ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದವರಿಗೆ(Congress Party) ತಾವೇನು ಮಾಡುತ್ತಿದ್ದೇವೆ ಎಂಬ ಅರಿವಿಲ್ಲ! ಕಾಂಗ್ರೆಸ್ ಬಸ್ಗೆ ಎರಡು ಸ್ಟೇರಿಂಗ್, “ಪ್ರಸ್ತುತ ಕಾಂಗ್ರೆಸ್ ಪಕ್ಷ ಈಗ ಡಂಬಲ್ ಡೋರ್ ಬಸ್‍ನಲ್ಲಿ ಪ್ರಯಾಣಿಸುತ್ತಿದೆ. ಈ ಬಸ್‍ನಲ್ಲಿರುವ ಅವರ ಪಕ್ಷದವರ ಪೈಕಿ ಯಾರನ್ನು ಪ್ರಥಮವಾಗಿ ಕೆಳಗಿಳಿಸುತ್ತಾರೋ ತಿಳಿಯದು. ಈ ಬಸ್ಸಿಗೆ ಎರಡು ಸ್ಟೇರಿಂಗ್ ಇದ್ದು, ಒಂದೊಡೆ ಒಬ್ಬರು ತಿರುಗಿಸಿದರೆ, ಮತ್ತೊಂದೆಡೆ ಮತ್ತೊಬ್ಬರು ತಿರುಗಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ(Bengaluru) ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು, ನಾಯಕತ್ವ ಬದಲಾವಣೆ ಕುರಿತು ಸುಳ್ಳು ಸುದ್ದಿ ಹರಡುವ ಮೂಲಕ ತಾವು ಸುದ್ದಿಯಲ್ಲಿರುವ ಪ್ರಯತ್ನ ಮಾಡುತ್ತಿದ್ದಾರೆ. ನಾಯಕತ್ವ ಬದಲಾವಣೆ ಕುರಿತು ಅನವಶ್ಯಕವಾಗಿ ಸುಳ್ಳು ವದಂತಿಗಳನ್ನು ಹೇಳುವ ಮುಖೇನ ರಾಜಕೀಯ ನಿರುದ್ಯೋಗಿಗಳಾಗಿರುವ ಕಾಂಗ್ರೆಸ್ ನಾಯಕರು, ತಾವು ಸುದ್ದಿಯಲ್ಲಿರಲು ಪ್ರಯತ್ನ ಮಾಡುತ್ತಲೇ ಇದ್ದಾರೆ.
ರಾಜಕೀಯವಾಗಿ ಕ್ರೀಯಾಶೀಲರಾಗಿರಲು ಕಾಂಗ್ರೆಸ್ ನಾಯಕರು ಹೆಣಗಾಡುತ್ತಿದ್ದಾರೆ, ಅವರ ಈ ಅಜ್ಞಾನಕ್ಕೆ ನಗಬೇಕು ಅಷ್ಟೇ ಎಂದು ಲೇವಡಿ ಮಾಡಿದರು. “ನಾಯಕತ್ವ ಬದಲಾವಣೆ ಕೇವಲ ಊಹಾಪೋಹ!, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರ ಸ್ಥಾನ ಬದಲಾವಣೆ ಕುರಿತು ಮಾಜಿ ಶಾಸಕರು ಹೇಳಿಕೆ ನೀಡಿದ್ದರೇ, ಅದಕ್ಕೆ ಅವರೇ ನೇರ ಹೊಣೆ ಹೊರೆತು ಪಕ್ಷವಲ್ಲ. ಈ ವಿಚಾರದಲ್ಲಿ ಪಕ್ಷವನ್ನು ಹೊಣೆಯಾಗಿಸಲು ಸಾಧ್ಯವಿಲ್ಲ.

ಮುಂದಿನ ವಿಧಾನಸಭಾ ಚುನಾವಣೆಯನ್ನು ನಾವು ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ಎದುರಿಸುತ್ತೇವೆ ಎಂದು ಈಗಾಗಲೇ ಬಿಜೆಪಿ ರಾಷ್ಟ್ರಧ್ಯಕ್ಷ(BJP President) ಜೆ.ಪಿ ನಡ್ಡಾ(JP Nadda), ಪ್ರಧಾನಿ ನರೇಂದ್ರ ಮೋದಿ(Narendra Modi), ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅವರು ಹೇಳಿದ್ದಾರೆ. ಹಾಗಾಗಿ ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಕಾಂಗ್ರೆಸ್ ಬಸ್‍ಗೆ 2 ಸ್ಟೇರಿಂಗ್, ಪ್ರಸ್ತುತ ಕಾಂಗ್ರೆಸ್ ಪಕ್ಷ ಈಗ ಡಬಲ್ ಡೋರ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದೆ.
ಈ ಬಸ್‍ನಿಂದ ಯಾರನ್ನು ಮೊದಲು ಇಳಿಸಲಿದೆಯೋ ತಿಳಿಯದು. ಈ ಬಸ್ಸಿಗೆ ಎರಡು ಸ್ಟೇರಿಂಗ್ ಇದ್ದು, ಒಬ್ಬರು ಒಂದೆಡೆ ತಿರುಗಿಸಿದರೆ, ಮತ್ತೊಬ್ಬರು ಮತ್ತೊಂದೆಡೆ ತಿರುಗಿಸುತ್ತಿದ್ದಾರೆ. ಯಾವಾಗ ಯಾವ ಕಡೆಗೆ ಹೋಗುವುದೋ ಅಸ್ಪಷ್ಟ! ಎಂದು ಹೇಳುವ ಮೂಲಕ ಆರೋಗ್ಯ ಸಚಿವ(Health Minister) ಕೆ.ಸುಧಾಕರ್(Dr K.Sudhakar) ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.