ಕಾಟನ್ ಕಾರ್ಪೋರೇಷನ್ ಆಫ್ ಇಂಡಿಯಾ (Cotton Corporation of India) ಲಿಮಿಟೆಡ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ (Various posts) ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ದಿ ಕಾಟನ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ಭಾರತದ ಸರ್ಕಾರದ (Government of India) ಮಿನಿ ರತ್ನ ಕಂಪನಿಯಾಗಿದೆ. ಇದು ಟೆಕ್ಸ್ಟೈಲ್ಸ್ ಸಚಿವಾಲಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ (Apply through online) ಸಲ್ಲಿಸಬಹುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ನೇಮಕಾತಿ ಪ್ರಾಧಿಕಾರ ಕಾಟನ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್
ಹುದ್ದೆಗಳ ಸಂಖ್ಯೆ (No. of posts) : 61
ವಿದ್ಯಾರ್ಹತೆ (Eligibility) : ಅಂಗೀಕೃತ ವಿವಿಯಿಂದ ಯಾವುದೇ ಪದವಿ
ನೇಮಕ ವಿಧಾನ (Method of recruitment) : ನೇರ ಸಂದರ್ಶನದ ಮೂಲಕ
ನೇರ ಸಂದರ್ಶನ ದಿನಾಂಕ : 23-11-2024

ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಕೇಂದ್ರ ಅಥವಾ ರಾಜ್ಯ ಸರ್ಕಾರದ ( State Govt) ಅಂಗೀಕೃತ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದಿರಬೇಕು.
ನೇಮಕಾತಿ ವಿಧಾನ : ಸಂದರ್ಶನದಲ್ಲಿ ತೋರಿದ ಕಾರ್ಯದಕ್ಷತೆ ಆಧಾರದ ಮೇಲೆ ನೇಮಕ ಮಾಡಲಾಗುತ್ತದೆ. ಪದವಿಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ (Short List ) ಮಾಡಿ ಸಂದರ್ಶನಕ್ಕೆ ಕರೆಯಲಾಗುತ್ತದೆ.
ನೇರ ಸಂದರ್ಶನಕ್ಕೆ ಹಾಜರಾಗುವವರು ಕೆಳಗಿನ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
• ಜನ್ಮ ದಿನಾಂಕ ದಾಖಲೆ
• SSLC, PUC, ಪದವಿ ಪ್ರಮಾಣ ಪತ್ರಗಳು.
• ಆಧಾರ್ ಕಾರ್ಡ್
ದಿ ಕಾಟನ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ನ ಅಧಿಕೃತ ವೆಬ್ಸೈಟ್ : https://cotcorp.org.in/
ನೇರ ಸಂದರ್ಶನ ವಿಳಾಸ : ದಿ ಕಾಟನ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್, ಪರಸ್ಕರ್ ಟವರ್ಸ್, ವಿದ್ಯಾ ನಗರ, ಅಕೊ̧ಲಾ ಮಹಾರಾಷ್ಟ್ರ – 444001 ದೂರವಾಣಿ ಸಂಖ್ಯೆ : 0724 – 2401183