Visit Channel

‘ನಿಮ್ಮ ರಾಜಕೀಯಕ್ಕೆ ನೀವು ಕೈತಟ್ಟಿದ್ದೀರಿ’ : ಇಬ್ರಾಹಿಂ ಹೇಳಿಕೆಗೆ ಜೋಗತಿ ಮಂಜಮ್ಮ ಬೇಸರ!

CM Ibrahim

‘ರಾಜ್ಯದಲ್ಲಿರುವುದು ಮಂಗಳಮುಖಿ ಸರ್ಕಾರ’ ಎಂದು ಹೇಳಿಕೆ ನೀಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ(JDS President) ಸಿ.ಎಂ.ಇಬ್ರಾಹಿಂ(CM Ibrahim) ಬಗ್ಗೆ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗುತಿ(Manjamma Joguthi) ಬೇಸರ ವ್ಯಕ್ತಪಡಿಸಿದ್ದಾರೆ.

JDS

ಈ ಕುರಿತು ಟ್ವೀಟ್(Tweet) ಮಾಡಿರುವ ಅವರು, “ನನ್ನ ತಂದೆ ಕೂಡ ಹೀಗೆ ಹೇಳಿದ್ದರು – ಗಂಡಾಗಿದ್ದರೆ ಕೆಲಸ ಕೊಡಿಸುತ್ತಿದ್ದೆ, ಹೆಣ್ಣಾಗಿದ್ದರೆ ಮದುವೆ ಮಾಡಿಸುತ್ತಿದ್ದೆ, ಕುರುಡ ಅಥವಾ ಕುಂಟನಾಗಿದ್ದರೆ ಮನೆಯಲ್ಲಿ ಇಟ್ಟುಕೊಂಡು ಊಟ ಹಾಕುತ್ತಿದ್ದೆ. ಆದರೆ ನಾನು ಮಂಗಳಮುಖಿ ಕಲಾವಿದೆಯಾದೆ. ಕನ್ನಡತಿಯಾದೆ, ಸಮಾಜ ಗೌರವಿಸುತ್ತಿದೆ. ನೀವು ಹೀಗೆ ಅವಮಾನ ಮಾಡಬಾರದಿತ್ತು ಸರ್, ನಿಮ್ಮ ರಾಜಕೀಯಕ್ಕೆ ನೀವು ಕೈತಟ್ಟಿದ್ದೀರಿ ಇವತ್ತು!” ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಬಿಜೆಪಿ ಸರ್ಕಾರವನ್ನು ಟೀಕಿಸುವ ಭರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ರಾಜ್ಯದಲ್ಲಿರುವುದು ಮಂಗಳಮುಖಿ ಸರ್ಕಾರ. ಇವರ ಜೊತೆ ಜಗಳ ಆಡಲು ಸಾಧ್ಯವಿಲ್ಲ. ಗಂಡಾಗಿದ್ದರೆ ಬಡಿದಾಡಲು ಗಂಡಸರನ್ನು ಕಳುಹಿಸುತ್ತಿದ್ದೆ, ಹೆಣ್ಣಾಗಿದ್ದರೆ ಬಡಿದಾಡಲು ಹೆಂಗಸರನ್ನು ಕಳುಹಿಸುತ್ತಿದ್ದೆ. ಆದರೆ ಈ ಸರ್ಕಾರ ಗಂಡೂ ಅಲ್ಲ, ಹೆಣ್ಣು ಅಲ್ಲ, ಏನೇ ಕೇಳಿದರು ಕೈ ತಟ್ಟುತ್ತಾರೆ. ಆಗ ನಾವು ಹಿಂದೆ ಸರಿಯಬೇಕಾಗುತ್ತದೆ.

Jogathi

ಎಷ್ಟೇ ಬೈದರೂ, ಟೀಕಿಸಿದರು ಹ್ಹ..ಹ್ಹ..ಹ್ಹ.. ಅಂತಾ ನಗುತ್ತಾರೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದರು. ಈ ವೇಳೆ ಮಂಗಳಮುಖಿಯರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದರು.

Latest News

Lal singh chadda
ಮನರಂಜನೆ

“ಲಾಲ್ ಸಿಂಗ್ ಚಡ್ಡಾ” ಚಿತ್ರ ಭಾರತೀಯ ಸೇನೆ ಮತ್ತು ಸಿಖ್ಖರನ್ನು ಅವಮಾನಿಸಿದೆ! : ಕ್ರಿಕೆಟಿಗ ಮಾಂಟಿ ಪನೇಸರ್

ಲಾಲ್ ಸಿಂಗ್ ಚಡ್ಡಾ  ಚಿತ್ರ ನಿಷೇಧಕ್ಕೆ ಮಾಂಟಿ ಪನೇಸರ್ ಕರೆ.  ಕ್ರಿಕೆಟಿಗ ಮಾಂಟಿ ಪನೇಸರ್ ಅವರು ಟ್ವಿಟರ್ನಲ್ಲಿ “ಲಾಲ್ ಸಿಂಗ್ ಚಡ್ಡಾ ಚಿತ್ರ ನಾಚಿಕೆಗೇಡಿನದು.

Medical Test
ಮಾಹಿತಿ

ಮದುವೆಗೂ ಮುನ್ನ ಈ ವೈದ್ಯಕೀಯ ಪರೀಕ್ಷೆಗಳನ್ನು ತಪ್ಪದೇ ಮಾಡಿಸಿಕೊಳ್ಳಿ ; ಅನುವಂಶಿಕ ಕಾಯಿಲೆಗಳನ್ನು ಪತ್ತೆ ಮಾಡಿ

ಕೆಲ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವುದರಿಂದ ಆನುವಂಶಿಕ ಕಾಯಿಲೆಗಳು ಪತ್ತೆ ಮಾಡಿ, ಅವುಗಳಿಗೆ ಚಿಕಿತ್ಸೆಯನ್ನು ಕೂಡ ಪಡೆದುಕೊಳ್ಳಬಹುದು.

Siddaramaiah
ರಾಜಕೀಯ

ಲೋಕಾಯುಕ್ತವೇ ಇದ್ದಿದ್ದರೆ ಮಜಾವಾದಿ ಸಿದ್ದರಾಮಯ್ಯ ಜೈಲೂಟ ತಿನ್ನುತ್ತಿದ್ದರು : ಬಿಜೆಪಿ

ಲೋಕಾಯುಕ್ತವೇ ಇದ್ದಿದ್ದರೆ ಮಜಾವಾದಿ ಸಿದ್ದರಾಮಯ್ಯ(Siddaramaiah) ಜೈಲೂಟ ತಿನ್ನುತ್ತಿದ್ದರು ಎಂದು ರಾಜ್ಯ ಬಿಜೆಪಿ(State BJP) ವ್ಯಂಗ್ಯವಾಡಿದೆ.

Gaalipata 2
ಮನರಂಜನೆ

ತೆರೆಯ ಮೇಲೆ ಹಾರಿದ ‘ಗಾಳಿಪಟ-2’; ಗಣಿ-ಭಟ್ರು ಕಾಂಬಿನೇಷನ್‍ಗೆ ಶಿಳ್ಳೆ-ಚಪ್ಪಾಳೆ

ಯೋಗರಾಜ್ ಭಟ್ ಮತ್ತು ‘ಗೋಲ್ಡನ್ ಸ್ಟಾರ್’ ಗಣೇಶ್ ಅವರ ಕಾಂಬಿನೇಷನ್ ಹೇಗೆ ಮೂಡಿಬಂದಿದೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಕುತೂಹಲದಿಂದ ಚಿತ್ರಮಂದಿರದತ್ತ ಹೆಜ್ಜೆ ಹಾಕಿದ್ದಾರೆ.