀಯ ಪಕ್ಷಗಳು ರಾಜ್ಯದ ಹಿತವನ್ನು ಕಾಪಾಡಲಾರವು. ರಾಜ್ಯದಲ್ಲಿ ಯಾವುದೇ ಸಮಸ್ಯೆಗಳು ಉದ್ಭವಿಸಿದಾಗ ಪ್ರಾದೇಶಿಕ ಪಕ್ಷಗಳು ತುಂಬಾ ಅಗತ್ಯವಾಗಿ ಕೆಲಸ ನಿರ್ವಹಿಸುತ್ತವೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.