Kannada News: ಏಮ್ಸ್ ಸಂಸ್ಥೆಗಳಲ್ಲಿ ಖಾಲಿ ಇರುವ ನರ್ಸಿಂಗ್ ಆಫೀಸರ್ಗಳ ಹುದ್ದೆಗೆ ನೇಮಕ: ಪರೀಕ್ಷೆಗೆ ಅರ್ಜಿ ಆಹ್ವಾನ.
Job In AIIMS: ಭಾರತದಾದ್ಯಂತವಿರುವ ಎಲ್ಲಾ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳಲ್ಲಿ ಖಾಲಿ ಇರುವ ನರ್ಸಿಂಗ್ ಆಫೀಸರ್ (Nursing Officer) ಹುದ್ದೆಗಳ ಭರ್ತಿಗಾಗಿ ಪರೀಕ್ಷೆಗಳನ್ನು ನಡೆಸಲು ನೋಟಿಫಿಕೇಶನ್ (Notification) ಬಿಡುಗಡೆ ಮಾಡಲಾಗಿದ್ದು, ಈ ಹುದ್ದೆ ಕುರಿತ ಸಂಪೂರ್ಣ ಡಿಟೈಲ್ಸ್ ಹೀಗಿದೆ.
ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (All India Institute of Medical Sciences), ನವದೆಹಲಿಯು ವಿವಿಧ ಏಮ್ಸ್ಗಳಲ್ಲಿ ಖಾಲಿ ಇರುವಂತಹ ನರ್ಸಿಂಗ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ, ಇದೀಗ ಪರೀಕ್ಷಾ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಈ ಹುದ್ದೆಗಳಿಗೆ ಮೊದಲು ನೇಮಕಾತಿಯ ಸಾಮಾನ್ಯ ಅರ್ಹತೆಯ ಪರೀಕ್ಷೆ –NORCET 7 ಅನ್ನು ನಡೆಸಲಿದೆ.
ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಕೆಳಗಿನಂತೆ ತಿಳಿಸಿದ ವಿದ್ಯಾರ್ಹತೆ, ವಯಸ್ಸಿನ ಅರ್ಹತೆ ಇರುವವರು ಆಗಸ್ಟ್ (August) 21 ರೊಳಗೆ ಅರ್ಜಿ ಸಲ್ಲಿಸಿ. ಏಮ್ಸ್ ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ 7ನೇ ವೇತನ ಆಯೋಗದ ಲೆವೆಲ್ 2 ಪೇ ಮೆಟ್ರಿಕ್ ಪ್ರಕಾರದ Rs.9300- 34800 ವೇತನ ಶ್ರೇಣಿ ಇರಲಿದೆ. ಗ್ರೇಡ್ ಪೇ ರೂ.4600ದ ಗ್ರೂಪ್ ಬಿ ಹುದ್ದೆಗಳು ಇವಾಗಿವೆ. ಈ ಹುದ್ದೆಗಳನ್ನು ದೇಶದ ವಿವಿಧ ಏಮ್ಸ್ಗಳಲ್ಲಿ ಖಾಲಿ ಇರುವಲ್ಲಿ ನೇಮಕ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಅರ್ಹತೆಗಳೇನು?
ಬಿಎಸ್ಸಿ (ಹಾನರ್ಸ್) ನರ್ಸಿಂಗ್ / ಬಿಎಸ್ಸಿ ನರ್ಸಿಂಗ್ / ಬಿಎಸ್ಸಿ (ಪೋಸ್ಟ್-ಸರ್ಟಿಫಿಕೇಟ್) / ಪೋಸ್ಟ್ ಬೇಸಿಕ್ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಹತೆಗಳನ್ನು ಇಂಡಿಯನ್ ನರ್ಸಿಂಗ್ ಕೌನ್ಸಿಲ್ (Indian Nursing Council) / ರಾಜ್ಯ ನರ್ಸಿಂಗ್ ಕೌನ್ಸಿಲ್ ನಿಂದ ಅಂಗೀಕೃತ ಸಂಸ್ಥೆ ಅಥವಾ ವಿವಿಗಳಿಂದ ಪಡೆದಿರಬೇಕು. ಜತೆಗೆ ರಾಜ್ಯ / ರಾಷ್ಟ್ರ ನರ್ಸಿಂಗ್ ಕೌನ್ಸಿಲ್ನಲ್ಲಿ ರಿಜಿಸ್ಟ್ರೇಷನ್ ಪಡೆದಿರಬೇಕು.
ಅಥವಾ ಡಿಪ್ಲೊಮ ಇನ್ ಜೆನೆರಲ್ ನರ್ಸಿಂಗ್ ಮಿಡ್ವೈಫರಿ ಜತೆಗೆ ರಾಜ್ಯ / ರಾಷ್ಟ್ರ ನರ್ಸಿಂಗ್ ಕೌನ್ಸಿಲ್ನಲ್ಲಿ ರಿಜಿಸ್ಟ್ರೇಷನ್ (Registration) ಪಡೆದಿರಬೇಕು. ಕನಿಷ್ಠ 2 ವರ್ಷ ಕಾರ್ಯಾನುಭವವನ್ನು 50 ಹಾಸಿಗೆಗಳ ಆಸ್ಪತ್ರೆಗಳಲ್ಲಿ ಪಡೆದಿರಬೇಕು.
ವಯಸ್ಸಿನ ಅರ್ಹತೆಗಳೇನು?
ಕನಿಷ್ಠ 18-30 ವರ್ಷ ವಯೋಮಾನದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸರ್ಕಾರಿ ನಿಯಮಗಳ ಪ್ರಕಾರ ಇತರೆ ಹಿಂದುಳಿದ ವರ್ಗದವರಿಗೆ 3 ವರ್ಷ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ.
ಅಪ್ಲಿಕೇಶನ್ ಶುಲ್ಕ ವಿವರ
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ರೂ.3000.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.3000.
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಇಡಬ್ಲ್ಯೂಎಸ್ (EWS) ಅಭ್ಯರ್ಥಿಗಳಿಗೆ ರೂ.2400.
ವಿಕಲಚೇತನರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಏಮ್ಸ್ ನರ್ಸಿಂಗ್ ಆಫೀಸರ್ ನೇಮಕಾತಿ ವಿಧಾನ
ಸ್ಟೇಜ್-1 : ಪೂರ್ವಭಾವಿ ಪರೀಕ್ಷೆ
ಸ್ಟೇಜ್-2: ಮುಖ್ಯ ಪರೀಕ್ಷೆ
ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧಿಕೃತ ವೆಬ್ಸೈಟ್ www.aiimsexams.ac.in ಗೆ ಭೇಟಿ ನೀಡುವ ಮೂಲಕ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹಾಗೂ ಹೆಚ್ಚಿನ ವಿವರಗಳಿಗಾಗಿ ಅಧಿಸೂಚನೆ ಓದಬಹುದು.
ಅಪ್ಲಿಕೇಶನ್ ಸಲ್ಲಿಸಲು ಬೇಕಾದ ದಾಖಲೆಗಳು
ಆಧಾರ್ ಕಾರ್ಡ್
ಎಸ್ಎಸ್ಎಲ್ಸಿ ಅಂಕಪಟ್ಟಿ
ಬಿಎಸ್ಸಿ (ಹಾನರ್ಸ್) ನರ್ಸಿಂಗ್ / ಬಿಎಸ್ಸಿ ನರ್ಸಿಂಗ್ (BSc Nursing) / ಬಿಎಸ್ಸಿ (ಪೋಸ್ಟ್-ಸರ್ಟಿಫಿಕೇಟ್) / ಪೋಸ್ಟ್ ಬೇಸಿಕ್ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಹತೆ ದಾಖಲೆಗಳು.
ಅಥವಾ ಡಿಪ್ಲೊಮ ಇನ್ ಜೆನೆರಲ್ ನರ್ಸಿಂಗ್ ಮಿಡ್ವೈಫರಿ ದಾಖಲೆಗಳು.
ರಾಜ್ಯ / ರಾಷ್ಟ್ರ ನರ್ಸಿಂಗ್ ಕೌನ್ಸಿಲ್ನಲ್ಲಿ ರಿಜಿಸ್ಟ್ರೇಷನ್ ಪಡೆದ ದಾಖಲೆ.
ಇಮೇಲ್ ವಿಳಾಸ
ಮೊಬೈಲ್ ನಂಬರ್ (Mobile Number)
ಅಭ್ಯರ್ಥಿಗಳ ವೈಯಕ್ತಿಕ ವಿವರ
ಕಾರ್ಯಾನುಭವ ದಾಖಲೆಗಳು
ಇತರೆ
ಪ್ರಮುಖ ದಿನಾಂಕಗಳು
ಆನ್ಲೈನ್ ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ : 01-08-2024
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 21-08-2024 ರ ಸಂಜೆ 05-00 ಗಂಟೆವರೆಗೆ.
ಆನ್ಲೈನ್ ಅರ್ಜಿ ಮಾಹಿತಿ ತಿದ್ದುಪಡಿಗೆ ಅವಕಾಶ ನೀಡುವ ದಿನಾಂಕ: 22-08-2024 To 24-08-2024
ಕಂಪ್ಯೂಟರ್ ಆಧಾರಿತ ಸ್ಟೇಜ್-1 ಪೂರ್ವಭಾವಿ ಪರೀಕ್ಷೆ ದಿನಾಂಕ: 15-09-2024
ಸ್ಟೇಜ್-2 ಮುಖ್ಯ ಪರೀಕ್ಷೆ ದಿನಾಂಕ: 04-10-2024
ಫಲಿತಾಂಶ ದಿನಾಂಕ : ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿ ತಿಳಿಯಲು ಏಮ್ಸ್ ವೆಬ್ಸೈಟ್ಗೆ (Website) ಭೇಟಿ ನೀಡಿರಿ.