ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ಬಗ್ಗೆ ಕರ್ನಾಟಕ ಪೊಲೀಸ್ ಇಲಾಖೆಯಿಂದ ( Karnataka Police ) ನೇಮಕಾತಿ ಅಧಿಸೂಚನೆ ( Recruitment Notification ) ಹೊರಡಿಸಲಾಗಿದ್ದು, ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವಂತ 70 ಕೆ ಎಸ್ ಆರ್ ಪಿ ಹಾಗೂ ಐ ಆರ್ ಬಿ ವಿಶೇಷ ಮೀಸಲು ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗಾಗಿ ಆನ್ ಲೈನ್ ( Online ) ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿರೋದಾಗಿ ತಿಳಿಸಿದೆ.
ಒಟ್ಟು 70 ಪಿಎಸ್ಐ ಹುದ್ದೆಗಳು
ಅರ್ಜಿ ಶುಲ್ಕ – ಎಸ್ಸಿ, ಎಸ್ಟಿ, ಪ್ರವರ್ಗ-1ಕ್ಕೆ ರೂ.250, ಇತರರಿಗೆ ರೂ.500
ವಯೋಮಿತಿ – ಎಸ್ಸಿ, ಎಸ್ಟಿ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ 28 ವರ್ಷ, ಇತರೆ ಅಭ್ಯರ್ಥಿಗಳಿಗೆ 26 ವರ್ಷ.
ಪ್ರಮುಖ ದಿನಾಂಕಗಳು – ದಿನಾಂಕ 20-12-2021ರಿಂದ ಅರ್ಜಿ ಸಲ್ಲಿಕೆ ಆರಂಭ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18-01-2022. ಅರ್ಜಿ ಶುಲ್ಕ ಪಾವತಿಗೆ ದಿನಾಂಕ 20-01-2022 ಕೊನೆಯ ದಿನ
ವೇತನ ಶ್ರೇಣಿ – ರೂ.37,900ರಿಂದ 70,850
ನೇಮಕಾತಿ ವಿಧಾನ – ದೇಹದಾರ್ಢ್ಯತೆ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ ಹಾಗೂ ಲಿಖಿತ ಪರೀಕ್ಷೆಯ ( Entrance Exam ) ಮೂಲಕ ಆಯ್ಕೆ.
ಅರ್ಜಿ ಸಲ್ಲಿಕೆ ವಿಧಾನ– ಈ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗಿದೆ. ಅರ್ಜಿಯನ್ನು www.kecruitment.ksp.gov.in ಜಾಲತಾಣದ ಮೂಲಕ ಸಲ್ಲಿಸಬೇಕಾಗಿರುತ್ತದೆ.