New Delhi: 2024ರ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ರಾಷ್ಟ್ರರಾಜಕೀಯ ಯಾವ ದಿಕ್ಕಿನತ್ತ ಸಾಗುತ್ತದೆ ಎಂಬ ಚರ್ಚೆ (JDU-TDP Official Declaration) ಎಲ್ಲೆಡೆ ಶುರುವಾಗಿತ್ತು.
ಬಿಜೆಪಿ (BJP) ಏಕಾಂಗಿಯಾಗಿ ಸರಳ ಬಹುಮತ ಪಡೆಯುವಲ್ಲಿ ವಿಫಲವಾದ ನಂತರ ಬಿಜೆಪಿಯೊಂದಿಗಿರುವ ಮಿತ್ರಪಕ್ಷಗಳಾದ ಜೆಡಿಯು ಹಾಗೂ ಟಿಡಿಪಿ ಪಕ್ಷಗಳನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್
(Congress) ಪ್ರಯತ್ನ ನಡೆಸುತ್ತಿದೆ ಎಂಬ (JDU-TDP Official Declaration) ಚರ್ಚೆ ಶುರುವಾಗಿದೆ.
ಈ ಮಧ್ಯೆ ಇಂದು ಸುದ್ದಿಗೋಷ್ಠಿ ನಡೆಸಿರುವ ತೆಲುಗು ದೇಶಂ ಪಕ್ಷದ (Telugu Desham Party) ನಾಯಕ ಚಂದ್ರಬಾಬು ನಾಯ್ಡು, ನಾವು ಎನ್ಡಿಎ ಮೈತ್ರಿಕೂಟದಲ್ಲಿಯೇ ಮುಂದುವರೆಯುತ್ತೇವೆ.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸರ್ಕಾರವನ್ನು ರಚಿಸುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಇನ್ನೊಂದೆಡೆ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಕೂಡಾ ಎನ್ಡಿಎ ಮೈತ್ರಿಕೂಟ
(NDA Alliance)ದಲ್ಲೇ ನಾವು ಮುಂದುವರೆಯುತ್ತೇವೆ. ಸರ್ಕಾರ ರಚಿಸಲು ಹಕ್ಕು ಮಂಡಿಸುತ್ತೇವೆ ಎಂದು ತಿಳಿಸಿದೆ. ಹೀಗಾಗಿ ನರೇಂದ್ರ ಮೋದಿ (Narendra Modi) ಅವರ ನೇತೃತ್ವದಲ್ಲೇ ಸರ್ಕಾರ
ರಚನೆಯಾಗುವ ಸಾಧ್ಯತೆ ಹೆಚ್ಚಿದೆ.
ಈ ಮಧ್ಯೆ ಎನ್ಡಿಎ ಜೂನ್ (June) 7ರಂದು ನವದೆಹಲಿಯಲ್ಲಿ ಎನ್ಡಿಎ ಮೈತ್ರಿಕೂಟ ಪಕ್ಷಗಳ ನಾಯಕರು, ಮುಖ್ಯಮಂತ್ರಿಗಳು, ಸಂಸದರ ಸಭೆಯನ್ನು ಕರೆದಿದೆ. ಇನ್ನೊಂದೆಡೆ ಇಂಡಿ ಮೈತ್ರಿಕೂಟದ ನಾಯಕರು
ನವದೆಹಲಿಯಲ್ಲಿ ಇಂದು ಸಂಜೆ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಅವರ ನಿವಾಸದಲ್ಲಿ ಸಭೆ ನಡೆಸಲಿದ್ದಾರೆ.
ಮೂಲಗಳ ಪ್ರಕಾರ, ನಾಳೆಯೇ ನರೇಂದ್ರ ಮೋದಿ (Narendra Modi) ಅವರು ಸರ್ಕಾರ ರಚನೆಗೆ ರಾಷ್ಟ್ರಪತಿಗಳ ಬಳಿಗೆ ತೆರಳಿ, ರಾಜೀನಾಮೆ ನೀಡಿ, ಅಲ್ಲಿಯೇ ನೂತನ ಸರ್ಕಾರ ರಚನೆಗೆ ಹಕ್ಕು
ಮಂಡಿಸಲಿದ್ದಾರೆ ಎನ್ನಲಾಗಿದೆ. ಸದ್ಯದ ಎಲ್ಲಾ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ, ಬಿಜೆಪಿ ನೇತೃತ್ವದ ಎನ್ಡಿಎಯೇ ಮತ್ತೊಮ್ಮೆ ಕೇಂದ್ರದಲ್ಲಿ ಸರ್ಕಾರ ರಚಿಸುವುದು ನಹುತೇಕ ಖಚಿತ ಎನ್ನಬಹುದು.
ಇದನ್ನು ಓದಿ: ಬಿಜೆಪಿಯ ಗೆಲುವಿಗೆ ಲಗಾಮು ಹಾಕುವಲ್ಲಿ ಯಶಸ್ವಿಯಾದ ಇಂಡಿಯಾ ಮೈತ್ರಿಕೂಟ.