ಬೆಳಗಾವಿ ಡಿ 13 : ಭಾರತವನ್ನು ಪಾಕಿಸ್ತಾನ ಮಾಡಲು ಹೊರಟ್ಟಿದ್ದೀರಾ ? ಬಲವಂತದ ಮತಾಂತರದಿಂದಾಗಿ ಹಿಂದೂಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯೆಕ್ತಪಡಿಸಿದರು.
ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ ಅವರು ಆಸೆ, ಆಮಿಷವೊಡ್ಡಿ ಮಹಿಳೆಯರನ್ನು ಮತಾಂತರ ಮಾಡಲಾಗುತ್ತಿದೆ. ಮಹಿಳೆಯರನ್ನು ವಿದೇಶಕ್ಕೆ ಮಾರಾಟ ಮಾಡುವ ಉದಾಹರಣೆ ಬೇಕಾದಷ್ಟಿವೆ ಎಂದು ಸುವರ್ಣಸೌಧದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಕಾಂಗ್ರೆಸ್ ಹಿಂದೂಗಳಿಗೆ ಅನ್ಯಾಯ ಮಾಡಿದೆ. ಮುಸ್ಲಿಮರನ್ನು ತೃಪ್ತಿಪಡಿಸಲು ಹೋಗಿ ನಿರ್ನಾಮವಾಗ್ತಿದೆ. ನಾವು ಹಿಂದೂಗಳ ಸಂಪೂರ್ಣ ರಕ್ಷಣೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಮತಾಂತರ ಮಾಡಲು ಬಿಡಲ್ಲ. ಶೇ 24ರಷ್ಟಿದ್ದ ಪಾಕ್ ಹಿಂದೂಗಳು ಈಗ ಶೇ. 3ರಷ್ಟು ಆಗಿದ್ದಾರೆ
ಕೊಲೆ, ಸುಲಿಗೆ, ಬಲವಂತದ ಮತಾಂತರ ಮಾಡಿದ್ದಾರೆ. ಹೀಗಾಗಿ, ಹಿಂದೂಗಳ ಸಂಖ್ಯೆ ಶೇ. 3ರಷ್ಟಾಗಿದೆ. ಭಾರತವನ್ನು ಪಾಕಿಸ್ತಾನ ಮಾಡಲು ಹೊರಟಿದ್ದೀರಾ? ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿದರು.