‘ಕಬ್ಜ’ ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕಿಚ್ಚ ಸುದೀಪ್

ಬೆಂಗಳೂರು, ಜ. 13: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬಹುನಿರೀಕ್ಷಿತ ‘ಕಬ್ಜ’ ಚಿತ್ರಕ್ಕೆ ಮತ್ತೊಬ್ಬ ಸ್ಟಾರ್ ನಟನ ಎಂಟ್ರಿಯಾಗಿದ್ದು, ಇದರೊಂದಿಗೆ ಚಿತ್ರಕ್ಕೆ ಇನ್ನಷ್ಟು ಬಲ ಬಂದಂತಾಗಿದೆ.

ಆರ್.ಚಂದ್ರು ನಿರ್ದೇಶನದಲ್ಲಿ ತಯಾರಾಗುತ್ತಿರುವ ಕಬ್ಜ ಚಿತ್ರ ಈಗಾಗಲೇ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು, ಇದರ ನಡುವೆ ಸಂಕ್ರಾಂತಿಗೆ ಭರ್ಜರಿ ಸುದ್ದಿ ಕೊಡುವುದಾಗಿ ನಿರ್ದೇಶಕ ಚಂದ್ರು ಘೋಷಿಸಿದ್ದರು. ಇದರ ಬೆನ್ನಲ್ಲೇ ಚಿತ್ರದಲ್ಲಿ ಉಪೇಂದ್ರ ಅವರೊಂದಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸುದ್ದಿ ಬಂದಿದೆ. ಸದ್ಯಕ್ಕೆ ಸುದೀಪ್‌ ಅವರ ಪಾತ್ರವೇನು ಮತ್ತು ಅವರ ಗೆಟಪ್‌ ಹೇಗಿರುತ್ತದೆ ಎಂಬುದನ್ನು ಚಂದ್ರು ಬಹಿರಂಗಪಡಿಸಿಲ್ಲ. ಮುಂಚೆ ನಿಗದಿಯಾದಂತೆ ಸಂಕ್ರಾಂತಿ ಹಬ್ಬದಂದು (ಗುರುವಾರ) ಸುದೀಪ್‌ ಅವರ ಲುಕ್‌ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಕಬ್ಜ ಕಳೆದ ವರ್ಷದ ಆರಂಭದಲ್ಲೇ ಪ್ರಾರಂಭವಾಗಿದ್ದು, ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ಬಿಡುಗಡೆ ಮಾಡಬೇಕೆಂಬುದು ನಿರ್ದೇಶಕ ಚಂದ್ರು ಆಸೆ. ಕೊರೊನಾ ಕಾರಣದಿಂದ ಉಂಟಾದ ಲಾಕ್‌ಡೌನ್‌ ನಿಂದಾಗಿ ನಿಂತಿದ್ದ ಚಿತ್ರೀಕರಣ ಇದೀಗ ಜನವರಿಯ ಕೊನೆಯ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಶ್ರೀ ಸಿದ್ಧೇಶ್ವರ ಎಂಟರ್‌ಪ್ರೈಸಸ್‌ ಬ್ಯಾನರ್‌ನಡಿ ನಿರ್ಮಿಸುತ್ತಿರುವ ಚಿತ್ರದಲ್ಲಿ ಉಪೇಂದ್ರ ಮತ್ತು ಸುದೀಪ್‌ ಅವರ ಜೊತೆಗೆ ಜಗಪತಿ ಬಾಬು, ರಾಹುಲ್‌ ಜಗತಪ್‌, ಅನೂಪ್‌ ರೇವಣ್ಣ, ಜಾನ್‌ ಕೊಕ್ಕಿನ್‌, ರಾಹುಲ್‌ ದೇವ್‌, ನವೀನ್‌, ಕೋಟ ಶ್ರೀನಿವಾಸ್‌ ರಾವ್‌ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತವಿದೆ.

Latest News

ದೇಶ-ವಿದೇಶ

‘ಹರ್ ಘರ್ ತಿರಂಗ’; 10 ದಿನಗಳಲ್ಲಿ 1 ಕೋಟಿ ರಾಷ್ಟ್ರಧ್ವಜ ಮಾರಾಟ ಮಾಡಿದ ಅಂಚೆ ಇಲಾಖೆ!

10 ದಿನಗಳ ಅಲ್ಪಾವಧಿಯಲ್ಲಿ, ಭಾರತ ಅಂಚೆ ಇಲಾಖೆ 1 ಕೋಟಿಗೂ ಹೆಚ್ಚು ರಾಷ್ಟ್ರೀಯ ಧ್ವಜಗಳನ್ನು ಮಾರಾಟ ಮಾಡಿದೆ. ಈ ಧ್ವಜಗಳು, ಅಂಚೆ ಕಚೇರಿಗಳು ಮತ್ತು ಆನ್ಲೈನ್ ಮೂಲಕ ನಾಗರಿಕರಿಗೆ ತಲುಪಿವೆ.

ರಾಜಕೀಯ

“ಕಾಂಗ್ರೆಸ್ ಬಸ್‍ಗೆ ಎರಡು ಸ್ಟೇರಿಂಗ್” : ಸಚಿವ ಡಾ. ಸುಧಾಕರ್

“ಪ್ರಸ್ತುತ ಕಾಂಗ್ರೆಸ್ ಪಕ್ಷ ಈಗ ಡಂಬಲ್ ಡೋರ್ ಬಸ್‍ನಲ್ಲಿ ಪ್ರಯಾಣಿಸುತ್ತಿದೆ. ಈ ಬಸ್‍ನಲ್ಲಿರುವ ಅವರ ಪಕ್ಷದವರ ಪೈಕಿ ಯಾರನ್ನು ಪ್ರಥಮವಾಗಿ ಕೆಳಗಿಳಿಸುತ್ತಾರೋ ತಿಳಿಯದು.

ದೇಶ-ವಿದೇಶ

ಮನೆ ಮತ್ತು ಕಾರ್ಪೊರೇಟ್ ಕಚೇರಿಗಳ ಮೇಲೆ ಶೇ.18 ರಷ್ಟು ಜಿಎಸ್‌ಟಿ ? ; ಏನಿದು ಗೊಂದಲ ಇಲ್ಲಿದೆ ಮಾಹಿತಿ

ಹೊಸ ನಿಯಮಗಳ ಪ್ರಕಾರ, ಜಿಎಸ್‌ಟಿ ನೋಂದಾಯಿತ ಹಿಡುವಳಿದಾರನು ರಿವರ್ಸ್ ಚಾರ್ಜ್ ಮೆಕ್ಯಾನಿಸಂ (RCM) ಅಡಿಯಲ್ಲಿ ತೆರಿಗೆಯನ್ನು ಪಾವತಿಸಲು ಹೊಣೆಗಾರನಾಗಿರುತ್ತಾನೆ.

ಪ್ರಮುಖ ಸುದ್ದಿ

ತಾಜುದ್ದೀನ್ಜುನೈದೀ ಮತ್ತು  ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಗಣ್ಯರ ಸಂತಾಪ

ಪ್ರಖ್ಯಾತ ಗಾಯಕರು, ತಮ್ಮ ಸುಸ್ವರದ ಮೂಲಕ ಕವಿ ಗೀತೆಗಳಿಗೆ ಮೆರುಗು ತಂದುಕೊಟ್ಟಿದ್ದ ಶ್ರೀ ಶಿವಮೊಗ್ಗ ಸುಬ್ಬಣ್ಣ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಗಿದೆ.