Job News : ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಡೆವಲಪ್‌ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ನ (KSEDCL) ಖಾಲಿ ಹುದ್ದೆಗಳ ನೇಮಕಾತಿಗಾಗಿ ಇದೀಗ ಅರ್ಜಿ ಸಲ್ಲಿಕೆಯನ್ನು ಮುಂದೂಡಲಾಗಿದೆ . ಈ ಹಿಂದೆ ಕೊನೆಯ ದಿನಾಂಕ ಜುಲೈ 22 ಎಂದು ಘೋಷಿಸಲಾಗಿತ್ತು. ಇದೀಗ ಅರ್ಜಿ ಸಲ್ಲಿಸಲು ಜುಲೈ 31 ರವರೆಗೆ ಅವಕಾಶ ನೀಡಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಸಹಾಯಕ ವ್ಯವಸ್ಥಾಪಕ ಹುದ್ದೆಗಳನ್ನು ಮತ್ತು ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆನ್ಲೈನ್(Online) ಮೂಲಕ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು:
ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
ಸಂಸ್ಥೆಯ ಹೆಸರು : ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (KSEDCL)
ಹುದ್ದೆಗಳ ಸಂಖ್ಯೆ: 26
ಹುದ್ದೆಯ ಹೆಸರು: ಸಹಾಯಕ , ಸಹಾಯಕ ವ್ಯವಸ್ಥಾಪಕ
ಹುದ್ದೆಗಳ ವಿಭಾಗವಾರು ಮಾಹಿತಿ:
ಸಹಾಯಕ ವ್ಯವಸ್ಥಾಪಕರು (ತಾಂತ್ರಿಕವಲ್ಲದ) ಗ್ರೂಪ್-ಬಿ: 2 ಹುದ್ದೆಗಳು
ಸಹಾಯಕ ವ್ಯವಸ್ಥಾಪಕರು (ತಾಂತ್ರಿಕ) ಗ್ರೂಪ್-ಬಿ: 4 ಹುದ್ದೆಗಳು
ಖಾಸಗಿ ಕಾರ್ಯದರ್ಶಿ ಗ್ರೂಪ್-ಸಿ: 1 ಹುದ್ದೆ
ಹಿರಿಯ ಸಹಾಯಕ (ತಾಂತ್ರಿಕೇತರ) ಗ್ರೂಪ್-ಸಿ: 3 ಹುದ್ದೆಗಳು
ಹಿರಿಯ ಸಹಾಯಕ (ತಾಂತ್ರಿಕ) ಗ್ರೂಪ್-ಸಿ: 4 ಹುದ್ದೆಗಳು
ಸಹಾಯಕ (ತಾಂತ್ರಿಕತೇರ) ಗ್ರೂಪ್-ಸಿ: 6 ಹುದ್ದೆಗಳು
ಸಹಾಯಕ (ತಾಂತ್ರಿಕ) ಗ್ರೂಪ್-ಸಿ: 6 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಸಹಾಯಕ ವ್ಯವಸ್ಥಾಪಕರು (ತಾಂತ್ರಿಕತೇರ): ಪದವಿ ಪೂರ್ಣಗೊಳಿಸಿರಬೇಕು.
ಸಹಾಯಕ ವ್ಯವಸ್ಥಾಪಕರು (ತಾಂತ್ರಿಕ)- ಎಲೆಕ್ಟ್ರಾನಿಕ್ಸ್/CS/IT/ECE ನಲ್ಲಿ ಇಂಜಿನಿಯರಿಂಗ್ ಪದವಿಹಿರಿಯ ಸಹಾಯಕ (ತಾಂತ್ರಿಕೇತರ)- ಪದವಿ ಪೂರ್ಣಗೊಳಿಸಿರಬೇಕು
ಹಿರಿಯ ಸಹಾಯಕ (ತಾಂತ್ರಿಕ)- ಎಲೆಕ್ಟ್ರಾನಿಕ್ಸ್/CS/IT/ECE ನಲ್ಲಿ ಇಂಜಿನಿಯರಿಂಗ್ ಪದವಿ
ಖಾಸಗಿ ಕಾರ್ಯದರ್ಶಿ – ಎಲೆಕ್ಟ್ರಾನಿಕ್ಸ್/CS/IT/ECE ನಲ್ಲಿ ಇಂಜಿನಿಯರಿಂಗ್ ಪದವಿ
ಸಹಾಯಕ (ತಾಂತ್ರಿಕತೇರ)- ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಸಹಾಯಕ (ತಾಂತ್ರಿಕ)- ಎಲೆಕ್ಟ್ರಾನಿಕ್ಸ್/CS/IT/ECE ನಲ್ಲಿ ಇಂಜಿನಿಯರಿಂಗ್ ಪದವಿ
ಅರ್ಜಿ ಶುಲ್ಕ:
ಸಾಮಾನ್ಯ ಮತ್ತು ಇತರೆ ವರ್ಗದ ಅಭ್ಯರ್ಥಿಗಳು: ರೂ.1000/-
SC/ST ಮತ್ತು Cat-I ಅಭ್ಯರ್ಥಿಗಳು: ರೂ.750/-
PWD & Ex-Servicemen ಅಭ್ಯರ್ಥಿಗಳು: ರೂ.250/-
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-ಜುಲೈ-2023
ವಯೋಮಿತಿ
ಅಭ್ಯರ್ಥಿಗಳ ವಯಸ್ಸು 18 ವರ್ಷಗಳಿಂದ 33 ವರ್ಷಗಳ ನಡುವೆ ಇರಬೇಕು ಎಂದು ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಡೆವಲಪ್‌ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ತಿಳಿಸಿದೆ.
ವಯೋಮಿತಿ ಸಡಿಲಿಕೆ:
Cat-2A/2B/3A & 3B ಅಭ್ಯರ್ಥಿಗಳಿಗೆ: 02 ವರ್ಷಗಳು
SC/ST/Cat-I ಅಭ್ಯರ್ಥಿಗಳಿಗೆ: 05 ವರ್ಷಗಳು ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಕೆಳಗೆ ಕೊಟ್ಟಿರುವ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಈ ಹುದ್ದೆಗಳಿಗೆ ನೇರವಾಗಿ ಅರ್ಜಿ ಸಲ್ಲಿಸಬಹುದು.
https://cetonline.karnataka.gov.in/kea/karrec23
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು
ಅಧಿಕೃತ ವೆಬ್‌ಸೈಟ್: keonics.in ಭೇಟಿ ನೀಡಿ
ರಶ್ಮಿತಾ ಅನೀಶ್