ಸಂಧಿವಾತದ(Arthritis) ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರನ್ನು ಕಾಡೋ ಸಮಸ್ಯೆ. ಈ ಸಂಧಿವಾತ ಸಮಸ್ಯೆಯಿಂದ ಬಳಲುವವರಿಗೆ ಚಳಿಗಾಲ (joint pain in winter) ಅತ್ಯಂತ ನೋವು ಕೊಡುವ ಕಾಲವಾಗಿದೆ.
ಚಳಿಗಾಲದಲ್ಲಿ ನೋವು ಹೆಚ್ಚು ಕಾಣಿಸಿಕೊಳ್ಳುತ್ತದೆ, ರೋಗ ಉಲ್ಬಣಿಸುತ್ತದೆ. ಸಂಧಿವಾತ ಕಾಲಿನ ಮಂಡಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಸಾಮಾನ್ಯವಾಗಿ 40 ವರ್ಷದ ನಂತರ ಕಾಣಿಸಿಕೊಳ್ಳುತ್ತದೆ. ಆದ್ರೆ ಅಧುನಿಕ ಜೀವನ ಶೈಲಿಯಿಂದಾಗಿ ಸಂಧಿವಾತ ಎಲ್ಲಾ ವಯೋಮಾನದವರನ್ನು ಕಾಡೋ ಸಮಸ್ಯೆಯಾಗಿದೆ. ಅದ್ರಲ್ಲೂ ಯುವಜನತೆಯಲ್ಲಿ ಈ ಸಮಸ್ಯೆ ಹೆಚ್ಚುತ್ತಿದೆ.

ಸಂಧಿವಾತ ಎಂದರೇನು?
ಸಂಧಿವಾತ ಮೂಳೆ ಸಂಬಂಧಿಯಾದ ಕಾಯಿಲೆಯಾಗಿದೆ. ಕೀಲುಗಳಲ್ಲಿ (joint pain in winter)ಉಂಟಾಗುವ ಊತ, ಉರಿಯೂತದಂತಹ ಸ್ಥಿತಿಗೆ ಸಂಧಿವಾತ ಎನ್ನುತ್ತಾರೆ. ಕೀಲು ನೋವು ಮತ್ತು ಸ್ನಾಯು ಬಿಗಿತ ಪ್ರಾಥಮಿಕ ಸಂಧಿವಾತದ ಲಕ್ಷಣಗಳು.
ಸಂಧಿವಾತ ಬರಲು ಕಾರಣಗಳೇನು?
ದೀರ್ಘಾವಧಿಯವರೆಗೆ ಒಂದೇ ಕಡೆ ಕೂತು ಕೆಲಸ ಮಾಡುವುದು,ವ್ಯಾಯಾಮದ ಕೊರತೆ ಹಾಗೂ ಅನಾರೋಗ್ಯಕರ ಜೀವನಶೈಲಿಯೇ ಕೀಲು ನೋವಿನ ಸಮಸ್ಯೆಗಳಿಗೆ ಕಾರಣ ಎಂದು ಅಧ್ಯಯನಗಳು ಹೇಳುತ್ತವೆ.
ಸಂಧಿವಾತದ ಲಕ್ಷಣಗಳು
ಮೊಣಕೈ, ಮೊಣಕಾಲುಗಳಲ್ಲಿ ನೋವುಂಟಾಗುವುದು
ನೋವಿನ ಜೊತೆ ಉರಿ ಸಹ ಉಂಟಾಗುತ್ತದೆ
ಕುಳಿತುಕೊಳ್ಳಲು ಮತ್ತು ಏಳಲು ಕಷ್ಟವಾಗುತ್ತದೆ
ನಡೆಯುವಾಗ ಮತ್ತು ನಿಲ್ಲುವಾಗ ಸಹ ನೋವಾಗುತ್ತದೆ
ನಿಶ್ಯಕ್ತಿ, ಮಣಿಕಟ್ಟುಗಳು ಊದಿಕೊಳ್ಳುತ್ತದೆ.

ಸಂಧಿವಾತದಿಂದ ಬಳಲುತ್ತಿರುವವರು ಚಳಿಗಾಲದಲ್ಲಿ ನೋವನ್ನು ನಿಯಂತ್ರಿಸುವುದು ಹೆಚ್ಚು ಸವಾಲಿನ ಕೆಲಸ. ಚಳಿಗಾಲದಲ್ಲಿ ಕೀಳು ನೋವನ್ನು ಕಡಿಮೆ ಮಾಡಲು ಕೆಲವು ಸರಳ ಪರಿಹಾರಗಳು ಇಲ್ಲಿವೆ.
ಬೆಚ್ಚಗಾಗಿರಿಸುವುದು
ಶೀತ ಹವಮಾನಗಿಂತ ಬೆಚ್ಚಗಿನ ವಾತಾವರಣದಲ್ಲಿ ಇರುವುದರಿಂದ ನೋವನ್ನು ತಡೆಗಟ್ಟಬಹುದು ಇದು ಅತ್ಯುತ್ತಮ ತಂತ್ರವಾಗಿದೆ. ಮೊಣಕಾಲು ಅಥವಾ ಸೊಂಟಗಳಲ್ಲಿ ಸಂಧಿವಾತವನ್ನು ಹೊಂದಿದ್ದರೆ ಉದ್ದವಾದ ಒಳ ಉಡುಪನ್ನು ಧರಿಸುವುದು ಉತ್ತಮ.
ನಿಮ್ಮ ಕೈಗಳನ್ನು ಮತ್ತು ಪಾದವನ್ನು ಬೆಚ್ಚಗಾಗಿರಿಸಲು ಸಾಕ್ಸ್ ಮತ್ತು ಗ್ಲೌಸ್ ಧರಿಸಿ. ಚಳಿಗಾಲದಲ್ಲಿ ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದರಿಂದ ಕೀಲು ನೋವನ್ನು ಕಮ್ಮಿ ಮಾಡಬಹುದು.
ಇದನ್ನೂ ಓದಿ: https://vijayatimes.com/iam-hindu-but-against-hinduism/
ಸಕ್ರಿಯವಾಗಿರಿ
ವ್ಯಾಯಾಮ ಮಾಡುವುದರಿಂದ ಸಂಧಿವಾತದ ಅಸ್ವಸ್ಥತೆಯನ್ನು ತಡೆಗಟ್ಟಬಹುದು. ಸ್ನಾಯುವಿನ ಬಲ ಹೆಚ್ಚಿಸಲು ನಿಯಮಿತ ವ್ಯಾಯಮ ಸಹಾಯ ಮಾಡುತ್ತದೆ. ಏರೋಬಿಕ್ಸ್,
ಯೋಗ ದಂತಹ ಒಳಾಂಗಣ ವ್ಯಾಯಾಮಗಳನ್ನು ಮಾಡಿ. ನೀವು ಹಿಂದೆದೂ ವ್ಯಾಯಾಮ ಮಾಡದಿದ್ದರೆ ನಿಧಾನವಾಗಿ ವ್ಯಾಯಮವನ್ನು ಪ್ರಾರಂಭಿಸಬಹುದು.
ದಿನಕ್ಕೆ ಕನಿಷ್ಟ 2 ರಿಂದ 10 ನಿಮಿಷಗಳ ಕಾಲ ವ್ಯಾಯಾಮ ಮಾಡುವ ಮೂಲಕ ಪ್ರಾರಂಭಿಸಿ.
ಕಾಂಪ್ರೆಷನ್ ಉಡುಪು ಧರಿಸಿ
ಆರ್ಮ್ ಸ್ಲೀವ್, ಕೈಗವಸುಗಳು ,ಸಾಕ್ಸ್ಗಳಂತಹ ಉಡುಪುಗಳು ಕೀಲು ನೋವನ್ನು ನಿವಾರಿಸಲು ಸಹಾಯ ಮಾಡುತ್ತವೆ.
ಈ ವಸ್ತುಗಳು ರಕ್ತ ಪರಿಚಲನೆಯನ್ನು ಹೆಚ್ಚಿಸಲು ಈ ವಸ್ತುಗಳು ಸಹಾಯ ಮಾಡುತ್ತದೆ.
ಇದು ಸಂಧಿವಾತದ ನೋವನ್ನು ನಿವಾರಿಸುತ್ತದೆ. ಚಳಿಗಾಲದಲ್ಲಿ ಇಂತಹ ಉಡುಪುಗಳು ಶಾಖವನ್ನು ಹಿಡಿದಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.
ಆರೋಗ್ಯಕರ ತೂಕವನ್ನು ಇಟ್ಟುಕೊಳ್ಳಿ
ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ ಹಾಗೂ ವಿಟಮಿನ್ ಡಿ ಒಮೆಗಾ-3 ಕೊಬ್ಬಿನಾಂಶ ಸಂಧಿವಾತ ನೋವನ್ನು ಕಡಿಮೆ ಮಾಡುತ್ತದೆ ಸೂರ್ಯನ ಬೆಳಕಿನಿಂದ ವಿಟಮಿನ್ ಡಿಯನ್ನು ಒದಗಿಸುತ್ತದೆ.
ನಿಮ್ಮ ಕೀಲುಗಳ ಮೇಲೆ ಹೆಚ್ಚು ಒತ್ತಡ ಹಾಕಬೇಡಿ.
- ರಶ್ಮಿತಾ ಅನೀಶ್