ಭಾರತವನ್ನು(India) ನಾಗರಿಕ ರಾಷ್ಟ್ರವಾಗಿ ಒಂದು ಸಂವಿಧಾನಕ್ಕೆ(Constitution) ಬದ್ದವಾಗಿ ಗುರುತಿಸುವುದು ಅದರ ಪ್ರಾಚೀನ ಪರಂಪರೆ, ಇತಿಹಾಸ(History), ಸಂಸ್ಕೃತಿ(Culture) ಮತ್ತು ನಾಗರಿಕತೆಯನ್ನು ನಿರ್ಲಕ್ಷ್ಯ ಮಾಡಿದಂತಾಗುತ್ತದೆ.

ಇಂದು ನಮ್ಮೆಲ್ಲರನ್ನು ಒಗ್ಗೂಡಿಸಿರುವ ‘ರಾಷ್ಟ್ರೀಯತೆ’(Nationality) ಎಂಬ ಪರಿಕಲ್ಪನೆ ಭಾರತದ ಪ್ರಾಚೀನ ಬೇರುಗಳನ್ನು ಹೊಂದಿದೆ. ಸಾವಿರಾರೂ ವರ್ಷಗಳ ಹಿಂದೆಯೇ ಈ ನೆಲದಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆ ಇತ್ತು ಎಂದು ಜೆಎನ್‍ಯು(JNU) ಕುಲಪತಿ(Chancellor) ಸಾಂತಿಶ್ರೀ ಧೂಲಿಪುಡಿ ಪಂಡಿತ್(Santishree Dhulipudi Pandith) ಹೇಳಿದ್ದಾರೆ. ವಿಚಾರ ಸಂಕೀರಣವೊಂದರಲ್ಲಿ ಮಾತನಾಡಿದ ಅವರು, ‘ರಾಷ್ಟ್ರ’ ಎಂಬ ಪದವನ್ನು ಋಗ್ವೇದದಲ್ಲಿ ಉಲ್ಲೇಖಿಸಲಾಗಿದೆ.
ಈ ರಾಷ್ಟ್ರ ಎಂಬ ಪದವು ಕೇವಲ ಭೌಗೋಳಿಕ ಮತ್ತು ರಾಜಕೀಯಕ್ಕೆ ಸೀಮಿತವಾಗದೆ, ಸಾಂಸ್ಕøತಿಕ ಮತ್ತು ನಾಗರಿಕ ಪರಿಕಲ್ಪನೆಯೂ ಆಗಿದೆ. ಹೀಗಾಗಿ ಭಾರತದ ಸಾಂಸ್ಕೃತಿಕ ರಾಷ್ಟ್ರೀಯತೆಯೂ ಮಾನವಕೇಂದ್ರೀತ ಧರ್ಮಗಳಿಗಿಂತ ಭಿನ್ನವಾದ ಹಾದಿಯಲ್ಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಭಾರತೀಯ ನಾಗರಿಕತೆ ಸಾವಿರಾರೂ ವರ್ಷಗಳಿಂದ ವೈವಿಧ್ಯತೆ, ಪ್ರಜಾಪ್ರಭುತ್ವ, ಅಭಿವೃದ್ದಿ ಮತ್ತು ಎಲ್ಲವನ್ನೂ ಒಳಗೊಳ್ಳುವ ಮನೋಧರ್ಮವನ್ನು ಹೊಂದಿದೆ. ಈ ನಿಟ್ಟಿನಲ್ಲಿ ‘ರಾಷ್ಟ್ರೀಯತೆ’ ಎಂಬ ಪರಿಕಲ್ಪನೆ ಈ ನೆಲದಲ್ಲಿ ತೀರಾ ಇತ್ತೀಚೆಗೆ ಹುಟ್ಟಿರುವುದಲ್ಲ.

‘ಸಿಂಧೂ’ ಎಂಬ ಪರಿಕಲ್ಪನೆಯೊಡನೆ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಸ್ಪಷ್ಟವಾಗಿ ಗುರುತಿಸಬಹುದು. ನಮ್ಮ ಸಂವಿಧಾನ ರಾಷ್ಟ್ರೀಯತೆ ಎಂಬ ಪರಿಕಲ್ಪನೆಗೆ ಒಂದು ನಾಗರಿಕ ಕಾನೂನಿನ ರೂಪಕೊಟ್ಟಿದೆ. ಆದರೆ ಅದರ ಮೂಲ ಬೇರುಗಳು ಪ್ರಾಚೀನ ಭಾರತದ ನಾಗರಿಕತೆಯಲ್ಲಿದೆ. ನಮ್ಮ ಸಂವಿಧಾನದ ಅನೇಕ ಪರಿಕಲ್ಪನೆಗಳು ಪ್ರಾಚೀನ ಭಾರತದ ಅಂಶಗಳಿಂದ ಪ್ರಭಾವಿಸಿದೆ. ಆದರೆ ಈ ಕುರಿತು ಹೆಚ್ಚಿನ ಸಂಶೋಧನೆ ನಡೆಯಬೇಕಿದೆ.
ಕಾನೂನು ಮತ್ತು ವ್ಯವಸ್ಥೆಯ ಪರಿಕಲ್ಪನೆ ಈ ನೆಲದಲ್ಲಿ ಸಾವಿರಾರೂ ವರ್ಷಗಳ ಹಿಂದೆಯೇ ನೆಲೆಗೊಂಡಿತ್ತು ಎಂದು ಅವರು ಹೇಳಿದರು.