Kolar : ಜಾತ್ಯಾತೀತ ಜನತಾದಳ ಪಕ್ಷ (JDS Will Take Over) ಅಧಿಕಾರಕ್ಕೆ ಬಂದರೆ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಪಾಳು ಬಿದ್ದಿರುವ ಎಲ್ಲ ಐಹಾಸಿಕ ದೇಗುಲಗಳ ಜೀರ್ಣೋದ್ಧಾರ ಮಾಡಲಾಗುವುದು,
ಎಂದು ಜೆಡಿಎಸ್ ನಾಯಕಎಚ್.ಡಿ.ಕುಮಾರಸ್ವಾಮಿ (HD Kumarswamy) ಅವರು ಹೇಳಿದ್ದಾರೆ.

ಈ ಕುರಿತು ಟ್ವೀಟ್ (Tweet) ಮಾಡಿರುವ ಅವರು, ಪಂಚರತ್ನ ರಥಯಾತ್ರೆ 6ನೇ ದಿನ ನಾನು ಶಿಡ್ಲಘಟ್ಟ ಕ್ಷೇತ್ರದ ಸಾದಲಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದೆ. ಈ ವೇಳೆ ಅಲ್ಲಿ ಸರಕಾರ ಮತ್ತು ಪುರಾತತ್ವ ಇಲಾಖೆಯ ನಿರ್ಲಕ್ಷ್ಯಕ್ಕೆ ಒಳಗಾಗಿ ಪಾಳುಬಿದ್ದಿರುವ, ನೊಳಂಬ ಅರಸರ ಕಾಲದಲ್ಲಿ ಕಟ್ಟಲ್ಪಟ್ಟಿರುವ ಶ್ರೀ ಚನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿದ್ದೆ.
ಆ ದೇಗುಲದ ದುಸ್ಥಿತಿಯನ್ನು ಕಂಡು ಬಹಳ ದುಃಖವಾಯಿತು. ಐತಿಹಾಸಿಕ, ಪಾರಂಪರಿಕ ವೈಭವದ ಪ್ರತೀಕವಾದ ಈ ತಾಣವನ್ನು ಜನತಾದಳ ಪಕ್ಷ ಅಧಿಕಾರಕ್ಕೆ ಬಂದರೆ ತಪ್ಪದೇ ಅಭಿವೃದ್ಧಿಪಡಿಸಲಿದೆ. ಈ ದೇಗುಲ ಮಾತ್ರವಲ್ಲ, ಜಿಲ್ಲೆಯ ಎಲ್ಲಾ ಐತಿಹಾಸಿಕ ದೇಗುಲಗಳಿಗೆ ಕಾಯಕಲ್ಪ ನೀಡಲಾಗುವುದು ಎಂದಿದ್ದಾರೆ.
ಇದನ್ನೂ ಓದಿ : https://vijayatimes.com/kantara-ott-war/
ಅಷ್ಟೇ ಅಲ್ಲದೆ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಪಾಳು ಬಿದ್ದಿರುವ ಎಲ್ಲ ಐತಿಹಾಸಿಕ ದೇಗುಲಗಳ ಜೀರ್ಣೋದ್ಧಾರ ಮಾಡಲಾಗುವುದು ಹಾಗೂ ಎಲ್ಲಾ ಪುಣ್ಯಕ್ಷೇತ್ರಗಳು ಐತಿಹಾಸಿಕ ತಾಣಗಳ ಸರ್ಕ್ಯೂಟ್ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
https://twitter.com/hd_kumaraswamy/status/1596061383996899329?s=20&t=XU3jp5CjcQl11pgemTnmfQ
ಇನ್ನು ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಶಿಡ್ಲಘಟ್ಟ ಕ್ಷೇತ್ರದ ಸಾದಲಿ ಗ್ರಾಮದಲ್ಲಿ ವಾಸ್ತವ್ಯ ಹೂಡುವ ಮುನ್ನ ಗ್ರಾಮಕ್ಕೆ ಎತ್ತಿನಗಾಡಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಅಪಾರ ಬೆಂಬಲಿಗರೊಂದಿಗೆ ಗ್ರಾಮ ಪ್ರವೇಶಿಸಿದರು.
ಈ ವೇಳೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತ್ತು ಶಿಡ್ಲಘಟ್ಟ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರವಿಕುಮಾರ್ ಜತೆಯಲ್ಲಿದ್ದರು.
https://twitter.com/hd_kumaraswamy/status/1596061386085658624?s=20&t=XU3jp5CjcQl11pgemTnmfQ
ನಂತರ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಿ, ಜನತೆಗೆ ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆಗಳ ಮಹತ್ವದ ಕುರಿತು ಹೇಳಿದರು.
- ಮಹೇಶ್.ಪಿ.ಎಚ್