Karnataka: ಕಳೆದ ವರ್ಷದ ರಾಜ್ಯ ಬಜೆಟ್ ಮಂಡಿಸಿದ್ದ ಮುಖ್ಯಮಂತ್ರಿ ಬೊಮ್ಮಾಯಿ(Basavaraj Bommai) ಅವರೆ, ನೀವು ಘೋಷಿಸಿದ್ದ ಎಷ್ಟು ಕಾರ್ಯಕ್ರಮಗಳು ಈ ಒಂದು ವರ್ಷದಲ್ಲಿ (JDS tweet about Budget) ಜಾರಿಗೆ ಬಂದವು?
ರಾಜ್ಯದ ಜನತೆಯ ಮುಂದೆ ಮಂಡಿಸಿದ್ದ ಬಜೆಟ್ ನಲ್ಲಿನ 132 ಆಶ್ವಾಸನೆಗಳು ಇನ್ನೂ ಈಡೇರಿಲ್ಲ. ಮಾತು ಮತ್ತು ಕೃತಿಯ ನಡುವೆ ಸಂಬಂಧವೇ ಇಲ್ಲದ ನಡೆ ಅಲ್ಲವೆ ಇದು? ಎಂದು ವಿಪಕ್ಷ ಜೆಡಿಎಸ್(JDS) ಟೀಕಿಸಿದೆ.

ಈ ಕುರಿತು ಟ್ವೀಟ್ (Tweet)ಮೂಲಕ ಸರ್ಕಾರವನ್ನು ಟೀಕಿಸಿರುವ ಜೆಡಿಎಸ್, ಬಿಜೆಪಿ ಸರ್ಕಾರದ ಪೊಳ್ಳು ಮಾತುಗಳು, ಸುಳ್ಳು ಭರವಸೆಗಳು, ಕಳಪೆ ಆಡಳಿತ, ಕೋಮು ರಾಜಕಾರಣ, ದಗಾಕೋರರ ಪರ ನಿಲ್ಲುವ ನಡೆಗಳಿಂದಾಗಿ ರಾಜ್ಯದ ಜನತೆ ಬೇಸತ್ತಿದ್ದಾರೆ.
ಆಡಳಿತ ವಿರೋಧಿ ಅಲೆ ಜೋರಾಗಿಯೇ ಇದೆ. ನೀವು ಸೋಲುವುದು ಖಂಡಿತ. ಇತಿಹಾಸದ ಪುಟದಲ್ಲಿ ಅತೀ ಕೆಟ್ಟ ಸರ್ಕಾರ(JDS tweet about Budget) ಎಂದು ದಾಖಲಾಗುವುದೂ ಖಚಿತ.
ಚುನಾವಣಾ ವರ್ಷವಾದ್ದರಿಂದ ಈ ಬಾರಿಯೂ ಬಜೆಟ್(Budjet) ನಲ್ಲಿ ಬಂಪರ್ ಘೋಷಣೆಗಳನ್ನು ಮಾಡುವುದು ಖಚಿತ.
ಆದರೆ, ಹಿಂದಿನ ವರ್ಷದ ಆಯವ್ಯಯದ ಸಾಧನೆ ಸಾಧಾರಣಕ್ಕಿಂತ ಕಡಿಮೆ ಇರುವುದನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ? ಅದೂ ಅಲ್ಲದೆ, ಚುನಾವಣೆ ಹೊಸ್ತಿಲಿನಲ್ಲಿ ಮಂಡಿಸುವ ಬಜೆಟ್ ಗೆ ಯಾವ ಅರ್ಥವೂ ಇರುವುದಿಲ್ಲ ಎಂದಿದೆ.

ಇನ್ನೊಂದು ಟ್ವೀಟ್‌ನಲ್ಲಿ, ರಾಜ್ಯದ ಹಾಲು ಉತ್ಪಾದಕರಿಗೆ ಅಡೆ ತಡೆ ಇಲ್ಲದೆ ಸಾಲ ದೊರಕಿಸುವುದಕ್ಕಾಗಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪನೆ,
ಮಹಿಳಾ ಸ್ವ-ಸಹಾಯಕ ಗುಂಪುಗಳಿಗೆ ಆರ್ಥಿಕ ನೆರವು ನೀಡಲು ‘ಸ್ತ್ರೀ ಸಾಮರ್ಥ್ಯ ಯೋಜನೆ’ ಇನ್ನೂ ಮುಂತಾದ ಘೋಷಿತ ಕಾರ್ಯಕ್ರಮಗಳು ಅನುಷ್ಠಾನಕ್ಕೆ ಬಂದೇ ಇಲ್ಲ.
ಅಷ್ಟರಲ್ಲೆ, ಇನ್ನೊಂದು ಬಜೆಟ್ ಸಿದ್ಧತೆ ನಡೆದಿದೆ ಎಂದು ಟೀಕಿಸಿದೆ.
ಇದನ್ನೂ ಓದಿ: ಗುಜರಾತ್ ಗಲಭೆ : ಸುಪ್ರೀಂಕೋರ್ಟ್ vs ಬಿಬಿಸಿ ಸಾಕ್ಷ್ಯಚಿತ್ರ ; ಯಾವುದು ಸತ್ಯ…..
ಅದೇ ವೇಳೆ ಸರ್ಕಾರಿ ಶಾಲೆಗಳ ಕುರಿತು ರಾಜ್ಯ ಸರ್ಕಾರ ತಳೆದಿರುವ ನಿರ್ಲಕ್ಷ್ಯವನ್ನು ಟೀಕಿಸಿರುವ ಜೆಡಿಎಸ್, ಸರ್ಕಾರದ ನಿರ್ಲಕ್ಷ್ಯದಿಂದ ಕನಿಷ್ಠ ಸೌಕರ್ಯಗಳಿಲ್ಲದೆ ಸೊರಗಿರುವ ಶಾಲೆಗಳು ಅವನತಿಯ ಅಂಚಿಗೆ ಬಂದಿರುವುದು ಶೋಚನಿಯ.
ಸರ್ಕಾರಿ ಶಾಲೆಗಳು ಮುಚ್ಚಿ, ಖಾಸಗಿಯವರಿಗೆ ಅನುಕೂಲ ಮಾಡಿಕೊಡಲು ಸರ್ಕಾರವೇ ಈ ಹುನ್ನಾರ ಹೆಣಿದಿದೆಯೆ? ಒಟ್ಟಿನಲ್ಲಿ ಬಡವರ ಮನೆಯ ಮಕ್ಕಳಿಗೆ ಶಿಕ್ಷಣದಿಂದ ವಂಚಿಸುವ ವಿಕೃತ ನಡೆ ಇದಾಗಿದೆ.
ಶಾಲೆಗಳ ನಿರ್ವಹಣೆಗೆ ಅಗತ್ಯ ಬೇಕಾದ ಅನುದಾನಕ್ಕೂ ಕೊಕ್ಕೆ ಹಾಕಿ, ಶಾಲಾ ಆಡಳಿತ ಸಿಬ್ಬಂದಿಯನ್ನು ಬೇಡುವ ಪರಿಸ್ಥಿತಿಗೆ ನೂಕಿರುವ ಸರ್ಕಾರ ಎಷ್ಟು ಉಗಿದರೂ ಕಡಿಮೆ. 2022ರ ಮೇ ತಿಂಗಳಿನಿಂದ ಸಮರ್ಪಕ ಅನುದಾನ ಕೊಡದೆ, ಸರ್ಕಾರಿ ಶಾಲೆಗಳ ಕತ್ತು ಹಿಸುಕುತ್ತಿರುವ ಸರ್ಕಾರದ ಕ್ರೂರ ನಡೆ ನಿಜಕ್ಕೂ ಆಕ್ರೋಶ ತರಿಸುವಂತದ್ದು ಎಂದಿದೆ.