ಮೀರತ್, ಡಿ. 24: ಹಲವು ಕಾರಣಗಳಿಂದ ಸಂಬಂಧಗಳು ಮುರಿದು ಹೋಗಿರುವರುದು ನಾವು ನೋಡಿಯೇ ಇರ್ತೆವಿ. ಆದರೆ ಇಲ್ಲಿ ಒಂದು ವಿಚಿತ್ರವಾದ ವಿಷಯಕ್ಕೆ ತಲಾಖ್ವರೆಗೆ ಬಂದಿದೆ. ಆದರೆ ಉತ್ತರ ಪ್ರದೇಶದಲ್ಲಿ ಒಬ್ಬ ವ್ಯಕ್ತಿ ತನ್ನ ಹೆಂಡತಿ ಜೀನ್ಸ್ ಪ್ಯಾಂಟ್ ಧರಿಸುವುದಿಲ್ಲ ಮತ್ತು ಪಾರ್ಟಿಗಳಲ್ಲಿ ಡ್ಯಾನ್ಸ್ ಮಾಡುವುದಿಲ್ಲ ಎಂಬ ಕಾರಣಕ್ಕೆ ವಿಚ್ಛೇದನ ನೀಡಿದ್ದಾನೆ ಭೂಪ.
ಇಷ್ಟೇ ಅಲ್ಲ ಹೆಂಡತಿಗೆ ಮೂರು ಬಾರಿ ತಲಾಖ್ ಹೇಳಿದವ ಅದೇ ಕೋಪಕ್ಕೆ ಮನಗೆ ಹೋಗಿ ತನಗೆ ತಾನೇ ಬೆಂಕಿ ಹಚ್ಚಿಕೊಂಡಿದ್ದಾನೆ. ಈ ಪ್ರಕರಣ ಉತ್ತರ ಪ್ರದೇಶದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಅನಾಸ್ ಎಂಬಾತ 8 ವರ್ಷಗಳ ಹಿಂದೆ ಅಮೀರುದ್ದೀನ್ ಎಂಬುವವರ ಮಗಳನ್ನು ಮದುವೆಯಾಗಿದ್ದ. ಅನಾಸ್ ತನ್ನ ಹೆಂಡತಿಗೆ ದಿನ ಡ್ಯಾನ್ಸ್ ಮಾಡಲು ಮತ್ತು ತುಂಡುಡುಗೆಗಳನ್ನು ಧರಿಸಲು ಒತ್ತಾಯ ಮಾಡುತ್ತಿದ್ದ. ಇದೇ ಕಾರಣಕಕ್ಕೆ ಇಬ್ಬರಲ್ಲಿ ಮನಸ್ತಾಪವುಂಟಾಗಿ ವಿಚ್ಛೇದನವಾಗಿತ್ತು. ಜೀವನ ನಡೆಸಲು ಅವರ ಇಷ್ಟದಂತೆ ಬಾಳ ಬೇಕಾಗುತ್ತದೆ ಅದನ್ನು ಬಿಟ್ಟು ಗಂಡನೆ ಮನೆಗೆ ಯಜಮಾನವೆಂದು ಭಾವಿಸಿಕೊಂಡು ಮನಬಂದಂತೆ ನಡೆದುಕೊಳ್ಳುವುದು ಸರಿಯಲ್ಲ ಆದ ಕಾರಣ ಎಲ್ಲಾರಿಗೂ ಸಮಾನ ಹಕ್ಕು ಇದೆ ಎಂದು ತಿಳಿದುಕೊಂಡು ಜೀವನ ನಡೆಸಬೇಕಾಗುತ್ತದೆ.