Job News : ಕಾರ್ಮಿಕರ ರಾಜ್ಯ ವಿಮಾ ನಿಗಮವು (ESIC) ಆಸಕ್ತ ಅಭ್ಯರ್ಥಿಗಳನ್ನು ಅಸೋಸಿಯೇಟ್ ಪ್ರೊಫೆಸರ್ ,ಸೀನಿಯರ್ ರೆಸಿಡೆಂಟ್ / ಟ್ಯೂಟರ್, ಸೀನಿಯರ್ ರೆಸಿಡೆಂಟ್, ಸ್ಪೆಷಲಿಸ್ಟ್, ಮತ್ತು ಇತರೆ ಕೆಲವು ಹುದ್ದೆಗಳ ಭರ್ತಿಗೆ ನೇರ ಸಂದರ್ಶನಕ್ಕೆ ಆಹ್ವಾನಿಸಿದೆ. ನೇರ ಸಂದರ್ಶನವನ್ನು ಇದೇ ಜುಲೈ(July) 13 ರಿಂದ 24 ರವರೆಗೆ ಆಯೋಜಿಸಲಾಗಿದೆ. ಪೋಸ್ಟ್ಗಳ ವಿವರ ಕೆಳಗಿನಂತಿದೆ.

ಹುದ್ದೆಗಳ ವಿವರ
ಪ್ರೊಫೆಸರ್ : 10
ಅಸಿಸ್ಟಂಟ್ ಪ್ರೊಫೆಸರ್ : 43
ಅಸೋಸಿಯೇಟ್ ಪ್ರೊಫೆಸರ್ : 25
ಸೀನಿಯರ್ ರೆಸಿಡೆಂಟ್ : 12
ಸ್ಪೆಷಲಿಸ್ಟ್ : 01
ಸೀನಿಯರ್ ರೆಸಿಡೆಂಟ್ / ಟ್ಯೂಟರ್: 01
ಅಸಿಸ್ಟಂಟ್ ಪ್ರೊಫೆಸರ್ ಅಂಡ್ ಸ್ಟ್ಯಾಟಿಸ್ಟೀಷಿಯನ್ : 01
ಸೂಪರ್ ಸ್ಪೆಷಲಿಸ್ಟ್ (ಎಂಟ್ರಿ ಲೆವೆಲ್) : 01
ಅಪ್ಲಿಕೇಶನ್ ಶುಲ್ಕ ವಿವರ
ಸಾಮಾನ್ಯ / ಇತರೆ ಹಿಂದುಳಿದ ವರ್ಗಗಳ(OBC) ಭರ್ತಿಗಳಿಗೆ ರೂ.500. ಪಾವತಿ ಮಾಡಬೇಕಾಗಿದೆ
ಮಾಜಿ ಸೈನಿಕ, ಪರಿಶಿಷ್ಟ ಜಾತಿ(SC) ಮತ್ತು ಪರಿಶಿಷ್ಟ ಪಂಗಡ(ST) ಅಭ್ಯರ್ಥಿಗಳಿಗೆ, ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಆನ್ಲೈನ್ (Online)ಮೂಲಕ ಅರ್ಜಿ ಶುಲ್ಕವನ್ನು ಪಾವತಿ ಮಾಡಬಹುದು.

ವಯಸ್ಸಿನ ಅರ್ಹತೆಗಳು
ಸೂಪರ್ ಸ್ಪೆಷಲಿಸ್ಟ್ ಮತ್ತು ಫ್ಯಾಕಲ್ಟಿ ಹುದ್ದೆಗಳಿಗೆ ಗರಿಷ್ಠ 67 ವರ್ಷ.
45 ವರ್ಷ ಗರಿಷ್ಠ ವಯಸ್ಸಿನ ಅರ್ಹತೆ ಸೀನಿಯರ್ ರೆಸಿಡೆಂಟ್ ಹುದ್ದೆಗಳಿಗೆ ಇರಬೇಕು
ಎಸ್ಸಿ / ಎಸ್ಟಿ’ಗೆ 5 ವರ್ಷ ಮತ್ತು ಒಬಿಸಿ’ಗೆ 3 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ನೇರ ಸಂದರ್ಶನ ದಿನಾಂಕ : ಜುಲೈ 13 ರಿಂದ 24, 2023 ವರೆಗೆ.
ವಿದ್ಯಾರ್ಹತೆ ದಾಖಲೆಗಳು : ಹುದ್ದೆಗೆ ಸಂಬಂಧಿಸಿದ ವಿಷಯಗಳಲ್ಲಿ ಪದವಿ / ಸ್ನಾತಕೋತ್ತರ ಪದವಿ ಉತ್ತೀರ್ಣ ಆಗಿರಬೇಕು ಜತೆಗೆ, ನಿಗಧಿತ ಕಾರ್ಯಾನುಭವವನ್ನು ಹೊಂದಿರಬೇಕು.ಅಧಿಸೂಚನೆಯಲ್ಲಿ ಈ ಕುರಿತು ಹೆಚ್ಚನ ವಿವರಗಳನ್ನು ತಿಳಿಯಬಹುದು.

ಕಾರ್ಮಿಕರ ರಾಜ್ಯ ವಿಮಾ ನಿಗಮದ ಅಧಿಕೃತ ವೆಬ್ಸೈಟ್ ವಿಳಾಸ : https://www.esic.gov.in/
ಅರ್ಜಿ ಸಲ್ಲಿಸಲು ಬೇಕಾದ ದಾಖಲೆ / ಮಾಹಿತಿಗಳು
ವಿದ್ಯಾರ್ಹತೆ ದಾಖಲೆ
ಆಧಾರ್ ಕಾರ್ಡ್
ಕಾರ್ಯಾನುಭವ ದಾಖಲೆ
ಇ -ಮೇಲ್ ವಿಳಾಸ
ಜನ್ಮ ದಿನಾಂಕ ಪ್ರಮಾಣ ಪತ್ರ
ಮೊಬೈಲ್ ನಂಬರ್
ಇಎಸ್ಐಸಿ ಉದ್ಯೋಗ ಸ್ಥಳ : ತೆಲಂಗಾಣ ಘಟಕ
ರಶ್ಮಿತಾ ಅನೀಶ್