ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ (Bellary Medical College) ಮತ್ತು ಸಂಶೋಧನಾ ಕೇಂದ್ರ (Research Centre) , ಬಳ್ಳಾರಿ ಇಲ್ಲಿ ಖಾಲಿ (Job at Bellary Medical College) ಇರುವಂತಹ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ. ಇದೀಗ ಈ ಸಂಬಂಧ ಅರ್ಜಿಗಳನ್ನು ಆಹ್ವಾನ (Applications invited) ಮಾಡಲಾಗಿದೆ.
ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು ಹಾಗೂ ಇತರೆ ಬೋಧಕೇತರ ಹುದ್ದೆಗಳ (Non-teaching positions) ಭರ್ತಿಗೆ ನೇಮಕಾತಿ ಪ್ರಕಟಣೆಯನ್ನು ರಿಲೀಸ್ ಮಾಡಲಾಗಿದೆ. ಮಹಾವಿದ್ಯಾಲಯದ ವಿವಿಧ ಕಚೇರಿಯಲ್ಲಿ (Offices of the college) ಖಾಲಿ ಇರುವ ಹುದ್ದೆ ನೇಮಕ ಮಾಡಲಾಗುತ್ತಿದೆ. ಹೀಗಾಗಿ ಅರ್ಹರು ಈ ಕೆಲಸಗಳಿಗೆ ಅರ್ಜಿ ಸಲ್ಲಿಕೆ (Application submission) ಮಾಡಬಹುದು.
ಬೋಧಕ ಉದ್ಯೋಗಗಳನ್ನು ಕಾಂಟ್ರಾಕ್ಟ್ (Contract teaching jobs) ಬೇಸ್ ಮೇಲೆ ನೇಮಕ ಮಾಡಲು ನೇರ ಸಂದರ್ಶನ (Direct interview) ಏರ್ಪಡಿಸಲಾಗಿದೆ. ಹೀಗಾಗಿ ಈ ಕೆಲಸಗಳಿಗೆ ಸೇರಲು ಬಯಸುವವರು ತಮ್ಮ ತಮ್ಮ ವಿದ್ಯಾರ್ಹತೆಯ ದಾಖಲೆಗಳ ಮೂಲ (Source of documents) ಪ್ರತಿ, ಇತ್ತೀಚಿನ 2 ಫೋಟೋ, ಒಂದು ಸಾವಿರ ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿ (Payment of application fee) ಮಾಡಬೇಕು.
ಅರ್ಜಿ ಶುಲ್ಕವನ್ನು ನಿರ್ದೇಶಕರು, ಬಿಎಂಸಿಆರ್ಸಿ, ಬಳ್ಳಾರಿ (BMCRC, Bellary) , ಇವರ ಹೆಸರಲ್ಲಿ ಮೊದಲು ಡಿಡಿ ತೆಗೆಯಬೇಕು. 2 ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು. ಸಂದರ್ಶನವನ್ನು 02 ಏಪ್ರಿಲ್ 2025 ರಂದು ನಡೆಸಲಾಗುತ್ತದೆ. ಸಂದರ್ಶನ ನಡೆಯುವ ಸ್ಥಳ ಇಲ್ಲಿ ನೀಡಲಾಗಿದೆ.

ಸಂದರ್ಶನ ನಡೆಯುವ ಸ್ಥಳ :
ಆಡಳಿತ ಕಚೇರಿ (Administrative Office) , ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ (Medical College) ಮತ್ತು ಸಂಶೋಧನಾ ಕೇಂದ್ರ (ಬಿಎಂಸಿಆರ್ಸಿ), ಬಳ್ಳಾರಿ
ಉದ್ಯೋಗಗಳ (Jobs) ಹೆಸರು ಹಾಗೂ (Job at Bellary Medical College) ಸಂಖ್ಯೆ ಹೀಗಿವೆ:
ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ (Super Specialty Hospital) ಸೀನಿಯರ್ ರೆಸಿಡೆಂಟ್- 48
ಪ್ರಾಧ್ಯಾಪಕರು- 06
ಸಹ ಪ್ರಾಧ್ಯಾಪಕರು- 22
ಸಹಾಯಕ ಪ್ರಾಧ್ಯಾಪಕರು- 22
ಇತರೆ- 04
ಇದನ್ನು ಓದಿ – ಉತ್ತರಾಖಂಡದಲ್ಲಿ ಹಿಮಪಾತ :46 ಮಂದಿ ಕಾರ್ಮಿಕರ ರಕ್ಷಣೆ ಉಳಿದವರಿಗಾಗಿ ಮುಂದುವರೆದ ರಕ್ಷಣಾ ಕಾರ್ಯ
ನೇಮಕಾತಿ (Recruitment) ವಿಭಾಗಗಳು ಹೀಗಿವೆ:
ರೇಡಿಯೋ ಡಯಾಗ್ನೋಸಿಸ್ (Radio diagnosis) , ಟಿಬಿ ಅಂಡ್ ಸಿಡಿ, ಪ್ಲಾಸ್ಟಿಕ್ ಸರ್ಜರಿ, ಪೀಡಿಯಾಟ್ರಿಕ್ಸ್ ಸರ್ಜರಿ (Pediatrics Surgery) , ಸೈಕಿಯಾಟ್ರಿ, ನೆಫ್ರೋಲಜಿ, ಮೆಡಿಕಲ್ ಗ್ಯಾಸ್ಟ್ರೋಲಜಿ, ಜೆನೆರಲ್ ಮೆಡಿಷನ್, ಜೆನೆರಲ್ ಸರ್ಜರಿ, ಆರ್ಥೋಪೆಡಿಕ್, ಒಬಿಜಿ, ಯುರೋಲಜಿ, ಅನಸ್ತೇಷಿಯಾಲಜಿ, ರೇಡಿಯೋಥೆರಪಿ, ಎಂಡೊಕ್ರೈನಾಲಜಿ,
ಹೆಚ್ಚಿನ ವಿವರಗಳಿಗಾಗಿ ವೆಬ್ಸೈಟ್: https://bmcrcballari.karnataka.gov.in ಪರೀಕ್ಷಿಸಿ.