job-vacancy-work-from-home-kannada-job-news
ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ(GAIL )ಇದೀಗ ವಿಶೇಷ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಒಟ್ಟಾರೆ 391 ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಎಸ್ಎಸ್ಎಲ್ಸಿ, ಪಿಯುಸಿ, ಡಿಪ್ಲೊಮ (SSLC, PUC, Diploma) ಪದವಿ, ಸ್ನಾತಕೋತ್ತರ ಪದವಿ ಮುಗಿಸಿದ್ದು, ಉದ್ಯೋಗಕ್ಕೆ ಸರ್ಚ್ ಮಾಡುತ್ತಿರುವವರು ಉದ್ಯೋಗಾವಕಾಶಕ್ಕಾಗಿ ಇಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ವಿವಿಧ ಹುದ್ದೆಗಳ ಭರ್ತಿಗೆ ವಿಶೇಷ ಎಂಪ್ಲಾಯ್ಮೆಂಟ್ ನೋಟಿಫಿಕೇಶನ್ (Employment Notification) ಅನ್ನು ಬಿಡುಗಡೆ ಮಾಡಿದೆ.
ಒಟ್ಟಾರೆ 391 ನಾನ್ ಎಕ್ಸಿಕ್ಯೂಟಿವ್ (Non Executive) ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಅಧಿಸೂಚನೆ ಹೊಡಿಸಿದ್ದು, ಖಾಲಿಯಿರುವ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಖಾಲಿ ಇರುವ ಹುದ್ದೆಗಳು
ಜೂನಿಯರ್ ಇಂಜಿನಿಯರ್ (ಕೆಮಿಕಲ್)- 2
ಜೂನಿಯರ್ ಇಂಜಿನಿಯರ್ (Junior Engineer) (ಮೆಕ್ಯಾನಿಕಲ್)-1
ಫೋರ್ಮ್ಯಾನ್ (ಇಲೆಕ್ಟ್ರಿಕಲ್)-1
ಫೋರ್ಮ್ಯಾನ್ (ಇನ್ಸ್ಟ್ರುಮೆಂಟೇಶನ್ )-14
ಫೋರ್ಮ್ಯಾನ್ ( ಸಿವಿಲ್)-6
ಜೂನಿಯರ್ ಸೂಪರಿಂಟೆಂಡಂಟ್ (ಅಫೀಶಿಯಲ್ ಲಾಂಗ್ವೇಜ್)-5
ಜೂನಿಯರ್ ಕೆಮಿಸ್ಟ್-8
ಜೂನಿಯರ್ ಅಕೌಂಟಂಟ್-14
ಟೆಕ್ನಿಕಲ್ ಅಸಿಸ್ಟಂಟ್ (ಲ್ಯಾಬೋರೇಟರಿ)-3
ಆಪರೇಟರ್ (ಕೆಮಿಕಲ್)-73
ಟೆಕ್ನೀಷಿಯನ್ (technician) (ಇಲೆಕ್ಟ್ರಿಕಲ್)-44
ಟೆಕ್ನೀಷಿಯನ್ (ಇನ್ಸ್ಟ್ರುಮೆಂಟೇಶನ್)-45
ಟೆಕ್ನೀಷಿಯನ್ (ಮೆಕ್ಯಾನಿಕಲ್)-39
ಟೆಕ್ನೀಷಿಯನ್ (ಟೆಲಿಕಾಂ ಮತ್ತು ಟೆಲಿಮೆಟ್ರಿ)-11
ಆಪರೇಟರ್ (ಫೈಯರ್)-39
ಆಪರೇಟರ್ (ಬಾಯ್ಲರ್)-8
ಅಕೌಂಟ್ಸ್ ಅಸಿಸ್ಟಂಟ್-13
ಬ್ಯುಸಿನೆಸ್ ಅಸಿಸ್ಟಂಟ್-65
ಶೈಕ್ಷಣಿಕ ಅರ್ಹತೆಗಳು :
ಹುದ್ದೆಗಳಿಗೆ ಅನುಗುಣವಾಗಿ ಎಸ್ಎಸ್ಎಲ್ಸಿ, ಪಿಯುಸಿ, ಡಿಪ್ಲೊಮ, ಪದವಿ, ಸ್ನಾತಕೋತ್ತರ ಪದವಿ, ತಾಂತ್ರಿಕ ಶಿಕ್ಷಣವನ್ನು ಹುದ್ದೆಗೆ ಸಂಬಂಧಿತ ಬ್ರ್ಯಾಂಚ್ನಲ್ಲಿ ಪಡೆದಿರಬೇಕು.ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ ವಯಸ್ಸನ್ನು ವರ್ಗಾವಾರು ತಿಳಿಯಲು ಅಧಿಸೂಚನೆ ಪೂರ್ತಿಯಾಗಿ ಓದಬೇಕು.
Gas Authority of India Limited has released a special employment notification for filling various posts.
ಪ್ರಮುಖ ದಿನಾಂಕಗಳು
ಆನ್ಲೈನ್ ಅಪ್ಲಿಕೇಶನ್ (Online Application)ಸಲ್ಲಿಸಲು ಆರಂಭಿಕ ದಿನಾಂಕ: 08-08-2024ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 07–09–2024 ರ ಸಂಜೆ 06 ಗಂಟೆವರೆಗೆ.
ಅರ್ಜಿ ಸಲ್ಲಿಸುವುದು ಹೇಗೆ?
ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ನ ಈ ಮೇಲಿನ ಹುದ್ದೆಗಳಿಗೆ ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಹಾಗೂ ಸವಿವರ ಮಾಹಿತಿಗಾಗಿ ಅಧಿಸೂಚನೆ ಚೆಕ್ ಮಾಡಲು https://cdn.digialm.com/EForms/configuredHtml/1258/89506/Index.html ವೆಬ್ಸೈಟ್ಗೆ ಭೇಟಿ ನೀಡಿರಿ.
ಅರ್ಜಿ ಶುಲ್ಕ ವಿವರ
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ರೂ.50.ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.50ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.50ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್(Debit Card, Credit Card, Net Banking) ಯುಪಿಐ ಮೂಲಕ ಪಾವತಿ ಮಾಡಬಹುದು.
ಆಯ್ಕೆ ವಿಧಾನ : ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ (ಕೆಲವು ಹುದ್ದೆಗೆ) /ಸಂದರ್ಶನ/ ಮೂಲ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು, ಮಾಹಿತಿಗಳು:
ಆಧಾರ್ ಕಾರ್ಡ್, ಎಸ್ಎಸ್ಎಲ್ಸಿ ಅಂಕಪಟ್ಟಿ, , ಪಿಯುಸಿ, ಡಿಪ್ಲೊಮ, ಪದವಿ, ಸ್ನಾತಕೋತ್ತರ ಪದವಿ, ತಾಂತ್ರಿಕ ಶಿಕ್ಷಣಗಳ ಪಾಸ್ ಸರ್ಟಿಫಿಕೇಟ್ (Pass Certificate) , ಇ-ಮೇಲ್, ಮೊಬೈಲ್ ನಂಬರ್ (Mobile Number), ಇತರೆ ಅಗತ್ಯ ಮಾಹಿತಿಗಳು ಬೇಕಾಗುತ್ತವೆ.