Karnataka:ಸರ್ಕಾರಿ ಕೆಲಸ ಹುಡುಕುತ್ತಿರುವವರಿಗೆ ಇಲ್ಲಿದೆ ಸುವರ್ಣ ಅವಕಾಶ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ (job vacancy in bpnl) ದಿನಾಂಕ ಮಾರ್ಚ 15, 2023 ಆಗಿದೆ.
ಭಾರತೀಯ ಪಶು ನಿಗಮ್ ಲಿಮಿಟೆಡ್(Pashu Nigam Limited) ಕೌಶಲ್ಯ ತರಬೇತಿ ಕೇಂದ್ರದಲ್ಲಿ ಅಗತ್ಯ ಇರುವ 2800 ಕ್ಕೂ ಹೆಚ್ಚು ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.
ಫೆಬ್ರುವರಿ 05, 2023 ರಿಂದ ಅರ್ಜಿ ಆಹ್ವಾನ ಮಾಡಲಾಗಿದ್ದು, ಮಾರ್ಚ್ 15, 2023 ಕ್ಕೆ ಕೊನೆಯ ದಿನಾಂಕ ಇದ್ದು, ಅಭ್ಯರ್ಥಿಗಳು ಅನ್ ಲೈನ್ (Online)ಮೂಲಕ ಅರ್ಜಿ ಸಲ್ಲಿಸಬೇಕು.

ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 21 ವರ್ಷ ವಾಗಿರಬೇಕು ಗರಿಷ್ಠ 45 ಮೀರಿರಬಾರದು. ಅಧಿಸೂಚನೆ (job vacancy in bpnl) ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 10000 ದಿಂದ 18000 ವರೆಗೆ ವೇತನ ಸಿಗಲಿದೆ.
2800 ವಿವಿಧ ಹುದ್ದೆಗಳಲ್ಲಿ ಕೇಂದ್ರ ಮೇಲ್ವಿಚಾರಕ ಹುದ್ದೆಗಳು 341, ಸಹಾಯಕ ಕೇಂದ್ರ ಮೇಲ್ವಿಚಾರಕ 628, ಕಛೇರಿ ಸಹಾಯಕ 314, ತರಬೇತಿದಾರರು 942,
Multi tasking assistant 628 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹುದ್ದೆಗಳ ಅನುಸಾರ ಅರ್ಜಿ ಶುಲ್ಕ ಇರುತ್ತದೆ.
ಕೇಂದ್ರ ಮೇಲ್ವಿಚಾರಕ ಹುದ್ದೆಗಳಿಗೆ 945 ರೂ.
ಸಹಾಯಕ ಮೇಲ್ವಿಚಾರಕ ಹುದ್ದೆಗಳಿಗೆ 828 ರೂ.
ಕಛೇರಿ ಸಹಾಯಕ ಹುದ್ದೆಗಳಿಗೆ 708 ರೂ. ಮತ್ತು ತರಬೇತಿದಾರರಿಗೆ 591 Multi tasking assistant ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 472 ರೂ. ಅರ್ಜಿ ಶುಲ್ಕ ಕಟ್ಟ ಬೇಕಾಗುತ್ತದೆ.
ಭಾರತೀಯ ಪಶು ನಿಗಮ ಲಿಮಿಟೆಡ್ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಅಗತ್ಯ ಇರುವ ಕೇಂದ್ರ ಮೇಲ್ವಿಚಾರಕ ಹುದ್ದೆಗಳಿಗೆ ವಿದ್ಯಾರ್ಹತೆ ಪದವಿ ಉತ್ತೀರ್ಣರಾಗಿರಬೇಕು. ಸಹಾಯಕ ಕೇಂದ್ರ ಮೇಲ್ವಿಚಾರಕ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಉತೀರ್ಣರಾಗಿರಬೇಕು. ತರಬೇತಿ ಹುದ್ದೆಗಳಿಗೆ ಅರ್ಜಿದಾರರು ಪಶುಪಾಲನಾ ವಿಭಾಗದಲ್ಲಿ ಡಿಪ್ಲೋಮಾ (Diploma) ಪಾಸ್ ಆಗಿರಬೇಕು. Multi tasking assistant ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ ಪಾಸ್ ಆಗಿರಬೇಕು.
ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಹುದ್ದೆ ತಮ್ಮದಾಗಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್ ಭೇಟಿ ನೀಡಿ
Byline-Basavaraj k