Weird : ಈಗಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳು (Joint Family) ಕಾಣಸಿಗುವುದೇ ಅಪರೂಪ. ಆದರೆ ಇಲ್ಲೊಂದು ಕುಟುಂಬವಿದೆ, ಇದು ಪ್ರಪಂಚದ ಅತಿ ದೊಡ್ಡ ಕುಟುಂಬ ಎಂಬ ಕೀರ್ತಿಗೂ ಪಾತ್ರವಾಗಿದೆ.
ಅಷ್ಟಕ್ಕೂ ಈ ಕುಟುಂಬ ಇರುವುದು ನಮ್ಮ ದೇಶದಲ್ಲೇ.

ಹೌದು, ಮಿಜೋರಾಮ್(Mizoram) ರಾಜ್ಯದ ಜಿಯೋನಾ ಚಾನಾ ಎನ್ನುವ ವ್ಯಕ್ತಿ ವಿಶ್ವದಲ್ಲೇ ಅತಿ ದೊಡ್ಡ ಕುಟುಂಬವನ್ನು ಮುನ್ನಡೆಸುತ್ತಿದ್ದಾರೆ. ಇವರ ಕುಟುಂಬದಲ್ಲಿ ಬರೋಬ್ಬರಿ 181 ಸದಸ್ಯರಿದ್ದಾರೆ. ಇದುವೇ ವಿಶ್ವದ ಅತಿ ದೊಡ್ಡ ಫ್ಯಾಮಿಲಿ ಎಂದು ಪರಿಗಣಿಸಲಾಗಿದೆ.
ಇನ್ನು, ಜಿಯೋನಾ ಚಾನಾ ಅವರ ಕುಟುಂಬ 100 ಕೊಠಡಿಗಳ ಮನೆಯಲ್ಲಿ ವಾಸಿಸುತ್ತಿರುವುದು ಮತ್ತೊಂದು ವಿಶೇಷ. ಜಿಯೋನಾರಿಗೆ 39 ಪತ್ನಿಯರು, 94 ಮಕ್ಕಳಿದ್ದಾರೆ.
ಅಷ್ಟೇ ಅಲ್ಲದೆ ಈ ಕುಟುಂಬದಲ್ಲಿ 14 ಸೊಸೆ ಮತ್ತು 33 ಮೊಮ್ಮಕ್ಕಳೂ ಕೂಡ ಇದ್ದಾರೆ.
ಇದನ್ನೂ ಓದಿ : https://vijayatimes.com/what-is-lumpy-virus/
ಬಡಗಿ ಕೆಲಸ ಮಾಡುವ ಜಿಯೋನಾ ಪ್ರತಿಯೊಬ್ಬರಿಗೂ ಕೊಠಡಿ ವ್ಯವಸ್ಥೆ ಮಾಡಿದ್ದು, ಅಡುಗೆ ಸೇರಿದಂತೆ ಎಲ್ಲ ಮನೆಗೆಲಸಗಳನ್ನು ಎಲ್ಲರೂ ಒಟ್ಟಿಗೆ ಸೇರಿ ನಿರ್ವಹಿಸುತ್ತಾರೆ.
ಕಟ್ಟುನಿಟ್ಟಿನ ಶಿಸ್ತಿನ ಮೂಲಕ ಎಲ್ಲರೂ ಅನ್ಯೋನ್ಯತೆಯಿಂದ ಬದುಕುವಂತೆ ಮಾಡುವಲ್ಲಿ ಜಿಯೋನಾ ಯಶಸ್ವಿಯಾಗಿದ್ದಾರೆ ಎನ್ನಬಹುದು.
ಜಿಯೋನಾ ಕುಟುಂಬಕ್ಕೆ ಪ್ರತಿದಿನ 45 ಕೆ.ಜಿ ಅಕ್ಕಿ, 30-40 ಕೋಳಿಗಳು, 25 ಕೆ.ಜಿ ಬೇಳೆ ಕಾಳುಗಳು, 60 ಕೆ.ಜಿ ತರಕಾರಿಯ ಅವಶ್ಯಕತೆ ಇರುತ್ತದೆ. ಹಾಗೆಯೇ 20 ಕೆ.ಜಿಗಿಂತಲೂ ಹೆಚ್ಚಿನ ಹಣ್ಣು ಹಂಪಲನ್ನು ಇವರು ಖರೀದಿಸುತ್ತಾರೆ.
ಕುಟುಂಬದ ಮಹಿಳೆಯರು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಹಿರಿಯ ಮಹಿಳೆಯನ್ನು ಮುಖ್ಯಸ್ಥರನ್ನಾಗಿ ನೇಮಿಸಿಕೊಳ್ಳಲಾಗಿದೆ.

ಇವರು ಎಲ್ಲ ಸದಸ್ಯರ ಜವಾಬ್ದಾರಿ ವಹಿಸಿ ಕೃಷಿ ಕೆಲಸದಲ್ಲಿ ಭಾಗಿಯಾಗುತ್ತಾರೆ. ಜಿಯೋನಾ ಅವರೊಂದಿಗೆ ಎಲ್ಲ ರಾಜಕೀಯ ಪಕ್ಷದವರು ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಒಂದೇ ಕುಟುಂಬದಲ್ಲಿ ಅನೇಕ ಮತದಾರರು ಇರುವುದರಿಂದ ಎಲ್ಲ ನಾಯಕರು ಕೂಡ ಇವರ ಕುಟುಂಬದೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದಾರೆ.
https://youtu.be/rzZ6nTC1Nws ನಮಗೆ ಹಿಂದಿ ಭಾಷೆ ಅಗತ್ಯವಿದೆಯಾ?
ವಿಶ್ವದ ಅತಿದೊಡ್ಡ ಕುಟುಂಬವೆಂದು ಗಿನ್ನೆಸ್ ದಾಖಲೆಯಲ್ಲಿ ಸ್ಥಾನ ಪಡೆದಿರುವ ಜಿಯೋನಾ ಕುಟಂಬ ಅನ್ಯೋನ್ಯತೆಯಿಂದ ಅವಿಭಕ್ತ ಕುಟುಂಬವಾಗಿ ಬದುಕುತ್ತಿರುವುದು ಅಚ್ಚರಿಯೇ ಸರಿ.
ಆದರೆ ಇತ್ತೀಚಿಗೆ, ಈ ಕುಟುಂಬದ ಮುಖ್ಯಸ್ಥ ಜಿಯೋನಾ ಚನಾ ಅವರು ತಮ್ಮ 76ನೇ ವಯಸ್ಸಿನಲ್ಲಿ ಮೃತಪಟ್ಟಿದ್ದು, 39 ಪತ್ನಿಯರು ಹಾಗೂ 94 ಮಕ್ಕಳನ್ನು ಅಗಲಿದ್ದಾರೆ.
- ಪವಿತ್ರ