Chandigarh: ಕಬಡ್ಡಿ ಪಂದ್ಯದ ವೇಳೆ ನೀಡಿದ ತೀರ್ಪಿನ್ನು ಪ್ರಶ್ನಿಸಿದಕ್ಕಾಗಿ ತಮಿಳುನಾಡಿನ ಆಟಗಾರ್ತಿಯರ ಮೇಲೆ ಪಂಜಾಬ್ನಲ್ಲಿ (Punjab) ಹ* ನಡೆದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ (Social media) ಭಾರೀ ವೈರಲ್ ಆಗಿದೆ.
ಪಂಜಾಬಿನ ಭಟಿಂಡಾದಲ್ಲಿ ನಡೆದ ಅಂತರ ವಿಶ್ವವಿದ್ಯಾಲಯ (Inter University) ಕಬಡ್ಡಿ ಪಂದ್ಯದ ವೇಳೆ ಈ ಹ* ನಡೆದಿದ್ದು, ಪಂದ್ಯದ ರೆಫ್ರೆ ನಿರ್ಧಾರದಿಂದ ಈ ಜಗಳ ಆರಭವಾಯಿತು ಎಂದು ವರದಿಯಾಗಿದೆ. ವೈರಲ್ ಆಗಿರುವ ವೀಡಿಯೊದಲ್ಲಿ ತಮಿಳುನಾಡಿನ ಆಟಗಾರ್ತಿಯರು ರೆಫ್ರಿ ಹಾಗೂ ಆಯೋಜಕರೊಂದಿಗೆ ವಾಗ್ವಾದ ನಡೆಸುತ್ತಿರುವುದನ್ನು ಕಾಣಬಹುದು. ಅವರು ಅಧಿಕಾರಿಗಳೋ ಅಥವಾ ಪ್ರೇಕ್ಷಕರೋ ಎಂಬುದು ವೀಡಿಯೋದಿಂದ ಸ್ಪಷ್ಟವಾಗಿಲ್ಲ. ಘರ್ಷಣೆಯ ವೇಳೆ ಪರಸ್ಪರ ಚಯರ್ಗಳನ್ನು ಎಸೆದುಕೊಂಡು ಬಡಿದಾಡಿಕೊಂಡಿದ್ಧಾರೆ.

ಈ ಬಗ್ಗೆ ಮಾಹಿತಿ ನೀಡಿರುವ ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ (Udayanidhi Stalin) ಅವರು ತಮಿಳುನಾಡಿನ ಆಟಗಾರ್ತಿಯರು ಸುರಕ್ಷಿತವಾಗಿದ್ದಾರೆ. ಆಟಗಾರ್ತಿಯರಿಗೆ ಯಾವುದೇ ದೊಡ್ಡ ಗಾಯಗಳಾಗಿಲ್ಲ. ಪ್ರಥಮ ಚಿಕಿತ್ಸೆ ನೀಡಲಾಗಿದೆ. ಶೀಘ್ರದಲ್ಲೇ ಅವರು ಚೆನ್ನೈಗೆ ಬರಲಿದ್ದಾರೆ. ಆದರೆ ಆಟಗಾರ್ತಿಯರ ಮೇಲೆ ಹಲ್ಲೆ ನಡೆಸಿದವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು. ಎಂದು ತಿಳಿಸಿದ್ದಾರೆ.
ಇನ್ನು ಹ* ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವ್ಯಕ್ತಿಯೊಬ್ಬರು, ಪಂಜಾಬ್ನಲ್ಲಿ ಕಬಡ್ಡಿ ಆಡಲು ಹೋಗಿದ್ದ ತಮಿಳುನಾಡಿನ (Tamil Nadu) ಮಹಿಳಾ ಆಟಗಾರ್ತಿಯರ ಮೇಲೆ ದಾಳಿ ನಡೆದಿರುವುದು ಆಘಾತಕಾರಿ. ಪಂಜಾಬ್ ಮತ್ತು ತಮಿಳುನಾಡು ನಡುವಿನ ಕಬಡ್ಡಿ ಪಂದ್ಯದ ವೇಳೆ ಈ ದಾಳಿ ನಡೆದಿದೆ. ದಾಳಿಕೋರರ ಮೇಲೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ನಾನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಜಿ (Punjab Chief Minister Bhagwant Mann G) ಅವರನ್ನು ಒತ್ತಾಯಿಸುತ್ತೇನೆ.” ಎಂದು ಬರೆದುಕೊಂಡಿದ್ದಾರೆ.