ಹೊಸದಿಲ್ಲಿ, ಆ. 07: ಜಾನ್ಸನ್ ಅಂಡ್ ಜಾನ್ಸನ್ ಅಭಿವೃದ್ಧಿ ಪಡಿಸಿರುವ ಏಕ ಡೋಸ್ ಕೋವಿಡ್-19 ಲಸಿಕೆ ಬಳಕೆಗೆ ಭಾರತ ಅನುಮತಿ ನೀಡಿದೆ.
ಭಾರತದಲ್ಲಿ ಈ ಲಸಿಕೆ ಬಳಕೆಗೆ ಅನುಮತಿ ನೀಡುವಂತೆ ಜಾನ್ಸನ್ ಅಂಡ್ ಜಾನ್ಸನ್ ಕಂಪೆನಿ ಆಗಸ್ಟ್ 5ರಂದು ಮನವಿ ಸಲ್ಲಿಸಿತ್ತು. ಹೀಗಾಗಿ ಭಾರತದಲ್ಲಿ ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವಿಯ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಬಯಾಲಾಜಿಕಲ್ ಇ ಲಿಮಿಟೆಡ್ ಸಹಯೋಗದೊಂದಿಗೆ ಭಾರತದಲ್ಲಿ ಮತ್ತು ಇತರ ದೇಶಗಳಲ್ಲಿ ಏಕ ಡೋಸ್ನ ಕೋವಿಡ್ ಲಸಿಕೆ ಪೂರೈಕೆ ಮಾಡುವುದು ಮಹತ್ವದ ಮೈಲಿಗಲ್ಲಾಗಿದೆ ಎಂದು ಕಂಪೆನಿಯ ವಕ್ತಾರರು ಹೇಳಿದ್ದರು.
ಭಾರತದಲ್ಲಿ ಏಕ ಡೋಸ್ ಕೋವಿಡ್ ಲಸಿಕೆ ನೀಡಲು ಬದ್ಧರಾಗಿದ್ದೇವೆ ಎಂದೂ ಸಹ ತಿಳಿಸಿದ್ದರು.