Bengaluru: ಬಿಜೆಪಿಯಿಂದ (BJP) ಹೊರಬಂದ ಕೆಎಸ್ ಈಶ್ವರಪ್ಪ (KS Eshwarappa) ಅವರು ಬಿಜೆಪಿ ಬಂಡಾಯ ಶಾಸಕ ಯತ್ನಾಳ್ (MLA Yatnal) ಜತೆ ಸೇರಿ ಹೊಸ ಪಕ್ಷವನ್ನು ಆರಂಭಿಸುತ್ತಾರೆ ಎಂಬ ಸುದ್ದಿ ಆಗೊಮ್ಮೆ ಈಗೊಮ್ಮೆ ಕೇಳಿ ಬರುತ್ತಿತ್ತು. ಇದಕ್ಕೆ ಸರಿಯಾಗಿ ಭಾನುವಾರದಂದು ವಿಜಯಪುರದಲ್ಲಿ (Vijayapura) ನಡೆದ ಈಶ್ವರಪ್ಪ (Eshwarappa) ಅವರ ಕಾರ್ಯಕ್ರಮಗಳು ಇಂಬು ನೀಡುತ್ತಿವೆ.ಹಿಂದುಳಿದ ಹಾಗೂ ಶೋಷಿತ ಜನರ ಹಿತದೃಷ್ಟಿಯಿಂದ ಮತ್ತೆ ರಾಯಣ್ಣ, ಚನ್ನಮ್ಮ (Rayanna, Channamma) ಬ್ರಿಗೇಡ್ (RCB) ಶೀಘ್ರದಲ್ಲೇ ಅಸ್ತಿತ್ವಕ್ಕೆ ತರುವ ಸುಳಿವು ಮಾಜಿ ಡಿಸಿಎಂ (DCM) ಕೆ.ಎಸ್.ಈಶ್ವರಪ್ಪ ನೀಡಿದ್ದಾರೆ.
ಇನ್ನು ಬಿಜೆಪಿ (BJP) ಪಕ್ಷದ ನಡೆಯಿಂದ ಬೇಸರಗೊಂಡ ಬಹುತೇಕರು ಆರ್ಸಿಬಿ (RCB) ಬ್ರಿಗೇಡ್ ಮತ್ತೆ ಹುಟ್ಟು ಹಾಕಿ ಎಂದು ಒತ್ತಾಯಿಸಿದ್ದಾರೆ. ಇನ್ನೊಂದೆಡೆ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ (Sri Basavajaya Mrityunjaya) ಸ್ವಾಮೀಜಿ ಅವರು, ಈಶ್ವರಪ್ಪ ಹಾಗೂ ಯತ್ನಾಳ ಒಟ್ಟಾಗಿ ಆರ್ಸಿಬಿ ಮಾಡುವಂತೆ ಸಲಹೆ ನೀಡಿದ್ದಾರೆ. ಹೀಗಾಗಿ ಬಾಗಲಕೋಟೆಯಲ್ಲಿ (Bagalkot) ಶೀಘ್ರದಲ್ಲಿ ನಡೆಯಲಿರುವ ಸಭೆಯಲ್ಲಿ ಸಮಾಲೋಚಿಸಿ, ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಈ ಮೂಲಕ ಎಸ್.ಈಶ್ವರಪ್ಪ ಅವರು, ಮತ್ತೆ ಆರ್ಸಿಬಿ ಬ್ರಿಗೇಡ್ಗೆ (RCB Brigade) ಪರೋಕ್ಷವಾಗಿ ಅಸ್ತು ಎಂದಿದ್ದಾರೆ. ಈ ಹಿಂದೆ ರಾಯಣ್ಣ ಬ್ರಿಗೇಡ್ ಮಾಡಿದಾಗ, ಬಿ.ಎಸ್.ಯಡಿಯೂರಪ್ಪ (BS Yeddyurappa) ನೀಡಿದ ದೂರಿನನ್ವಯ ಅಮಿತ್ ಶಾ ಅವರು ಬ್ರಿಗೇಡ್ ಚಟುವಟಿಕೆಗೆ ಬ್ರೇಕ್ ಹಾಕಿಸಿದ್ದರು. ಈಗ ಮತ್ತೆ ಪಕ್ಷದಿಂದ ಹೊರಗುಳಿದಿರುವ ಈಶ್ವರಪ್ಪ ಈಗ ರಾಯಣ್ಣ, ಚನ್ನಮ್ಮ (Rayanna, Channamma) ಬ್ರಿಗೇಡ್ ಮಾಡುವ ಮೂಲಕ, ಬಿಜೆಪಿ ಹೈಕಮಾಂಡ್ಗೆ ಚುರುಕು ಮುಟ್ಟಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.