ಮೊದಲು ವಿಧಾನಸೌಧದ ಬಳಿ ಪ್ರಾಯೋಗಿಕ (Jet Patcher treatment for potholes) ಕಾರ್ಯಾಚರಣೆ; ನಗರದ ಐದು ವಲಯಗಳಲ್ಲೂ ತಂತ್ರಜ್ಞಾನ ಬಳಕೆಗೆ ಸಿದ್ಧತೆ
50 ಮಿ.ಮೀ. ಆಳದವರೆಗಿನ ಗುಂಡಿಗಳ ದುರಸ್ತಿಗೆ ಕೋಲ್ಡ್-ಮಿಕ್ಸ್ ತಂತ್ರಜ್ಞಾನ; ವೇಗದ ಮತ್ತು ಪರಿಣಾಮಕಾರಿ ರಸ್ತೆ ದುರಸ್ತಿಗೆ ಒತ್ತು
ಕೇವಲ ಹಾನಿಗೊಳಗಾದ ಭಾಗದಲ್ಲೇ ಕಾಮಗಾರಿ; ದುರಸ್ತಿ ಬಳಿಕ 10 ನಿಮಿಷದಲ್ಲೇ ಸಂಚಾರ
Bengaluru : ರಸ್ತೆ ಗುಂಡಿಗಳ ಸಮಸ್ಯೆಯಿಂದ ವಾಹನ ಸವಾರರು ಎದುರಿಸುತ್ತಿರುವ ತೊಂದರೆಗೆ (Jet Patcher treatment for potholes) ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಹೊಸ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ.
ಸಣ್ಣ ಪ್ರಮಾಣದ ರಸ್ತೆ ಗುಂಡಿಗಳನ್ನು ವೇಗವಾಗಿ ಹಾಗೂ ಸಂಚಾರಕ್ಕೆ ಹೆಚ್ಚಿನ ಅಡಚಣೆ ಉಂಟಾಗದಂತೆ ದುರಸ್ತಿ ಮಾಡಲು ₹2 ಕೋಟಿ ಮೌಲ್ಯದ ‘ಜೆಟ್ ಪ್ಯಾಚರ್’ (Jet Patcher ) ಯಂತ್ರವನ್ನು ನಗರಕ್ಕೆ ತರಲಾಗಿದೆ.

ವಿಧಾನಸೌಧದ ಬಳಿ ಈ ಯಂತ್ರದ ಪ್ರಾಯೋಗಿಕ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದ್ದು, ಮುಂದಿನ (Jet Patcher treatment for potholes) ದಿನಗಳಲ್ಲಿ ನಗರದ ಎಲ್ಲಾ ಐದು ವಲಯಗಳಲ್ಲಿಯೂ ಈ ತಂತ್ರಜ್ಞಾನವನ್ನು ಬಳಸಲು ಉದ್ದೇಶಿಸಲಾಗಿದೆ.
ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಈ ಕುರಿತು ಮಾಹಿತಿ ನೀಡಿದ್ದು, ನಗರದ ರಸ್ತೆಗಳಲ್ಲಿ ಕಂಡುಬರುವ ವಿವಿಧ ರೀತಿಯ ಗುಂಡಿಗಳಿಗೆ ಅವುಗಳ ಸ್ವರೂಪ ಮತ್ತು ತೀವ್ರತೆಗೆ ಅನುಗುಣವಾಗಿ ಸೂಕ್ತ ತಂತ್ರಜ್ಞಾನ ಬಳಸಲಾಗುವುದು ಎಂದು ತಿಳಿಸಿದ್ದಾರೆ.
ನಗರದಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳುವುದೇ ದೊಡ್ಡ ಸವಾಲಾಗಿದೆ. ಸಾಮಾನ್ಯವಾಗಿ ರಸ್ತೆ ಗುಂಡಿಗಳನ್ನು
ಮುಚ್ಚುವ ವೇಳೆ ಕಾಮಗಾರಿ ಸ್ಥಳದಲ್ಲಿ ವಾಹನ ಸಂಚಾರ ನಿಧಾನಗೊಳ್ಳುವುದು ಅಥವಾ ಕೆಲವೊಮ್ಮೆ ಟ್ರಾಫಿಕ್ ಜಾಮ್ (Traffic Jam) ಉಂಟಾಗುವುದು ಸಾಮಾನ್ಯ.
ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಜೆಟ್ ಪ್ಯಾಚರ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ವಿಶೇಷವಾಗಿ ಸುಮಾರು 2ರಿಂದ 3 ಇಂಚು ಆಳವಿರುವ ಸಣ್ಣ ಗುಂಡಿಗಳ ದುರಸ್ತಿಗೆ ಈ ಯಂತ್ರ ಸೂಕ್ತವಾಗಿದೆ.
ರಸ್ತೆ ಹಾನಿಗೊಳಗಾದ ಭಾಗವನ್ನು ಮಾತ್ರ ಗುರಿಯಾಗಿಸಿಕೊಂಡು ಕಾಮಗಾರಿ ನಡೆಸಬಹುದಾಗಿರುವುದರಿಂದ ಸುತ್ತಮುತ್ತಲಿನ ರಸ್ತೆಯನ್ನು ಅನಗತ್ಯವಾಗಿ ಅಗೆದು ದೊಡ್ಡ ಪ್ರಮಾಣದ ಕಾಮಗಾರಿ ನಡೆಸುವ ಅಗತ್ಯ ಕಡಿಮೆಯಾಗುತ್ತದೆ.
ಧೂಳು, ಕಸವನ್ನು ಸ್ವಚ್ಛಗೊಳಿಸುವುದರಿಂದ ಹಿಡಿದು ಬಿಟುಮೆನ್ ಹಾಗೂ ವೆಟ್ ಮಿಕ್ಸ್ (Wet mix) ಅಳವಡಿಸುವವರೆಗೆ ಹಲವು ಹಂತಗಳನ್ನು ಒಂದೇ ಯಂತ್ರದ ಮೂಲಕ ನಿರ್ವಹಿಸುವುದು ಇದರ ಪ್ರಮುಖ ವೈಶಿಷ್ಟ್ಯವಾಗಿದೆ.
ಈ ಯಂತ್ರದ ಮತ್ತೊಂದು ಪ್ರಮುಖ ಪ್ರಯೋಜನವೆಂದರೆ ಕಡಿಮೆ ಸಮಯದಲ್ಲಿ ದುರಸ್ತಿ ಕಾರ್ಯ ಪೂರ್ಣಗೊಳಿಸುವ ಸಾಧ್ಯತೆ. ಸಾಮಾನ್ಯ ರಸ್ತೆ ದುರಸ್ತಿ
ಕಾಮಗಾರಿಯಿಂದಾಗಿ ವಾಹನ ಸವಾರರಿಗೆ ಉಂಟಾಗುವ ತೊಂದರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಜೆಟ್ ಪ್ಯಾಚರ್ ಬಳಸಲಾಗುತ್ತಿದೆ.
ಕಾಮಗಾರಿ ಮುಗಿದ ಬಳಿಕ ಸುಮಾರು 10 ನಿಮಿಷಗಳಲ್ಲೇ ಆ ಭಾಗದಲ್ಲಿ ವಾಹನ ಸಂಚಾರವನ್ನು ಪುನರಾರಂಭಿಸಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಇದರಿಂದ ರಸ್ತೆ ದುರಸ್ತಿಗಾಗಿ ರಾತ್ರಿ ವೇಳೆಯನ್ನೇ ಕಾಯಬೇಕಾದ ಅನಿವಾರ್ಯತೆ ಕಡಿಮೆಯಾಗಲಿದೆ.
ದಿನದ ವೇಳೆಯಲ್ಲಿಯೇ ಅಗತ್ಯವಿರುವ ಸ್ಥಳಗಳಲ್ಲಿ ತ್ವರಿತವಾಗಿ ದುರಸ್ತಿ ಕಾರ್ಯ ಕೈಗೊಳ್ಳಲು ಸಾಧ್ಯವಾಗುವುದರಿಂದ ನಗರದ ನಿರಂತರ ಸಂಚಾರ ವ್ಯವಸ್ಥೆಗೆ ಇದು ನೆರವಾಗಬಹುದು.
ವಿಶೇಷವಾಗಿ ವಾಹನ ದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ಸಣ್ಣ ಗುಂಡಿಗಳನ್ನು ತಕ್ಷಣವೇ ಸರಿಪಡಿಸುವ ಮೂಲಕ ಸಮಸ್ಯೆ ಮತ್ತಷ್ಟು ದೊಡ್ಡದಾಗುವುದನ್ನು ತಡೆಯುವ ನಿರೀಕ್ಷೆಯಿದೆ.
ಆದರೆ ಬೆಂಗಳೂರಿನ ಎಲ್ಲ ರೀತಿಯ ರಸ್ತೆ ಗುಂಡಿಗಳಿಗೂ ಒಂದೇ ತಂತ್ರಜ್ಞಾನವನ್ನು ಬಳಸಲು ಸಾಧ್ಯವಿಲ್ಲ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕೆಲವು ಕಡೆಗಳಲ್ಲಿ ಕೇವಲ ಮೇಲ್ಭಾಗದ ಡಾಂಬರು ಸವೆದು ಸಣ್ಣ ಗುಂಡಿಗಳು ನಿರ್ಮಾಣವಾಗಿದ್ದರೆ, ಮತ್ತೊಂದೆಡೆ ಡಾಂಬರಿನ ಕೆಳಗಿರುವ ಕಲ್ಲು-ಜಲ್ಲಿ ಪದರಗಳೂ ಹಾನಿಗೊಳಗಾಗಿ ಆಳವಾದ ಗುಂಡಿಗಳು ಉಂಟಾಗಿವೆ.
ಇಂತಹ ಗುಂಡಿಗಳಿಗೆ ಅವುಗಳ ಆಳ ಮತ್ತು ಹಾನಿಯ ಪ್ರಮಾಣಕ್ಕೆ ಅನುಗುಣವಾಗಿ ವಿಭಿನ್ನ ದುರಸ್ತಿ ತಂತ್ರಜ್ಞಾನ ಅಗತ್ಯವಾಗುತ್ತದೆ.
ಸಾಮಾನ್ಯವಾಗಿ ಬಳಸುವ ಹಾಟ್-ಮಿಕ್ಸ್ ತಂತ್ರಜ್ಞಾನಕ್ಕೆ ರೋಲರ್ ಅಗತ್ಯವಿದ್ದು, ಮಳೆಗಾಲದಲ್ಲಿ ಅದರ ಬಳಕೆಯಲ್ಲಿ ಕೆಲವು ಸವಾಲುಗಳು ಎದುರಾಗುತ್ತವೆ. ಹೀಗಾಗಿ
ಸಣ್ಣ ಮತ್ತು ನಿರ್ದಿಷ್ಟ ಪ್ರಮಾಣದ ಹಾನಿಗೆ ಜೆಟ್ ಪ್ಯಾಚರ್‌ನಂತಹ ತಂತ್ರಜ್ಞಾನ ಹೆಚ್ಚು ಅನುಕೂಲಕರವಾಗಬಹುದು ಎಂದು ತಿಳಿಸಲಾಗಿದೆ.
ಜೆಟ್ ಪ್ಯಾಚರ್‌ನಲ್ಲಿ ಕೋಲ್ಡ್-ಮಿಕ್ಸ್ ತಂತ್ರಜ್ಞಾನ ಬಳಸಲಾಗುತ್ತಿದ್ದು, 50 ಮಿ.ಮೀ. ಆಳದವರೆಗಿನ ಗುಂಡಿಗಳನ್ನು ದುರಸ್ತಿ ಮಾಡಲು ಸೆಮಿ ಡೆನ್ಸ್ ಬಿಟುಮಿನಸ್ ಕಾಂಕ್ರೀಟ್
ಬಳಸಲಾಗುತ್ತದೆ. ದುರಸ್ತಿ ಪ್ರಕ್ರಿಯೆಯಲ್ಲಿ ಮೊದಲು ಗುಂಡಿಯನ್ನು ನಿರ್ದಿಷ್ಟ ಆಕಾರದಲ್ಲಿ ಸಿದ್ಧಪಡಿಸಿ, ಸಡಿಲವಾದ ವಸ್ತುಗಳನ್ನು ತೆರವುಗೊಳಿಸಲಾಗುತ್ತದೆ.
ಗುಂಡಿಯಲ್ಲಿ ನೀರು ನಿಂತಿದ್ದರೆ ಅದನ್ನು ಹೊರಹಾಕಿ, ಅಗತ್ಯ ಪ್ರಮಾಣದ ಆರ್‌ಎಸ್1 ಬಿಟುಮೆನ್ ಎಮಲ್ಷನ್ ಟ್ಯಾಕ್ ಕೋಟ್ (Bitumen Emulsion Tack Coat) ಅನ್ವಯಿಸಲಾಗುತ್ತದೆ.
ನಂತರ ದುರಸ್ತಿ ಮಿಶ್ರಣವನ್ನು ಅಳವಡಿಸಿ, ಪ್ಲೇಟ್ ಕಾಂಪ್ಯಾಕ್ಟರ್ (Plate compactor) ಮೂಲಕ ಸಮರ್ಪಕವಾಗಿ ಸಂಕ್ಷೇಪಿಸಲಾಗುತ್ತದೆ. ಕೊನೆಯಲ್ಲಿ ಕಾಮಗಾರಿ ನಡೆದ ಸ್ಥಳವನ್ನು ಸ್ವಚ್ಛಗೊಳಿಸಲಾಗುತ್ತದೆ.
ಈ ಸುಧಾರಿತ ಜೆಟ್ ಪ್ಯಾಚಿಂಗ್ ತಂತ್ರಜ್ಞಾನವು ರಸ್ತೆ ದುರಸ್ತಿ ವೇಗವನ್ನು ಹೆಚ್ಚಿಸುವುದರ ಜೊತೆಗೆ ಸಂಚಾರಕ್ಕೆ ಉಂಟಾಗುವ ಅಡಚಣೆಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ.
ನಗರದ ಐದು ವಲಯಗಳಲ್ಲೂ ಇದರ ಬಳಕೆ ವಿಸ್ತರಿಸಿದರೆ, ಸಣ್ಣ ರಸ್ತೆ ಗುಂಡಿಗಳನ್ನು ತ್ವರಿತವಾಗಿ ಸರಿಪಡಿಸುವಲ್ಲಿ ಈ ತಂತ್ರಜ್ಞಾನ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.
ಇದನ್ನು ಓದಿ : https://vijayatimes.com/sit-raid-on-fake-medicines/